ದೃಷ್ಟಿಬೊಟ್ಟು, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಈ ಧಾರಾವಾಹಿ ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ. ಬಡತನದಲ್ಲಿದ್ದ ಹೆಣ್ಣಿಗೆ ತನ್ನ ಸೌಂದರ್ಯವೇ ಹೇಗೆಲ್ಲಾ ಶತ್ರು ಆಗುತ್ತೇ ಎಂಬ ಕಥೆ ಸುತ್ತ ಸಾಗುವ ಗಟ್ಟಿಕಥೆಯಲ್ಲಿ ವಿಜಯ್ ಸೂರ್ಯ ನಾಯಕ. ಬಳ್ಳಾರಿಯ ದತ್ತಭಾಯ್ ಆಗಿ ನಟಿಸುತ್ತಿರುವ ಅವರೀಗೆ ಜೋಡಿಯಾಗಿ ಅರ್ಪಿತಾ ಮೋಹಿತೆ ನಟಿಸುತ್ತಿದ್ದಾರೆ.
ದೃಷ್ಟಿ ಪಾತ್ರದಲ್ಲಿ ಮೋಹಿತಾ ಅಮೋಘವಾಗಿ ಅಭಿನಯಿಸುತ್ತಿದ್ದಾರೆ. ದೃಷ್ಟಿಯ ಪಾಲಿಗೆ ರೂಪ ಎನ್ನುವುದೇ ಶಾಪವಾಗಿರುತ್ತದೆ. ತನ್ನ ರೂಪವನ್ನೇ ಬದಲಾಯಿಸಿಕೊಂಡು ಅವಳು ಬದುಕುತ್ತಿದ್ದಾಳೆ. ಮುಖಕ್ಕೆ ಮಸಿ ಹಚ್ಚಿ ಪಾತ್ರ ಮಾಡುವ ಅರ್ಪಿತಾ ರಿಯಲ್ ಲೈಫ್ ನಲ್ಲಿ ಸುಂದರವಾಗಿದ್ದಾರೆ.
ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಚೆಂದದ ಫೋಟೋ ಹಂಚಿಕೊಂಡಿದ್ದಾರೆ. ಸೀರೆಯಲ್ಲಿ ಸಖತ್ ಅಗಿ ಕ್ಯಾಮೆರಾಗೆ ಫೋಸ್ ಕೊಟ್ಟಿದ್ದಾರೆ.
ಅರ್ಪಿತಾ ಫೋಟೋಗೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರ ಸಿಗುತ್ತಿದೆ. ಆದಷ್ಟು ಬೇಗ ಸೀರಿಯಲ್ ನಲ್ಲಿ ದೃಷ್ಟಿ ಅಸಲಿ ಮುಖ ತೋರಿಸಿ ಅಂತಾ ಫ್ಯಾನ್ಸ್ ಬೇಡಿಕೆ ಇಡುತ್ತಿದ್ದಾರೆ.