ಟಾಲಿವುಡ್ ನ ಕ್ರೇಜಿ ಕಾಂಬಿನೇಷನ್ ಜೂನಿಯರ್ ಎನ್ ಟಿಆರ್ ಹಾಗೂ ಪ್ರಶಾಂತ್ ನೀಲ್ ಪ್ರಾಜೆಕ್ಟ್ ಮೇಲೆ ಭಾರೀ ನಿರೀಕ್ಷೆ ಇದೆ. ಸದ್ಯ ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಮುಂದಿನ ವರ್ಷದ ಜೂನ್ 26ಕ್ಕೆ ಸಿನಿಮಾವನ್ನು ಬೆಳ್ಳಿತೆರೆ ಅಖಾಡಕ್ಕೆ ಇಳಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಅದರಂತೆ ಚಿತ್ರೀಕರಣಕ್ಕೆ ಆವೇಗ ಕೊಟ್ಟಿದೆ.
ಸಲಾರ್ ಬಳಿಕ ಪ್ರಶಾಂತ್ ನೀಲ್ ಕೈಗೆತ್ತಿಕೊಂಡಿರುವ ಈ ಪ್ರಾಜೆಕ್ಟ್ ನಲ್ಲಿ ತಾರಕ್ ಗೆ ಜೋಡಿಯಾಗಿ ಕನ್ನಡತಿ ರುಕ್ಮಿಣಿ ವಸಂತ ನಾಯಕನಾಗಿ ನಟಿಸಲಿದ್ದಾರೆ ಎಂಬ ಸುದ್ದಿ ಇದೆ. ಇದೀಗ ಈ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಕೂಡ ಎಂಟ್ರಿ ಕೊಟ್ಟಿದ್ದಾರಂತೆ. ಆದ್ರೆ ಮತ್ತೋರ್ವ ನಾಯಕಿಯಾಗಿ ಅಲ್ಲ. ಬದಲಿಗೆ ಸ್ಪೆಷಲ್ ಹಾಡೊಂದಕ್ಕೆ ಹೆಜ್ಜೆ ಹಾಕೋದಿಕ್ಕೆ ಚಿತ್ರತಂಡ ಅವರನ್ನು ಅಪ್ರೋಚ್ ಮಾಡಿದೆ.
ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್ ಟಿಆರ್ ಸಿನಿಮಾಗೆ ಡ್ರ್ಯಾಗನ್ ಎಂಬ ಟೈಟಲ್ ಇಡಲಾಗಿದೆ. ಆದ್ರೆ ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಹೀಗಿದ್ದರೂ ಡ್ರ್ಯಾಗನ್ ಶೀರ್ಷಿಕೆ ಫೈನಲ್ ಎನ್ನಲಾಗುತ್ತಿದೆ. ಈ ಚಿತ್ರದ ವಿಶೇಷ ಹಾಡಿನಲ್ಲಿ ಜೂನಿಯರ್ ಎನ್ ಟಿಆರ್ ಜೊತೆ ರಶ್ಮಿಕಾ ಮಂದಣ್ಣ ಕಾಲು ಕುಣಿಸಲಿದ್ದಾರೆ ಎನ್ನಲಾಗುತ್ತಿದೆ.
ರಶ್ಮಿಕಾ ಹಾಗೂ ತಾರಕ್ ಸ್ಪೆಷಲ್ ನಂಬರ್ ಹೇಗಿರಲಿದೆ? ರವಿ ಬಸ್ರೂರ್ ಮ್ಯೂಸಿಕ್ ಕಿಕ್ ಗೆ ಮಂದಣ್ಣ ಕುಣಿಯೋದು ಫಿಕ್ಸಾ ಅಂತಾ ಅಭಿಮಾನಿಗಳು ಕಾತರರಾಗಿದ್ದಾರೆ.