ಟೈಟಲ್ ಟ್ರ್ಯಾಕ್ ಮೂಲಕ ಕನ್ನಡ ಪ್ರೇಕ್ಷಕರನ್ನು ಕುಣಿಸಿರುವ ಎಕ್ಕ ಸಿನಿಮಾ ಅಂಗಳದಿಂದ ಲೇಟೆಸ್ಟ್ ಸಮಾಚಾರ ಹೊರಬಿದ್ದಿದೆ. ಯುವ ಎರಡನೇ ಸಿನಿಮಾವನ್ನು ಜೂನ್ 6ಕ್ಕೆ ಬೆಳ್ಳಿತೆರೆಗೆ ಅಖಾಡಕ್ಕೆ ಇಳಿಸೋದಿಕ್ಕೆ ಚಿತ್ರತಂಡ ಭರದಿಂದ ಚಿತ್ರೀಕರಣ ನಡೆಸುತ್ತಿದೆ. ಈಗಾಗಲೇ ಎಕ್ಕ ಚಿತ್ರದ 80 ರಿಂದ 85ರಷ್ಟು ಚಿತ್ರೀಕರಣ ಮುಕ್ತಾಯವಾಗಿದ್ದು, ಬಾಕಿ ಉಳಿದ 15ರಷ್ಟು ಶೂಟಿಂಗ್ ಗಾಗಿ ಚಿತ್ರತಂಡ ವಾರಾಣಾಸಿಗೆ ಹಾರಿಸಿದೆ.
ಎಕ್ಕ ಸಿನಿಮಾದ ಶೂಟಿಂಗ್ ಇಂದಿನಿಂದ ವಾರಾಣಾಸಿಯಲ್ಲಿ ಶುರುವಾಗಿದೆ. ಬಾಕಿ ಉಳಿದಿರುವ ಆಕ್ಷನ್ ಸೀಕ್ವೆನ್ಸ್ ಹಾಗೂ ಸಾಂಗ್ ಚಿತ್ರೀಕರಣವನ್ನು ಚಿತ್ರತಂಡ ನಡೆಸುತ್ತಿದೆ. ಏಪ್ರಿಲ್ ತಿಂಗಳಾತ್ಯಂತಕ್ಕೆ ಶೂಟಿಂಗ್ ಕಂಪ್ಲೀಟ್ ಮಾಡಿ ಚಿತ್ರತಂಡ ನಂತರ ಪ್ರಚಾರದ ಕಹಳೆ ಮೊಳಗಿಸಲು ಯೋಜನೆ ಹಾಕಿಕೊಂಡಿದೆ. ಇಡೀ ಚಿತ್ರತಂಡ ಹಾಗೂ ಪಿಆರ್ಕೆ ಪ್ರೊಡಕ್ಷನ್ಸ್, ಕೆಆರ್ಜಿ ಸ್ಟುಡಿಯೋಸ್ ಹಾಗೂ ಜಯಣ್ಣ ಫಿಲ್ಮ್ಸ್ ಒಟ್ಟುಗೂಡಿ ವೇಗವಾಗಿ ಕೆಲಸ ಮಾಡುತ್ತಿರುವುದು ಗೊತ್ತಾಗುತ್ತಿದೆ.
ಎಕ್ಕ ಯುವ ರಾಜ್ಕುಮಾರ್ ನಟನೆಯ 2ನೇ ಸಿನಿಮಾ. ರೋಹಿತ್ ಪದಕಿ ಸಾರಥ್ಯದಲ್ಲಿ ಚಿತ್ರ ಮೂಡಿ ಬರುತ್ತಿದ್ದು, ಚಿತ್ರದಲ್ಲಿ ಅತುಲ್ ಕುಲಕರ್ಣಿ, ಡೆಡ್ಲಿ ಆದಿತ್ಯಾ ಸೇರಿದಂತೆ ದೊಡ್ಡ ತಾರಗಣ ಚಿತ್ರದಲ್ಲಿ. ಸಂಜನಾ ಆನಂದ್, ಸಂಪದಾ ನಾಯಕಿಯಾಗಿ ಸಾಥ್ ಕೊಡುತ್ತಿದ್ದಾರೆ. ರೋಹಿತ್ ಪದಕಿ, ವಿಕ್ರಂ ಹತ್ವಾರ್ ಜೊತೆಗೆ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಚರಣ್ ರಾಜ್ ಸಂಗೀತ, ಸತ್ಯ ಹೆಗಡೆ ಛಾಯಾಗ್ರಹಣ ಮತ್ತು ದೀಪು ಎಸ್ ಕುಮಾರ್ ಸಂಕಲನ ಎಕ್ಕ ಸಿನಿಮಾಗಿದೆ. ಒಬ್ಬ ಮನುಷ್ಯ ಭೂಗತ ಜಗತ್ತಿಗೆ ತುತ್ತಾದಾಗ ಆತನಿಗೆ ಆಗುವ ಅನುಭವವನ್ನು ಈ ಚಿತ್ರದ ಮೂಲಕ ಹೇಳಲಾಗುತ್ತಿದೆಯಂತೆ.