ಸಿನಿಮಾ ಅನ್ನೋದು ಕಲರ್ ಫುಲ್ ದುನಿಯಾ. ಇಲ್ಲಿ ಲಕ್ಷಕ್ಕೂ ಕೋಟಿಗೂ ಬೆಲೆ ಇಲ್ಲ. ಒಂದು ಟೇಪ್ ಕಟ್ ಮಾಡೋದಿಕ್ಕೇನೇ ನಟ-ನಟಿಯರು ಲಕ್ಷ ಲಕ್ಷ ಹಣ ಪಡೆಯುತ್ತಾರಂತೆ. ಇನ್ನೂ ನೈಟ್ ಪಾರ್ಟಿ ಅಂದ್ಮೇಲೆ ತುಸು ಡಿಮ್ಯಾಂಡ್ ಇದ್ದೇ ಇರುತ್ತದೆ. ಬಹುಭಾಷಾ ನಟಿ ಕಯಾದು ಲೋಹರ್ ಈಗ ಹಗರಣವೊಂದರಲ್ಲಿ ಲಾಕ್ ಆಗಿದ್ದಾರೆ.
ಕಯಾದು ಲೋಹರ್, ಕನ್ನಡಿಗರು ಚಿರಪರಿಚಿತ ನಟಿ. ಮುಗಿಲ್ ಪೇಟೆ ಸಿನಿಮಾದಲ್ಲಿ ರವಿಚಂದ್ರನ್ ಪುತ್ರ ಮನುರಂಜನ್ ಗೆ ಜೋಡಿಯಾಗಿ ನಟಿಸಿದ್ದಾರೆ. ಇತ್ತೀಚೆಗೆ ಡ್ರ್ಯಾಗನ್ ಸಿನಿಮಾ ಮೂಲಕ ಫೇಮಸ್ ಆದ ಕಯಾದು ಈಗ ಪಾರ್ಟಿವೊಂದಕ್ಕೆ ಭಾಗಿಯಾಗೋದಿಕ್ಕೆ ಬರೋಬ್ಬರಿ 30 ಲಕ್ಷ ಜಾರ್ಜ್ ಮಾಡಿದ್ದಾರೆ.
ಟಾಸ್ಮಾಕ್ ಹಣರಣದಲ್ಲಿ ಕಯಾದು ಹೆಸರು ತಳುಕು ಹಾಕಿಕೊಂಡಿದೆ. ತಮಿಳುನಾಡಿನಲ್ಲಿ ಸಖತ್ ಸದ್ದು ಮಾಡುತ್ತಿರುವ ‘ಟಾಸ್ಮಾಕ್’ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯೊಬ್ಬರಿಂದ ನಟಿ ಕಯಾದು ಲೋಹರ್ 35 ಲಕ್ಷ ರೂಪಾಯಿ ಹಣ ಪಡೆದಿದ್ದು, ಈ ಹಗರಣಕ್ಕೆ ಸಂಬಂಧಪಟ್ಟಂತೆ ಇಡಿ ಇವರನ್ನು ವಿಚಾರಣೆ ನಡೆಸುತ್ತಿದೆ. ಅಲ್ಲದೇ ನಟಿಯ ಹೆಸರು ಚಾರ್ಜ್ಶೀಟ್ನಲ್ಲಿ ನಮೂದಾಗುವ ಸಾಧ್ಯತೆ ಇದೆ.
ಕಯಾದು ಲೋಹರ್ ಕತ್ತಲಿ ಪಾರ್ಟಿ ಮ್ಯಾಟರ್ ಲೀಕ್ ಆಗುತ್ತಿದ್ದಂತೆ ಅಭಿಮಾನಿಗಳು ಶಾಕ್ ಆಗಿದ್ದಾರೆ. ಒಬ್ಬ ಬೆಳೆಯುವ ನಟಿ ಹೀಗೆ ಹೆಸರು ಕೆಡಿಸಿಕೊಂಡ್ರೆ ಅವರ ಮುಂದಿನ ಸಿನಿಮಾ ಭವಿಷ್ಯದ ಕಥೆಯೇನು ಅನ್ನೋದು ಅವರ ಅಭಿಮಾನಿಗಳಲ್ಲಿ ಆತಂಕ ಹೆಚ್ಚಿಸಿದೆ.