ನಮ್ಮ ಅನಾರೋಗ್ಯಕರ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಚಿಕ್ಕ ವಯಸ್ಸಿನಲ್ಲಿಯೇ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಂಡುಬರುತ್ತಿದೆ. ಇದನ್ನು ಸರಿಯಾಗಿ ಎದುರಿಸುವುದಕ್ಕೂ ನಮ್ಮಿಂದ ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ನಮ್ಮ ಜೀವನ ಹದಗೆಡುತ್ತಿದೆ. ಅದರಲ್ಲಿಯೂ ಇತ್ತೀಚಿನ ವರ್ಷಗಳಲ್ಲಿ ಅಧಿಕ ರಕ್ತದೊತ್ತಡ ಸಮಸ್ಯೆ ಹೆಚ್ಚಾಗುತ್ತಿದ್ದು ಇದರಿಂದ ಹೃದಯಾಘಾತದಂತಹ ಮಾರಣಾಂತಿಕ ಕಾಯಿಲೆಗಳು ಅಧಿಕವಾಗಿದೆ. ಹಾಗಾಗಿ ಎಲ್ಲಕಿಂತ ಮೊದಲು ನಮ್ಮ ಆಹಾರ ಪದ್ದತಿಯನ್ನು ಸರಿಮಾಡಿಕೊಳ್ಳಬೇಕಾಗಿದೆ.
ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಗೆಜೆಟ್ ಅಧಿಸೂಚನೆ ಹೊರಡಿಸಿ: ಕೇಂದ್ರಕ್ಕೆ ಡಿಸಿಎಂ ಡಿಕೆಶಿ ಮನವಿ
ನಿತ್ಯವೂ ಬೆಳಗ್ಗೆ ಮೂರು ಬಾದಾಮಿ ತಿಂದರೆ ಅದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ದೇಹಕ್ಕೆ ಸಿಗುವುದು. ಮೂರು ಬಾದಾಮಿ ನಿತ್ಯವೂ ಸೇವನೆ ಮಾಡಿದರೆ ಆಗ ದೇಹಕ್ಕೆ ಯಾವೆಲ್ಲಾ ಲಾಭಗಳು ಸಿಗುವುದು ಎಂದು ನಾವು ನಿಮಗೆ ತಿಳಿಯದೆ ಇರುವ ವಿಚಾರಗಳನ್ನು ತಿಳಿಸಿಕೊಡಲಿದ್ದೇವೆ.
ಬಾದಾಮಿಯಲ್ಲಿ ರಿಬೊಫ್ಲಾವಿನ್ ಮತ್ತು ಎಲ್ ಕಾರ್ನಿಟೈನ್ ಎನ್ನುವ ಪೋಷಕಾಂಶವಿದ್ದು, ಇದು ಮೆದುಳಿನ ಕಾರ್ಯವನ್ನು ಸುಧಾರಣೆ ಮಾಡಲು ಸಹಕಾರಿ ಆಗಿದೆ.
ಈ ಅಂಶಗಳು ಮೆದುಳಿನ ಉರಿಯೂತ ಕಡಿಮೆ ಮಾಡುವುದು ಮತ್ತು ಅಲ್ಝೈಮರ್ ನಂತಹ ನರ ಅವನತಿಯ ಅಪಾಯವನ್ನು ಕಡಿಮೆ ಮಾಡುವುದು ಎಂದು ಜನರ್ಲ್ ಆಫ್ ನ್ಯೂಟ್ರಿಷನ್ ನಲ್ಲಿ ಪ್ರಕಟಿಸಲ್ಪಟ್ಟ ಅಧ್ಯಯನವು ಹೇಳಿವೆ.
ಬಾದಾಮಿ ಸೇವನೆ ಮೂಲಕ ದಿನದ ಆರಂಭ ಮಾಡಿದರೆ ಆಗ ಖಂಡಿತವಾಗಿಯೂ ಬುದ್ಧಿಯು ಸೂಕ್ಷ್ಮವಾಗುವುದು
ಸಂಪೂರ್ಣ ಆರೋಗ್ಯವು ಚೆನ್ನಾಗಿರಬೇಕಾದರೆ, ಆಗ ಜೀರ್ಣಕ್ರಿಯೆ ವ್ಯವಸ್ಥೆಯು ಸರಿಯಾಗಿ ಇರಬೇಕು. ಬಾದಾಮಿಯ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಸುಗಮವಾಗಿಸುವುದು.
ಇದರಲ್ಲಿ ನಾರಿನಾಂಶವು ಉತ್ತಮ ಪ್ರಮಾಣದಲ್ಲಿದ್ದು, ಇದು ಕರುಳಿನ ಕ್ರಿಯೆಗಳನ್ನು ಸರಾಗವಾಗಿಸಿ, ಮಲಬದ್ಧತೆ ತಪ್ಪಿಸುವುದು. ಬಾದಾಮಿಯಲ್ಲಿ ಇರುವ ಪ್ರಿಬಯೋಟಿಕ್ ಅಂಶವು ಹೊಟ್ಟೆಯಲ್ಲಿ ಒಳ್ಳೆಯ ಬ್ಯಾಕ್ಟೀರಿಯಾ ಬೆಳೆಯಲು ಸಹಕಾರಿ ಮತ್ತು ಜೀರ್ಣಕ್ರಿಯೆ ಆರೋಗ್ಯವನ್ನು ಇದು ವರ್ಧಿಸುವುದು.
ಏಕಪರ್ಯಾಪ್ತ ಕೊಬ್ಬಿನಾಮ್ಲವು ಬಾದಾಮಿಯಲ್ಲಿದ್ದು, ಇದು ಹೃದಯದ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಇದು ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್(ಎಲ್ಡಿಎಲ್) ಕಡಿಮೆ ಮಾಡಿ, ಒಳ್ಳೆಯ ಕೊಲೆಸ್ಟ್ರಾಲ್(ಎಚ್ಡಿಎಲ್) ಹೆಚ್ಚಿಸುವುದು ಎಂದು ಅಧ್ಯಯನಗಳು ತಿಳಿಸಿವೆ.
ನಿತ್ಯವೂ ಬೆಳಗ್ಗೆ ಮೂರು ಬಾದಾಮಿ ಸೇವನೆ ಮಾಡಿದರೆ ಆಗ ಇದರಿಂದ ಹೃದಯರಕ್ತನಾಳದ ಆರೋಗ್ಯ ಕಾಪಾಡಬಹುದು ಮತ್ತು ಹೃದಯದ ಕಾಯಿಲೆಗಳ ಅಪಾಯ ತಗ್ಗಿಸಬಹುದು
ಮಧುಮೇಹ ತಡೆಯಲು ಮತ್ತು ತೂಕ ನಿರ್ವಹಿಸಲು ರಕ್ತದಲ್ಲಿನ ಸಕ್ಕರೆ ಮಟ್ಟವವನ್ನು ನಿಯಂತ್ರಿಸುವುದು ಅಗತ್ಯ. ಬಾದಾಮಿಯಲ್ಲಿ ಗ್ಲೈಸೆಮಿಕ್ಸ್ ಇಂಡೆಕ್ಸ್ ತುಂಬಾ ಕಡಿಮೆ ಇದ್ದು, ಇದು ಹಠಾತ್ ಆಗಿ ಸಕ್ಕರೆ ಮಟ್ಟವು ಏರಿಕೆಯಾಗದಂತೆ ನೋಡಿಕೊಳ್ಳುವುದು. ಬಾದಾಮಿಯಲ್ಲಿ ಇರುವಂತಹ ಮೆಗ್ನಿಶಿಯಂ ಅಂಶವು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುವುದು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಇದು ತುಂಬಾ ಸಹಕಾರಿ ಆಗಿದೆ.
ಚರ್ಮದ ಕಾಂತಿಯು ನೈಸರ್ಗಿಕವಾಗಿ ಹೆಚ್ಚಬೇಕು ಎಂದು ಭಾವಿಸಿದ್ದರೆ ಆಗ ನೀವು ಬಾದಾಮಿಯನ್ನು ಸೇವನೆ ಮಾಡಿ.
ಇದರಲ್ಲಿ ವಿಟಮಿನ್ ಇ ಅಂಶವಿದ್ದು, ಇದು ಪ್ರಬಲ ಆ್ಯಂಟಿಆಕ್ಸಿಡೆಂಟ್ ಆಗಿ ಕೆಲಸ ಮಾಡುವುದು ಮತ್ತು ಚರ್ಮದ ಅಂಗಾಂಶಗಳಿಗೆ ಆಗುವ ಹಾನಿ ತಪ್ಪಿಸಿ, ತ್ವಚೆಯು ಯೌವನಯುತ ವಾಗಿರುವಂತೆ ಮಾಡುವುದು. ನಿಯಮಿತವಾಗಿ ಬಾದಾಮಿ ಸೇವನೆ ಮಾಡಿದರೆ ಆಗ ಇದರಿಂದ ಚರ್ಮದ ತೇವಾಂಶ ಮತ್ತು ಸ್ಥಿತಿಸ್ಥಾಪ ಕತ್ವ ಹೆಚ್ಚಾಗುವುದು.
ದೈಹಿಕವಾಗಿ ಚಟುವಟಿಕೆಯಿಂದ ಇರಲು ಮೂಳೆಗಳು ಬಲಿಷ್ಠವಾಗಿ ಇರಬೇಕು ಮತ್ತು ಬಾದಾಮಿಯು ಮೂಳೆಗಳನ್ನು ಬಲಿಷ್ಠವಾಗಿಸುವುದು. ಇದರಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಮತ್ತು ಪೋಸ್ಪರಸ್ ಇರುವ ಕಾರಣದಿಂದ ಮೂಳೆಗಳ ಆರೋಗ್ಯ ಕಾಪಾಡಲು ಸಹಕಾರಿ. ಈ ಖನಿಜಾಂಶಗಳು ಮೂಳೆಯ ಸಾಂದ್ರತೆ ಹೆಚ್ಚಿಸುವುದು ಮತ್ತು ಮೂಳೆಗಳ ಮುರಿತ ಕಡಿಮೆ ಮಾಡುವುದು.
ಬಾದಾಮಿಯಲ್ಲಿ ಪ್ರೋಟೀನ್ ಮತ್ತು ನಾರಿನಾಂಶವು ಇದ್ದು, ಇದು ಹೊಟ್ಟೆ ತುಂಬಿದಂತೆ ಮಾಡುವುದು ಮತ್ತು ಕ್ಯಾಲರಿ ಸೇವನೆ ಕಡಿಮೆ ಮಾಡುವುದು.
ಬಾದಾಮಿಯನ್ನು ಆಹಾರ ಕ್ರಮದಲ್ಲಿ ಸೇರ್ಪಡೆ ಮಾಡಿದರೆ, ಆಗ ಇದು ದೇಹ ತೂಕ ಇಳಿಸಲು ಸಹಕಾರಿ ಮತ್ತು ತೂಕ ಏರಿಕೆ ತಗ್ಗಿಸುವುದು. ಮೂರು ಬಾದಾಮಿ ಸೇವಿಸಿದರೆ ಆಗ ಇದು ಹಸಿವು ಕಡಿಮೆ ಮಾಡುವುದು ಮತ್ತು ತೂಕ ನಿರ್ವಹಣೆಗೆ ಇದು ಸಹಕಾರಿ ಆಗಿದೆ.
ಕೂದಲಿನ ಆರೋಗ್ಯಕ್ಕೆ ಬೇಕಾಗಿರುವ ಅಂಶಗಳು ಬಾದಾಮಿಯಲ್ಲಿದೆ. ಬಾದಾಮಿಯಲ್ಲಿ ಇರುವ ಬಯೋಟಿನ್ ಅಂಶವು ವಿಟಮಿನ್ ಬಿ ಆಗಿದ್ದು, ಇದು ಕೂದಲಿನ ಬೆಳವಣಿಗೆ ಮತ್ತು ಬಲಪಡಿಸಲು ಸಹಕಾರಿ.
ಬಯೋಟಿನ್ ಕೊರತೆ ಇದ್ದರೆ ಆಗ ಕೂದಲು ತೆಳುವಾಗುವುದು. ಬಾದಾಮಿ ಸೇವಿಸಿದರೆ ಆಗ ಇದು ಬಯೋಟಿನ್ ಕೊರತೆ ನೀಗಿಸಿ, ಕೂದಲು ಆರೋಗ್ಯಕಾರಿಯಾಗಲು ಸಹಕಾರಿ.
ಅನಾರೋಗ್ಯ ವಿರುದ್ಧ ಹೋರಾಡಲು ಪ್ರತಿರೋಧಕ ಶಕ್ತಿಯು ಬಲಿಷ್ಠವಾಗಿರುವುದು ಅತೀ ಅಗತ್ಯ ಮತ್ತು ಬಾದಾಮಿಯು ಇದನ್ನು ಮಾಡುವುದು.
ವಿಟಮಿನ್ ಇಯಂತಹ ಆ್ಯಂಟಿಆಕ್ಸಿಡೆಂಟ್ ನ್ನು ಹೊಂದಿರುವ ಬಾದಾಮಿಯು ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡುವುದು ಮತ್ತು ಪ್ರತಿರೋಧಕ ಶಕ್ತಿ ವೃದ್ಧಿಸುವುದು. ನಿಯಮಿತವಾಗಿ ಬಾದಾಮಿ ಸೇವಿಸಿದರೆ, ಆಗ ಇದು ಪ್ರತಿರೋಧಕ ಶಕ್ತಿ ಹೆಚ್ಚಿಸುವುದು ಎಂದು ಅಧ್ಯಯನಗಳು ಹೇಳಿವೆ.
ದೀರ್ಘಕಾಲಿಕ ಉರಿಯೂತದ ಸಮಸ್ಯೆಯು ವಿವಿಧ ಬಗೆಯ ಆರೋಗ್ಯ ಸಮಸ್ಯೆಗಳಾಗಿರುವ ಹೃದಯದ ಕಾಯಿಲೆ ಮತ್ತು ಸಂಧಿವಾತಕ್ಕೆ ಕಾರಣವಾಗುವುದು.
ಬಾದಾಮಿಯಲ್ಲಿ ಉರಿಯೂತ ಶಮನಕಾರಿ ಅಂಶಗಳಾಗಿರುವ ಪಾಲಿಫೆನಾಲ್ ಮತ್ತು ಒಮೆಗಾ-೩ ಕೊಬ್ಬಿನಾಮ್ಲವು ಇದೆ. ಇದು ಉರಿಯೂತ ಕಡಿಮೆ ಮಾಡುವುದು ಮತ್ತು ಸಂಪೂರ್ಣ ಆರೋಗ್ಯ ಕಾಪಾಡಲು ಸಹಕಾರಿ ಆಗಿದೆ.