ಕಲುಬುರಗಿ: ವಿದೇಶಿ ಸಂಬಂಧವನ್ನು ಬೆಳೆಸಿಕೊಳ್ಳಲು ಬೇರೆ ದೇಶದ ಪ್ರಧಾನಿಗಳನ್ನು ಅಪ್ಪಿಕೊಳ್ಳುವುದಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ. ಕಲುಬುರಗಿಯಲ್ಲಿ ಮಾತನಾಡಿದ ಅವರು, ವಿದೇಶಿ ಸಂಬಂಧವನ್ನು ಬೆಳೆಸಿಕೊಳ್ಳಲು ಬೇರೆ ದೇಶದ ಪ್ರಧಾನಿಗಳನ್ನು ಅಪ್ಪಿಕೊಳ್ಳುವುದಲ್ಲ.
ಬದಲಾಗಿ ಕುಳಿತುಕೊಂಡು ಮಾತನಾಡಿ ನಮ್ಮ ಅವರ ಸಂಬಂಧವನ್ನು ಗಟ್ಟಿಗೊಳಿಸುವುದು. ಪಾಕಿಸ್ತಾನಕ್ಕೆ ಟರ್ಕಿ ಹಾಗೂ ಚೀನಾ ಸಪೋರ್ಟ್ ಮಾಡಿದೆ. ಆದ್ರೆ ಭಾರತಕ್ಕೆ ಯಾವ ದೇಶ ಕೂಡ ಬಹಿರಂಗವಾಗಿ ಬೆಂಬಲ ನೀಡಿಲ್ಲ. ಪ್ರಧಾನಿ ಅವ್ರು ಡೊನಾಲ್ಡ್ ಟ್ರಂಪ್ ನಮ್ಮ ಸ್ನೇಹಿತರು ಅಂತಾ ಹೇಳ್ತಾರೆ.
ವಿಜ್ಞಾನಿಗಳನ್ನೇ ಅಚ್ಚರಿಗೊಳಿಸಿದೆ ಈ ಹಣ್ಣು..! ಎಷ್ಟೇ ಗಂಭೀರ ಕಾಯಿಲೆಯಾಗಿದ್ರೂ ಅದರಿಂದ ಸಿಗಲಿದೆ ಮುಕ್ತಿ
ಆದರೆ ಕದನ ವಿರಾಮ ಆಗಿರೋ ವಿಷಯ ನಮಗೆ ಹೇಗೆ ಗೊತ್ತಾಯ್ತು ಅಂದ್ರೆ ಟ್ರಂಪ್ ಅವರ ಟ್ವೀಟ್ ಮೂಲಕ ಗೊತ್ತಾಗಿದೆ. ಆ ಟ್ವೀಟ್‌ನಲ್ಲಿ ನಮ್ಮನ್ನೂ ಪಾಕಿಸ್ತಾನವನ್ನು ಹೋಲಿಕೆ ಮಾಡಿ, ಎರಡೂ ದೇಶದವರು ಸಮಾನರು ಎಂದು ಹೇಳಿದ್ದಾರೆ. ನಾವು ಪಾಕಿಸ್ತಾನದವರಿಗಿಂತ ಮುಂದಿದ್ದೇವೆ. ಟ್ರಂಪ್ ಅವ್ರು ನಮಗೆ ಸಾಮಾನ್ಯ ಪ್ರಜ್ಞೆ ಹೇಳಿ ಕೊಡ್ತಿದ್ದಾರಾ ಎಂದು ಗುಡುಗಿದರು.