ಯುವ ಸಿನಿಮಾ ಬಳಿಕ ದೊಡ್ಮನೆ ಕುಡಿ ಯುವರಾಜ್ ಕುಮಾರ್ ನಟಿಸಿರುವ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ಎಕ್ಕ. ಜೂನ್ 6ರಂದು ತೆರೆಗೆ ಬರೋದಿಕ್ಕೆ ಫಿಕ್ಸ್ ಆಗಿದ್ದ ಎಕ್ಕ ರಿಲೀಸ್ ಡೇಟ್ ಬದಲಾಗಿದೆ. ಜೂನ್ 6ರ ಬದಲು ಜುಲೈ 18ಕ್ಕೆ ಚಿತ್ರ ಬಿಗ್ ಸ್ಕ್ರೀನ್ ಗೆ ಎಂಟ್ರಿ ಕೊಡಲಿದೆ.
ಪಿಆರ್ಕೆ ಪ್ರೊಡಕ್ಷನ್ಸ್, ಕೆಆರ್ಜಿ ಸ್ಟುಡಿಯೋಸ್ ಹಾಗೂ ಜಯಣ್ಣ ಫಿಲ್ಮ್ಸ್ ಒಟ್ಟಾಗಿ ಚಿತ್ರ ನಿರ್ಮಾಣ ಮಾಡುತ್ತಿರುವ ಎಕ್ಕ ಸಿನಿಮಾಗೆ ರೋಹಿತ್ ಪದಕಿ ಆಕ್ಷನ್ ಕಟ್ ಹೇಳಿದ್ದಾರೆ. ನಾಯಕ ಯುವರಾಜ್ ಕುಮಾರ್ಗೆ ಸಂಜನಾ ಆನಂದ್ ಹಾಗೂ ಸಂಪದಾ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ‘ರತ್ನನ್ ಪ್ರಪಂಚ’ ಬಳಿಕ ‘ಉತ್ತರಕಾಂಡ’ ಸಿನಿಮಾ ಆರಂಭಿಸಿದ್ದ ರೋಹಿತ್ ಪದಕಿ ಅದನ್ನು ಪಕ್ಕಕ್ಕಿಟ್ಟು ‘ಎಕ್ಕ’ ಚಿತ್ರ ಕೈಗೆತ್ತಿಕೊಂಡಿದ್ದಾರೆ.
ರೋಹಿತ್ ಪದಕಿ ನಿರ್ದೇಶನದ ಪಕ್ಕಾ ಕಮರ್ಷಿಯಲ್ ಎಂಟರ್ಟೈನರ್ ಸಿನಿಮಾ ‘ಎಕ್ಕ’. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗುತ್ತಿದೆ. ಇತ್ತೀಚೆಗೆ ನಟ ಯುವರಾಜ್ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಚಿತ್ರದ ಸಣ್ಣ ಟೀಸರ್ ರಿಲೀಸ್ ಆಗಿ ಧೂಳೆಬ್ಬಿಸಿತ್ತು. ಅದಕ್ಕೂ ಮುನ್ನ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬಕ್ಕೆ ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಆಗಿ ಧೂಳೆಬ್ಬಿಸಿತ್ತು.
ಎಕ್ಕ ಬೆಂಗಳೂರಿನ ಅಂಡರ್ವರ್ಲ್ಡ್ ಕಥೆ ಚಿತ್ರದಲ್ಲಿದೆ ಎಂದು ಹೇಳಲಾಗುತ್ತಿದೆ. ಯುವ ರಾಜ್ಕುಮಾರ್ ಸಿಕ್ಕಾಪಟ್ಟೆ ರಡಗ್ ಲುಕ್ನಲ್ಲಿ ನಟಿಸಿದ್ದಾರೆ. ‘ಜಾಕಿ’ ಚಿತ್ರದಲ್ಲಿ ‘ಎಕ್ಕ ರಾಜ ರಾಣಿ’ ಎಂಬ ಸಾಂಗ್ ಬಂದು ಹಿಟ್ ಆಗಿದ್ದು ಗೊತ್ತೇಯಿದೆ. ಇನ್ನು ‘ಜಾಕಿ’ ಚಿತ್ರದ ದೃಶ್ಯವೊಂದರಲ್ಲಿ ಅಪ್ಪು ವಿಭಿನ್ನ ಅವತಾರದಲ್ಲಿ ದರ್ಶನ ಕೊಟ್ಟಿದ್ದರು. ‘ಎಕ್ಕ’ ಟೀಸರ್ನಲ್ಲಿ ಯುವ ಕೂಡ ಅಂಥದ್ದೇ ಲುಕ್ನಲ್ಲಿ ಯುವ ಕೂಡ ಕಾಣಿಸಿಕೊಂಡಿದ್ದರು. ಭಾರೀ ನಿರೀಕ್ಷೆ ಹೆಚ್ಚಿಸಿರುವ ಸಿನಿಮಾವೀಗ ಜುಲೈ 18ಕ್ಕೆ ರಿಲೀಸ್ ಆಗಲಿದೆ.
From 𝐉𝐮𝐥𝐲 𝟏𝟖𝐭𝐡, @yuva_rajkumar to serve only aces!!! ♠️#Ekka 𝐖𝐨𝐫𝐥𝐝𝐰𝐢𝐝𝐞 𝐑𝐞𝐥𝐞𝐚𝐬𝐞 𝐨𝐧 𝐉𝐮𝐥𝐲 𝟏𝟖𝐭𝐡, 𝟐𝟎𝟐𝟓! @PRK_Productions @JayannaFilms @KRG_Studios @RohitPadaki #Sampaada @itssanjanaanand @Ashwini_PRK #Jayanna #Bhogendra @Karthik1423 @yogigraj… pic.twitter.com/MjN1a9aoUZ
— KRG Studios (@KRG_Studios) May 28, 2025