ತಿರುವನಂತಪುರಂ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಸಿದ್ಧ ಶಬರಿಮಲೆ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುವ ಮೊದಲ ಭಾರತೀಯ ರಾಷ್ಟ್ರಪತಿಯಾಗಲಿದ್ದಾರೆ ಎಂಬ ಸುದ್ದಿಯನ್ನು ತಿರುವಾಂಕೂರು ದೇವಸ್ವಂ ಮಂಡಳಿಯ ಮುಖ್ಯಸ್ಥ ಪಿ.ಎಸ್. ಪ್ರಶಾಂತ್ ದೃಢಪಡಿಸಿದ್ದಾರೆ.
ಹೌದು ಮೇ 18ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಕೇರಳಕ್ಕೆ ಆಗಮಿಸಲಿದ್ದು, ಬಳಿಕ ಕೊಟ್ಟಾಯಂ ಜಿಲ್ಲೆಯ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 19ರಂದು ಬೆಳಗ್ಗೆ ಶಬರಿಮಲೆಯ ಬಳಿಯಿರುವ ನೀಲಕ್ಕಲ್ ಹೆಲಿಪ್ಯಾಡ್ಗೆ ಬಂದಿಳಿಯಲಿದ್ದು, ಬಳಿಕ ಪಂಪಾ ಬೇಸ್ ಕ್ಯಾಂಪ್ಗೆ ತೆರಳಿದ್ದಾರೆ.
ಮನೆಯ ಕೀ ಎಲ್ಲಿಡುತ್ತಿದ್ದೀರಾ!? ಈ ದಿಕ್ಕಿನಲ್ಲಿ ಇಡಲೇಬಾರದಂತೆ! ಜ್ಯೋತಿಷ್ಯ ಹೇಳುವುದು ಹೀಗೆ!
ಪಂಪಾ ಬೇಸ್ ಕ್ಯಾಂಪ್ನಿಂದ ದೇವಾಲಯಕ್ಕೆ ತೆರಳುವ ಪ್ರಯಾಣ ವಿಧಾನದ ಕುರಿತು ಅಂತಿಮ ನಿರ್ಧಾರವನ್ನು ಭದ್ರತಾ ವ್ಯವಸ್ಥೆಯ ವಿಶೇಷ ರಕ್ಷಣಾ ಗುಂಪು ತೆಗೆದುಕೊಳ್ಳಲಿದೆ. ರಾಷ್ಟ್ರಪತಿಯೊಬ್ಬರು ಶಬರಿಮಲೆ ದೇಗುಲಕ್ಕೆ ಭೇಟಿ ನೀಡಲು ನಿರ್ಧರಿಸಿದ್ದು ಇದೇ ಮೊದಲು ಎಂದು ತಿರುವಾಂಕೂರು ದೇವಸ್ವಂ ಮಂಡಳಿಯ ಅಧ್ಯಕ್ಷ ಪಿ.ಎಸ್.ಪ್ರಶಾಂತ್ ತಿಳಿಸಿದರು.
ರಾಷ್ಟ್ರಪತಿ ಅವರ ಭೇಟಿಯ ಬಗ್ಗೆ ಕೆಲವು ವಾರಗಳಿಂದ ಗಾಳಿ ಸುದ್ದಿ ಹರಿದಾಡುತ್ತಿದ್ದವು. ಅಧಿಕೃತ ಮಾಹಿತಿ ಬಂದ ನಂತರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ಅವರು ಸಭೆಯನ್ನು ಕರೆಯಲಿದ್ದಾರೆ. ಅಲ್ಲದೇ ನಾವು ದೇವಾಲಯಕ್ಕೆ ತೆರಳುವ ರಸ್ತೆಯ ತುರ್ತು ದುರಸ್ತಿ ಹಾಗೂ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದೇವೆ ಎಂದು ರಾಷ್ಟ್ರಪತಿ ಭೇಟಿಯ ಕುರಿತು ಬಹಿರಂಗಪಡಿಸಿದರು.