ಶಿವಮೊಗ್ಗ : ಶಾಲೆ ಕಾಂಪೌಂಡ್ ನಿರ್ಮಾಣಕ್ಕೆ ಶಿಕ್ಷಣ ಸಚಿವ ಮಧುಬಂಗಾರಪ್ಪ ಶ್ರಮದಾನ ಮಾಡಿದರು. ಸ್ವಕ್ಷೇತ್ರದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ಪಿಕಾಸಿ, ಗುದ್ದಲಿ ಹಿಡಿದು ಕಾಂಪೌಂಡ್ ನಿರ್ಮಾಣಕ್ಕೆ ಗುಂಡಿ ತೆಗೆದಿದ್ದು ವಿಶೇಷವಾಗಿತ್ತು.
ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಹುರಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಪೌಂಡ್ ನಿರ್ಮಾಣಕ್ಕಾಗಿ ಕೆಲಸ ನಡೆಯುತಿದ್ದು, ಈ ವೇಳೆ ಮಧು ಬಂಗಾರಪ್ಪ ಗುದ್ದಲಿಯಲ್ಲಿ ಬುಟ್ಟಿಗೆ ಮಣ್ಣು ತುಂಬಿ, ಬೇರೆಡೆ ಹೊತ್ತು ಹಾಕಿದರು. ಸಚಿವರಿಗೆ ಪಕ್ಷದ ಮುಖಂಡರು ಹಾಗೂ ಗ್ರಾಮಸ್ಥರಿಂದಲೂ ಸಾಥ್.
ಇದೇ ವೇಳೆಮಾತನಾಡಿದ ಸಾಂಖ್ಯಿಕ ಸಚಿವ ಡಿ.ಸುಧಾಕರ್, ಸಚಿವ ಮಧು ಬಂಗಾರಪ್ಪ ಕರೆಯ ಮೇರೆಗೆ ಸೊರಬಕ್ಕೆ ಬಂದಿದ್ದೇನೆ. ಸರ್ಕಾರಿ ಶಾಲೆಯ ಕಾಪೌಂಡ್ ಅಭಿವೃದ್ಧಿಗೆ ಶ್ರಮದಾನ ಮಾಡಲಾಗಿದೆ. ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾರ್ಯ ನರೇಗಾ ಅಡಿ ಮಾಡಲಾಗ್ತಿದೆ. ನರೇಗಾ ಅಡಿ ಶಾಲೆ ಕೆಲಸ ಮಾಡಿ ರಾಜ್ಯಕ್ಕೆ ಶಿಕ್ಷಣ ಸಚಿವರು ಮಾದರಿಯಾಗಿದ್ದಾರೆ ಎಂದರು.