ನವದೆಹಲಿ:- ಭೂಕಂಪಕ್ಕೆ ನಲುಗಿದ ಮ್ಯಾನ್ಮಾರ್ಗೆ ಭಾರತ ನೆರವಾಗಿದೆ. ʻಆಪರೇಷನ್ ಬ್ರಹ್ಮʼ ಹೆಸರಿನಲ್ಲಿ ವಿಮಾನದ ಮೂಲಕ ರಕ್ಷಣಾ ಸಿಬ್ಬಂದಿ, ವೈದ್ಯರು ಹಾಗೂ ಅಗತ್ಯ ವಸ್ತುಗಳನ್ನು ರವಾನಿಸಿದೆ.
ಎಚ್.ಎಂ.ರೇವಣ್ಣ ವಿರುದ್ಧದ ಪ್ರಕರಣ: ದೂರು ಕೊಟ್ರೂ ಖಾಕಿ ನಿರ್ಲಕ್ಷ್ಯ, ಕಮಿಷನರ್ ಮೊರೆ ಹೋದ ಸಂತ್ರಸ್ತೆ!
ಭೂಕಂಪದ ನಂತರ ಕಾರ್ಯಾಚರಣೆಗೆ ಎರಡು NDRF ತಂಡಗಳು ಮತ್ತು ವೈದ್ಯಕೀಯ ಸಿಬ್ಬಂದಿಯೊಂದಿಗೆ 55 ಟನ್ಗಳಿಗೂ ಹೆಚ್ಚು ಪರಿಹಾರ ಸಾಮಗ್ರಿಗಳನ್ನು ರವಾನಿಸಲಾಗಿದೆ.
ಮೊದಲಿಗೆ ಸೇನಾ ವಿಮಾನಗಳ ಮೂಲಕ ಪರಿಹಾರ ಸಾಮಗ್ರಿಗಳನ್ನು ಕಳಿಸಿಕೊಟ್ಟಿದೆ. ನೆರವಿನ ಸಾಮಗ್ರಿ ಹೊತ್ತ ಇನ್ನೂ 2 ವಿಮಾನಗಳು ಶೀಘ್ರ ತೆರಳಲಿವೆ. ರಕ್ಷಣಾ ಕಾರ್ಯಾಚರಣೆಗಾಗಿ 80 ಎನ್ಡಿಆರ್ಎಫ್ ಸಿಬ್ಬಂದಿ ತೆರಳಿದ್ದಾರೆ. ಮೂರನೇ ಎನ್ಡಿಆರ್ಎಫ್ ತಂಡವನ್ನು ಕೋಲ್ಕತ್ತಾದಲ್ಲಿ ಸ್ಟ್ಯಾಂಡ್ಬೈನಲ್ಲಿ ಇರಿಸಲಾಗಿದೆ. ಈ ಬಗ್ಗೆ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.
ಭಾರತದಿಂದ 118 ಫೀಲ್ಡ್ ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿ ಮತ್ತು 2 ನೌಕಾಪಡೆ ಹಡಗು ರವಾನೆ ಆಗಲಿವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.