ನಿಮ್ಮ ದೈನಂದಿನ ಆಹಾರದಲ್ಲಿ ಬಾಳೆಹಣ್ಣನ್ನು ಸೇರಿಸಿದರೆ, ನೀವು ಉತ್ತಮ ಆರೋಗ್ಯ ಫಲಿತಾಂಶಗಳನ್ನು ಕಾಣಬಹುದು. ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್, ವಿಟಮಿನ್-ಎ, ಬಿ, ಸಿ ಮತ್ತು ವಿಟಮಿನ್ ಬಿ6 ಇದೆ. ನೀವು ಅಧಿಕ ತೂಕ ಹೊಂದಿದ್ದರೆ, ಬಾಳೆಹಣ್ಣುಗಳು ನಿಮ್ಮ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಕರುಳನ್ನು ಆರೋಗ್ಯಕರವಾಗಿರಿಸುತ್ತದೆ. ಇದು ನರಮಂಡಲವನ್ನು ಬಲಪಡಿಸುತ್ತದೆ. ತಜ್ಞರ ಪ್ರಕಾರ, ಬಾಳೆಹಣ್ಣುಗಳು ಹಣ್ಣಾಗುತ್ತಿದ್ದಂತೆ ಪೋಷಕಾಂಶಗಳ ಮಟ್ಟವು ನಿರಂತರವಾಗಿ ಹೆಚ್ಚಾಗುತ್ತದೆ. ಬಿಳಿ ರಕ್ತ ಕಣಗಳಿಗೆ ಹಸಿರು ಬಾಳೆಹಣ್ಣುಗಳಿಗಿಂತ ಕಪ್ಪು ಬಾಳೆಹಣ್ಣುಗಳು 8 ಪಟ್ಟು ಹೆಚ್ಚು ಪರಿಣಾಮಕಾರಿ.
ವಾಹನ ಸವಾರರ ಗಮನಕ್ಕೆ: ಬೆಂಗಳೂರಿನ ಈ ಮೂರು ಫ್ಲೈ ಓವರ್ 3 ದಿನ ಬಂದ್ – ಯಾಕೆ?
ಬಾಳೆಹಣ್ಣಿನಲ್ಲಿ ಅಪಾರವಾದ ಪೌಷ್ಟಿಕಾಂಶಗಳು ಇರಲಿದ್ದು, ಪೊಟ್ಯಾಶಿ ಯಮ್, ವಿಟಮಿನ್ ಸಿ ಜೊತೆಗೆ ವಿಟಮಿನ್ ಬಿ6, ನಾರಿನ ಪ್ರಮಾಣ ಮತ್ತು ಇನ್ನಿತರ ಅಂಶಗಳು ಸಾಕಷ್ಟು ಸಿಗುತ್ತವೆ. ಎಲ್ಲವೂ ಸಹ ನಮ್ಮ ದೇಹಕ್ಕೆ ಸಮರ್ಪಕವಾಗಿ ಬೇಕಾದ ಪೌಷ್ಟಿಕ ಸತ್ವಗಳೇ ಆಗಿವೆ.
ಬಾಳೆಹಣ್ಣಿನಲ್ಲಿ ಪ್ರಮುಖವಾಗಿ ಪೊಟ್ಯಾಶಿಯಮ್ ಅಂಶ ಸಿಗುತ್ತದೆ. ಇದು ನಮ್ಮ ದೇಹದ ಸೋಡಿಯಂ ಅಂಶವನ್ನು ಸಮತೋಲನ ಮಾಡಿ ನಮಗೆ ರಕ್ತದ ಒತ್ತಡ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ. ಇದರಿಂದ ನಮಗೆ ಯಾವುದೇ ತರಹದ ಹೃದಯದ ಸಮಸ್ಯೆ ಬರುವುದಿಲ್ಲ ಮತ್ತು ಪಾರ್ಶ್ವ ವಾಯು ಕೂಡ ಕಾಣಿಸುವುದಿಲ್ಲ
ಬಾಳೆಹಣ್ಣಿನಲ್ಲಿ ಕಂಡುಬರುವ ನಾರಿನ ಪ್ರಮಾಣ ಮುಖ್ಯವಾಗಿ ನಮ್ಮ ಕರುಳಿನ ಸಂಚಲನವನ್ನು ಹೆಚ್ಚು ಮಾಡುವ ಪೆಕ್ಟ್ಟಿನ್ ಪ್ರಮಾಣವನ್ನು ಹೆಚ್ಚಾಗಿ ಒಳಗೊಂಡಿದ್ದು, ಮಲಬದ್ಧತೆ ಸಮಸ್ಯೆಯನ್ನು ದೂರ ಮಾಡುತ್ತದೆ. ನಮ್ಮ ಸಂಪೂರ್ಣ ದೈಹಿಕ ಆರೋಗ್ಯಕ್ಕೆ ಇದು ಬಹಳ ಒಳ್ಳೆಯದು ಎಂದು ಹೇಳಬಹುದು.
ನೀವು ಒಂದು ವೇಳೆ ಭಾರವಾದ ಆಹಾರ ಸೇವನೆ ಮಾಡಿದ್ದರೆ, ನಿಮಗೆ ಒಂದು ವೇಳೆ ಹೊಟ್ಟೆ ಉಬ್ಬರ ಕಂಡು ಬರುತ್ತಿದ್ದರೆ, ನಿಮ್ಮ ಜೀರ್ಣಾಂಗ ಆರೋಗ್ಯವನ್ನು ಇದು ಅಭಿವೃದ್ಧಿಪಡಿಸುತ್ತದೆ. ಇದರಿಂದ ನಿಮ್ಮ ದೇಹ ತುಂಬಾ ಹಗುರವಾಗುತ್ತದೆ ಮತ್ತು ಕೆಟ್ಟು ಹೋದ ಹೊಟ್ಟೆ ಸರಿ ಹೋಗುತ್ತದೆ.
ಪೊಟ್ಯಾಶಿಯಮ್ ಅಂಶ ಹೆಚ್ಚಾಗಿರುವ ಬಾಳೆಹಣ್ಣನ್ನು ಸೇವನೆ ಮಾಡು ವುದರಿಂದ ನಮ್ಮ ರಕ್ತದ ಒತ್ತಡ ಕಡಿಮೆಯಾಗುತ್ತದೆ. ಇದರಿಂದ ಯಾವುದೇ ಸಂದರ್ಭದಲ್ಲಿ ಎದುರಾಗಬಹುದಾದ ಹೃದಯದ ಸಮಸ್ಯೆ ಇರುವುದಿಲ್ಲ ಮತ್ತು ಪಾರ್ಶ್ವವಾಯು ಸಹ ಕಂಡುಬರುವುದಿಲ್ಲ.
ಬಾಳೆಹಣ್ಣಿನಲ್ಲಿ ಕ್ಯಾಲೋರಿಗಳು ಕಡಿಮೆ ಇರುತ್ತವೆ. ಕೊಬ್ಬಿನ ಅಂಶ ಕೂಡ ಕಡಿಮೆ ಇರುತ್ತದೆ. ಆದರೆ ನಾರಿನ ಪ್ರಮಾಣ ಜಾಸ್ತಿ ಇರುತ್ತದೆ. ಹೀಗಾಗಿ ಬಾಳೆಹಣ್ಣು ಸೇವನೆ ಮಾಡುವುದರಿಂದ ಹೊಟ್ಟೆ ತುಂಬಿದ ಅನುಭವ ನಿಮ್ಮದಾಗುತ್ತದೆ. ದೇಹದ ತೂಕ ಕೂಡ ಅಷ್ಟೇ ಚೆನ್ನಾಗಿ ನಿರ್ವಹಣೆ ಆಗುತ್ತದೆ.
ಬಾಳೆಹಣ್ಣಿನಲ್ಲಿ ವಿಟಮಿನ್ ಬಿ6 ಹೆಚ್ಚಾಗಿರುವ ಕಾರಣದಿಂದ ಮೆದುಳಿನ ಆರೋಗ್ಯಕ್ಕೆ ಮತ್ತು ನರಮಂಡಲಗಳ ಅಭಿವೃದ್ಧಿಗೆ ನೆರವಾಗುವ ಅಂಶಗಳು ಇದರಲ್ಲಿ ಸಿಗುತ್ತವೆ. ಇದು ಮಾನಸಿಕವಾಗಿ ನಮ್ಮ ಆರೋಗ್ಯ ವನ್ನು ಅಭಿವೃದ್ಧಿ ಪಡಿಸುತ್ತದೆ. ಅಂದರೆ ಮಾನಸಿಕ ಒತ್ತಡ ಮತ್ತು ಖಿನ್ನತೆಯನ್ನು ದೂರ ಮಾಡುತ್ತದೆ.
ಬಾಳೆಹಣ್ಣಿನಿಂದ ವಿವಿಧ ಬಗೆಯ ಫೇಸ್ ಪ್ಯಾಕ್ ಮಾಡಿಕೊಂಡು ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಹೇಳಲಾಗುತ್ತದೆ. ಏಕೆಂದರೆ ಇದು ಚರ್ಮದ ವಯಸ್ಸಾಗುವಿಕೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಮತ್ತು ಯೌವನವನ್ನು ಹೆಚ್ಚಾಗುವಂತೆ ಮಾಡುತ್ತದೆ. ಬಾಳೆ ಹಣ್ಣು ಚರ್ಮಕ್ಕೆ ಫ್ಲೆಕ್ಸಿಬಲ್ ಗುಣವನ್ನು ಕೊಡುತ್ತದೆ.
ಆರೋಗ್ಯಕರವಾದ ರೀತಿಯಲ್ಲಿ ಬಾಳೆಹಣ್ಣು ನಿಮ್ಮ ಸಿಹಿ ತಿನ್ನುವ ಅಭ್ಯಾಸವನ್ನು ಕಡಿಮೆ ಮಾಡಿಸುತ್ತದೆ. ಅಂದರೆ ಹೆಚ್ಚು ಸಿಹಿ ತಿಂದು ನಿಮ್ಮ ಶುಗರ್ ಕಂಟ್ರೋಲ್ ತಪ್ಪುವ ಸಾಧ್ಯತೆ ಬಾಳೆಹಣ್ಣಿನಿಂದ ಕಡಿಮೆಯಾಗುತ್ತದೆ. ಏಕೆಂದರೆ ಬಾಳೆಹಣ್ಣಿನಲ್ಲಿ ನೈಸರ್ಗಿಕವಾಗಿ ಸಿಹಿ ಪ್ರಮಾಣ ಮೊದಲೇ ಇರುತ್ತದೆ. ನೀವು ತಯಾರು ಮಾಡುವ ವಿವಿಧ ಆಹಾರ ಪದಾರ್ಥಗಳಲ್ಲಿ ಸಿಹಿಗಾಗಿ ಸಕ್ಕರೆ ಬದಲು ಬಾಳೆಹಣ್ಣನ್ನು ಬಳಸಬಹುದು.
ಬಾಳೆಹಣ್ಣಿನಲ್ಲಿ ಕಂಡು ಬರುವ ಅಗಾಧ ಪ್ರಮಾಣದ ನಾರಿನಾಂಶವು ಕರುಳಿನ ಭಾಗಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಅಂಶ ಸಿಕ್ಕಂತಾಗಿ ಕರುಳು ಚೆನ್ನಾಗಿ ಕೆಲಸ ಮಾಡಲು ಪ್ರಾರಂಭ ಮಾಡುತ್ತದೆ. ಇದರಿಂದ ಜೀರ್ಣಕ್ರಿಯೆಗೆ ಸಂಬಂಧಪಟ್ಟ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ ಎಂದು ಆರೋಗ್ಯ ತಜ್ಞರಾದ ಲವ್ನೀತ್ ಬಾತ್ರ ಅವರು ಸಲಹೆ ನೀಡುತ್ತಾರೆ.