ಇತ್ತೀಚಿನ ದಿನಗಳಲ್ಲಿ ಅನಾರೋಗ್ಯಕ್ಕೆ ಒಳಗಾಗುವವರ ಸಂಖ್ಯೆ ಹೆಚ್ಚುತ್ತಿದೆ. ನಾವು ತಿನ್ನುವ ಆಹಾರ, ಒತ್ತಡ, ಮಾನಸಿಕ ಖಿನ್ನತೆ ಇತ್ಯಾದಿಗಳಿಂದಾಗಿ, ಮನುಷ್ಯ ಅನಾರೋಗ್ಯದಿಂದ ಬಳಲುತ್ತಿದ್ದಾನೆ. ಹೀಗಾಗಿ ಕೆಲವು ಆರೋಗ್ಯಕರ ನಿಯಮಗಳನ್ನು ಪಾಲಿಸಿದರೆ, ಸದಾ ನಾವು ಆರೋಗ್ಯವಂತರಾಗಿರಬಹುದು ಎಂದು ತಜ್ಞರು ಹೇಳಿದ್ದಾರೆ. ಅದರಲ್ಲೂ ಪ್ರತಿದಿನ ವಿವಿಧ ರೀತಿಯ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವುದು ಉತ್ತಮ.
ಊಟದ ಬಳಿಕ ಪಾತ್ರೆಗಳನ್ನು ತೊಳೆಯದೇ ಹಾಗೆ ಬಿಡ್ತೀರಾ!? ನೀವು ನೋಡಲೇಬೇಕಾದ ಸ್ಟೋರಿ!
ಅದರಲ್ಲೂ ಜ್ಯೂಸ್ ರೂಪದಲ್ಲಿ ಇವುಗಳನ್ನು ಕುಡಿಯುವುದು ಸೂಕ್ತ. ಹೆಚ್ಚಿನ ಜನರು ಬೀಟ್ರೂಟ್ ಅನ್ನು ಇಷ್ಟಪಡುವುದಿಲ್ಲ. ಆದರೆ ಬೀಟ್ರೂಟ್ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಹೀಗಾಗಿ ಬೀಟ್ರೂಟ್ ತಿನ್ನಲು ಇಷ್ಟಪಡದವರು ಅದನ್ನು ಜ್ಯೂಸ್ ರೂಪದಲ್ಲಿ ಬೆಳಿಗ್ಗೆ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಅನೇಕ ಪ್ರಯೋಜನಗಳಿವೆ.
ಪೋಷಕಾಂಶಗಳು : ಬೀಟ್ರೂಟ್ನಲ್ಲಿ ವಿಟಮಿನ್ ಬಿ6, ವಿಟಮಿನ್ ಸಿ, ಕ್ಯಾಲ್ಸಿಯಂ, ಕಬ್ಬಿಣ, ಫೈಬರ್, ಮ್ಯಾಂಗನೀಸ್, ಪೊಟ್ಯಾಸಿಯಮ್ ಮುಂತಾದ ಅನೇಕ ಅಗತ್ಯ ಪೋಷಕಾಂಶಗಳು ಹೇರಳವಾಗಿವೆ. ಇದರಲ್ಲಿ ಕೊಬ್ಬಿನ ಅಂಶ ಕಡಿಮೆಯಿದೆ. ಶೇ.88ರಷ್ಟು ನೀರಿನ ಅಂಶ ಹೊಂದಿರುತ್ತದೆ. ಇದರಲ್ಲಿ ಅಜೈವಿಕ ನೈಟ್ರೇಟ್‌ಗಳಾದ ವಲ್ಗಾಕ್ಸಾಂಥಿನ್ ಬೆಟಾನಿನ್ ಮುಂತಾದ ವರ್ಣದ್ರವ್ಯಗಳಿವೆ.
ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ : ಅಧಿಕ ರಕ್ತದೊತ್ತಡವು ಪಾರ್ಶ್ವವಾಯು, ಹೃದಯಾಘಾತ ಮುಂತಾದ ಕೆಲವು ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗಬಹುದು. ಆದರೆ, ಬೀಟ್ರೂಟ್ನ ಸೇವನೆಯು ಇವುಗಳನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ ಎಂದು ಕೆಲವು ಅಧ್ಯಯನಗಳು ಸಾಬೀತು ಪಡಿಸಿವೆ. ಇದು ಒಳಗೊಂಡಿರುವ ನೈಟ್ರೇಟ್ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಹೃದಯ ಸಂಬಂಧಿ ಕಾಯಿಲೆಗಳು ಬರುವುದನ್ನ ತಡೆಯಲು ಸಹಕಾರಿಯಾಗಿದೆ.
ಅಥ್ಲೆಟಿಕ್ಗಳಿಗೆ ಹೆಚ್ಚು ಸಹಾಯಕಾರಿ : ಬೀಟ್ರೂಟ್ ಜ್ಯೂಸ್ ಸೇವನೆಯು ಅಥ್ಲೆಟಿಕ್ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ ಎಂದು ಹಲವಾರು ಅಧ್ಯಯನಗಳು ಸಾಬೀತು ಪಡಿಸಿವೆ. ಇದರ ಅರ್ಥ ಇವು ಸ್ಪರ್ಧಿಯಲ್ಲಿ ಸಾಮರ್ಥ್ಯವನ್ನು ಹೆಚ್ಚಿಸಿ, ಉಸಿರಾಟ ಸುಗಮಗೊಳಿಸುತ್ತದೆ. ಇದರ ಜೊತೆಗೆ ಸ್ಪೋರ್ಟ್ಸ್ ಪ್ರಾಕ್ಟೀಸ್ ವೇಳೆ ಎದುರಾಗುವ ಸ್ನಾಯುಗಳ ನೋವು ನಿವಾರಿಸಲು ಬೀಟ್ರೂಟ್ ಜ್ಯೂಸ್ ಹೆಚ್ಚು ಪ್ರಯೋಜನಕಾರಿ.
ಜೀರ್ಣಕ್ರಿಯೆಗೆ ಸಹಕಾರಿ : ತಮ್ಮ ಕರುಳನ್ನು ಹೆಚ್ಚು ಆರೋಗ್ಯವಾಗಿಡುವ ಫೈಬರ್ ಕಂಟೆಂಟ್ ಹೊಂದಿರುವುದರಿಂದ ಬೀಟ್ರೂಟ್ ಆರೋಗ್ಯ ವೃದ್ಧಿಗೆ ಬಹಳ ಸಹಕಾರಿ. ಇದರಲ್ಲಿರುವ ಫೈಬರ್ ಜೀರ್ಣಕ್ರಿಯೆಯನ್ನು ಸುಗಮಗೊಳಿಸಿ ಮಲಬದ್ಧತೆಯಂತಹ ಸಮಸ್ಯೆಗಳಿಂದ ನಮ್ಮನ್ನು ದೂರವಿಡುತ್ತದೆ.
ಕ್ಯಾನ್ಸರ್ ಬರದಂತೆ ತಡೆಯುತ್ತದೆ : ಬೀಟ್ರೂಟ್ ಸೇವನೆಯಿಂದ ಕೆಲವು ರೀತಿಯ ಕ್ಯಾನ್ಸರ್ಗಳು ಬರದಂತೆ ತಡೆಯಬಹುದು ಎಂದು ಕೆಲ ಸೀಮಿತ ಅಧ್ಯಯನಗಳು ತೋರಿಸಿಕೊಟ್ಟಿವೆ. ಅದರಲ್ಲಿರುವ ವರ್ಣದ್ರವ್ಯಗಳು ದೇಹದೊಳಗೆ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೂ, ಈ ಸಂಶೋಧನೆಯು ಪ್ರತ್ಯೇಕವಾದ ಮಾನವ ಜೀವಕೋಶಗಳು ಮತ್ತು ಇಲಿಗಳಿಗೆ ಮಾತ್ರ ಸೀಮಿತವಾಗಿದ್ದು, ಈ ಕುರಿತು ಖಚಿತಪಡಿಸಲು ಮತ್ತಷ್ಟು ಸಂಶೋಧನೆಗಳು ಮತ್ತು ದಾಖಲೆಗಳು ಬೇಕಾಗುತ್ತವೆ.
ಶಕ್ತಿಯುತ ಆ್ಯಂಟಿಆ್ಯಕ್ಸಿಡೆಂಟ್ : ಬೀಟ್ರೂಟ್ನಲ್ಲಿ ಆ್ಯಂಟಿಆ್ಯಕ್ಸಿಡೆಂಟ್ಗಳು ಸಮೃದ್ಧವಾಗಿವೆ. ಇದು ದೇಹಕ್ಕೆ ಉಂಟಾಗಬಹುದಾದ ಹಾನಿಗಳನ್ನ ತಡೆಯುವಲ್ಲಿ ಹೆಚ್ಚು ಪ್ರಯೋಜನಕಾರಿ. ಹಾಗೂ ಇದರಲ್ಲಿರುವ ಆ್ಯಕ್ಸಿಡೇಟಿವ್ ಒತ್ತಡವನ್ನು ನಿವಾರಿಸಲು ಸಹಕಾರಿ. ಇದು ಉರಿಯೂತವನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ ಮತ್ತು ಅಸ್ಥಿಸಂಧಿವಾತ ನೋವಿಗೆ ಗಮನಾರ್ಹ ಪರಿಹಾರ ನೀಡುತ್ತದೆ ಎಂದು ಸಂಶೋಧನೆಗಳು ತೋರಿಸಿ ಕೊಟ್ಟಿವೆ.
ಇದಲ್ಲದೆ, ಕಬ್ಬಿಣ ಮತ್ತು ಫೋಲಿಕ್ ಆಮ್ಲದಿಂದ ಸಮೃದ್ಧವಾಗಿರುವ ಬೀಟ್ರೂಟ್ ರಕ್ತಹೀನತೆ(ಅನೀಮಿಯಾ)ಯನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಇದು ಆಮ್ಲಜನಕವನ್ನು ನಮ್ಮ ದೇಹದ ವಿವಿಧ ಭಾಗಗಳಿಗೆ ಕೊಂಡೊಯ್ಯುವ ಕೆಂಪು ರಕ್ತ ಕಣಗಳ ರಚನೆಯನ್ನು ಹೆಚ್ಚಿಸಲು ಕಾರಣವಾಗಿದೆ.
ಇದು ಗ್ರಹಿಕೆಯನ್ನು ಹೆಚ್ಚಿಸುವ ಮೂಲಕ ಮೆದುಳಿನ ಆರೋಗ್ಯ ಕಾಪಾಡುತ್ತದೆ. ಇದು ವಯಸ್ಸಿಗೆ ಅನುಸಾರವಾಗಿ, ಮೆದುಳಿನಲ್ಲಿ ರಕ್ತದ ಹರಿವನ್ನು ಹೆಚ್ಚಿಸುವ ಮೂಲಕ ಮತ್ತು ಬುದ್ಧಿಮಾಂದ್ಯತೆಯ ಅಪಾಯವನ್ನು ಕಡಿಮೆ ಮಾಡುತ್ತದೆ.
ಹಾಗೂ ಇದು ತೂಕ ಇಳಿಸಲು ಸಹಕಾರಿ ಮತ್ತು ಮಧುಮೇಹಿಗಳಿಗೆ ಸಹ ಪ್ರಯೋಜನಕಾರಿಯಾಗಿದೆ. ನೀವು ಬೀಟ್ರುಟ್ನ ಸೂಪ್, ಸಲಾಡ್, ಜ್ಯೂಸ್, ಉಪ್ಪಿನಕಾಯಿ ಸೇರಿ ವಿವಿಧ ರೂಪಗಳಲ್ಲಿ ಸೇವಿಸಬಹುದು. ಬೀಟ್ರೂಟ್ ಪಲ್ಯ ಹಾಗೂ ಎಲೆಗಳನ್ನು ಚಪಾತಿಯೊಂದಿಗೂ ತಿನ್ನಬಹುದು.