ದೇಹ ಆರೋಗ್ಯದಲ್ಲಿರಬೇಕಾದ್ರೆ ಪೋಷಕಾಂಶಗಳು, ವಿಟಮಿನ್ಗಳು ಬೇಕಾಗುತ್ತದೆ. ಕಿವಿ ಹಣ್ಣುಗಳಲ್ಲಿ ಇದು ಹೆಚ್ಚಾಗಿಯೇ ಇದೆ ಎಂದು ಹೇಳಲಾಗ್ತದೆ. ಕಿವಿಯಲ್ಲಿ ಕ್ಯಾಲೋರಿಗಳ ಪ್ರಮಾಣವು ತುಂಬಾ ಕಡಿಮೆಯಾಗಿದೆ, ತಮ್ಮ ಫಿಟ್ನೆಸ್ ಬಗ್ಗೆ ವಿಶೇಷ ಕಾಳಜಿ ವಹಿಸುವ ಜನರು ಕಿವಿ ಹಣ್ಣನ್ನು ತಿನ್ನಬೇಕು. ಪೊಟ್ಯಾಸಿಯಮ್, ವಿಟಮಿನ್ ಸಿ ಮತ್ತು ಫೈಬರ್ ಈ ಹಣ್ಣಿನಲ್ಲಿ ಕಂಡುಬರುತ್ತದೆ, ಇದು ನಮ್ಮ ದೇಹಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಪ್ರತಿದಿನ ಮಧ್ಯಮ ಗಾತ್ರದ ಕಿವಿ ತಿನ್ನುವುದು ನಿಮಗೆ ಸಾಕಾಗುತ್ತದೆ.
ಮಹಿಳೆಯರಲ್ಲಿ ಹೃದಯಾಘಾತ ಹೆಚ್ಚಾಗಲು ಕಾರಣ ಈ ಮಾತ್ರೆ ; ಈ ಬಗ್ಗೆ ಇರಲಿ ಎಚ್ಚರ..
ಕಿವಿ ಹಣ್ಣು ವಿಟಮಿನ್ ಇ, ಕೆ ಮತ್ತು ಪೊಟ್ಯಾಶಿಯಂನ ಅತ್ಯುತ್ತಮ ಮೂಲ. ಅದರಲ್ಲಿ ಹಣ್ಣಿನ ಸಕ್ಕರೆ ಪ್ರಮಾಣವು ಕಡಿಮೆ ಇರುವುದರಿಂದ ಮಧುಮೇಹಿಗಳಿಗೆ ಸೂಕ್ತ ಹಣ್ಣು. ಅಧಿಕ ಶುಗರ್ ಲೆವಲ್ ನಿಯಂತ್ರಿಸಲು ಸಹಾಯ ಮಾಡುವ ಈ ಹಣ್ಣಿನ ಹೆಸರು ಕಿವಿ. ಹೊರನೋಟಕ್ಕೆ ಸಪೋಟದಂತೆ ಕಾಣುವ ಈ ಹಣ್ಣು ಒಳಗಿನಿಂದ ಹಸಿರಾಗಿದ್ದು ರುಚಿಯಲ್ಲಿ ಸ್ವಲ್ಪ ಹುಳಿಯಾಗಿದೆ. ಆಂಟಿ-ಆಕ್ಸಿಡೆಂಟ್‌ಗಳು ಮತ್ತು ವಿಟಮಿನ್ ಸಿ ಈ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ.
ಕಿವಿ ಹಣ್ಣು ಸೇವನೆಯು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದು ಡೆಂಗ್ಯೂ ಮುಂತಾದ ರೋಗಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ದೇಹದಲ್ಲಿನ ರಕ್ತದ ಪ್ಲೇಟ್ಲೆಟ್‌ಗಳ ಸಂಖ್ಯೆಯು ವೇಗವಾಗಿ ಹೆಚ್ಚಾಗಲು ಪ್ರಾರಂಭಿಸುತ್ತದೆ.
ಮಧುಮೇಹ ಹೊಂದಿದ್ದರೆ ತ್ವರಿತ ತೂಕ ಹೆಚ್ಚಾಗುವ ಅಥವಾ ನಷ್ಟದ ಸಮಸ್ಯೆಯನ್ನು ಎದುರಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಕಿವಿ ಸೇವನೆಯು ತುಂಬಾ ಉಪಯುಕ್ತವಾಗಿದೆ. ಇದರಲ್ಲಿರುವ ಹೇರಳವಾದ ಫೈಬರ್ ಜೀರ್ಣಕಾರಿ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ದೇಹದ ತೂಕ ನಿಯಂತ್ರಣದಲ್ಲಿರುತ್ತದೆ.
ರಕ್ತದಲ್ಲಿನ ಸಕ್ಕರೆಯ ಸಮಸ್ಯೆ ಇರುವವರು ನಿಯಮಿತವಾಗಿ ಕಿವಿ ಸೇವಿಸಬೇಕು. ಪ್ರತಿದಿನ ಈ ಹಣ್ಣನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ನಿಯಂತ್ರಣದಲ್ಲಿ ಉಳಿಯುತ್ತದೆ ಮತ್ತು ಅದು ಹೆಚ್ಚಾಗುವುದಿಲ್ಲ.
ಕಿವಿ ಹಣ್ಣು ಆರೋಗ್ಯಕ್ಕೆ ಒಳ್ಳೆಯದು. ರಕ್ತಹೀನತೆ, ವಿಟಮಿನ್ ಬಿ ಕೊರತೆ, ವೈರಲ್ ಸೋಂಕುಗಳನ್ನು ಗುಣಪಡಿಸಲು ಸಹಕಾರಿ. ಉರಿಯೂತ ನಿವಾರಕ, ಉತ್ಕರ್ಷಣ ನಿರೋಧಕಗಳ ಜೊತೆಗೆ ವಿಟಮಿನ್ ಬಿ6, ವಿಟಮಿನ್ ಸಿ, ಫೈಬರ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಕಾರ್ಬೋಹೈಡ್ರೇಟ್‌ಗಳು, ನೀರು, ರಂಜಕ, ಮೆಗ್ನೀಸಿಯಮ್, ತಾಮ್ರ, ಸತು, ಬೀಟಾ ಕ್ಯಾರೋಟಿನ್ ಇತ್ಯಾದಿಗಳು ಇದ್ರಲ್ಲಿವೆ.