ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನಡೆದ ಎನಕೌಂಟರ್ ಪ್ರಕರಣದ ಬಗ್ಗೆ ನಮಗಿಂತ ಮಾಧ್ಯಮದವರಿಗೆ ಹೆಚ್ಚಿನ ಮಾಹಿತಿ ಇದೆ. ಪೊಲೀಸ್ ಕಮೀಷನರ್ ರಿಪೋರ್ಟ್ ಆದರಿಸಿ ಇಲ್ಲಿ ಬಂದಿದ್ದೇವೆ. ಎನಕೌಂಟರ್ ಆದ ಸಂದರ್ಭದಲ್ಲಿ ನಾವು ಬರುವುದು ಸಹಜ. ಇಲ್ಲಿನ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ಶೀಘ್ರವಾಗಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಡಾ.ಟಿ.ಶ್ಯಾಮ್ ಭಟ್ ಹೇಳಿದರು.
ಬಿಳಿ ಕೂದಲನ್ನು ಬೇರುಗಳಿಂದ ಕಪ್ಪಾಗಿಸುತ್ತೆ ಈ ಹೇರ್ ಪ್ಯಾಕ್! ಮೊಣಕಾಲುದ್ದ ಕೂದಲು ಗ್ಯಾರಂಟಿ!
ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು,ಎನಕೌಂಟರ್ ಬಗ್ಗೆ ನಾವು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಬಂದಿದ್ದೇವೆ. ನ್ಯಾಷನಲ್ ಹ್ಯೂಮನ್ ರೈಟ್ಸ್ ನಲ್ಲಿ ಇದುವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ. ಈ ನಿಟ್ಟಿನಲ್ಲಿ ನಾವು ಕೂಡ ಕನ್ಪರ್ಮ್ ಮಾಡಿಕೊಂಡು ನಾವು ಇಲ್ಲಿಗೆ ಬಂದಿದ್ದೇವೆ. ಪ್ರಕರಣ ನಡೆದಿರುವ ಸ್ಥಳದಿಂದ ಆರಂಬಿಸಿ ಈಗ ಎನಕೌಂಟರ್ ಸ್ಥಳ ಕೂಡ ಪರಿಶೀಲನೆ ನಡೆಸಿದ್ದೇವೆ ಎಂದರು.
ಈ ಪ್ರಕರಣದಲ್ಲಿ ಠಾಣೆ ಇನ್ಸ್ಪೆಕ್ಟರ್ ಕಂಪ್ಲೆಂಟರ್ ಆಗಿದ್ದು, ಈ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇವೆ. ನಮ್ಮ ವ್ಯಾಪ್ತಿಗೆ ಬರುವುದು ಎನಕೌಂಟರ್ ವಿಷಯ ಈ ಹಿನ್ನೆಲೆಯಲ್ಲಿ ತನಿಖೆ ನಡೆಸುತ್ತೇವೆ. ಬಾಲಕಿ ಮೇಲಿನ ಅತ್ಯಾಚಾರ ಕೊಲೆ ಪ್ರಕರಣ ಪೊಲೀಸ್ ತನಿಖೆ ನಡೆಸುತ್ತಿದೆ. ಇನ್ಸ್ಪೆಕ್ಟರ್ ಕಿರಣಕುಮಾರ್ ಅವರಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ ಎಂದು ಅವರು ಹೇಳಿದರು.
ನ್ಯಾಷನಲ್ ಹ್ಯೂಮನ್ ರೈಟ್ಸ್ ಕೇಸ್ ದಾಖಲು ಮಾಡದೇ ಇರುವ ಹಿನ್ನೆಲೆಯಲ್ಲಿ ನಾವು ತೆಗೆದುಕೊಂಡಿದ್ದೇವೆ. ಎನಕೌಂಟರ್ ಮಾಡಿದ ಅಧಿಕಾರಿಗಳು ಶೀಘ್ರವಾಗಿ ತನಿಖೆಗೆ ಹಾಜರಾದರೇ ಶೀಘ್ರವಾಗಿ ವರದಿ ಸಲ್ಲಿಸುತ್ತೆವೆ. ಸ್ಪಾಟ್ ಇನಸ್ಪೆಕ್ಷನ್ ಇಂದ ಎನಕೌಂಟರ್ ಬಗ್ಗೆ ಏನನ್ನು ಹೇಳಲು ಆಗುವುದಿಲ್ಲ. ಸಿಐಡಿ ತನಿಖೆ ಹಾಗೂ ಹ್ಯೂಮನ್ ರೈಟ್ಸ್ ತನಿಖೆ ಪ್ರತ್ಯೇಕವಾಗಿರುತ್ತದೆ ಎಂದು ಅವರು ಮಾಹಿತಿ ನೀಡಿದರು.