ಬೆಂಗಳೂರು:- ಗ್ಯಾರಂಟಿ ಹೆಸರಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರವು ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿಸಿ ಮಧ್ಯಮ, ಹಾಗೂ ಬಡಜನರಿಗೆ ಕೊಡಲಿ ಪೆಟ್ಟು ಕೊಟ್ಟಿದೆ. ಇನ್ನೂ ಇದನ್ನೇ ಅಸ್ತ್ರವಾಗಿಟ್ಟುಕೊಂಡಿರುವ ವಿಪಕ್ಷ ಆಡಳಿತ ಪಕ್ಷದ ವಿರುದ್ಧ ಮುಗಿಬಿದ್ದಿದೆ.
ಬಂಡೀಪುರದ ಹುಲಿ ಸಂರಕ್ಷಿತಾರಣ್ಯದಲ್ಲಿ ನಿಯಮ ಉಲ್ಲಂಘನೆ; ಅರಣ್ಯ ಸಚಿವರೇ ಕೊಟ್ಟರಾ ಅನುಮತಿ..?
ಅದರಂತೆ ಬೆಲೆ ಏರಿಕೆಯ ವಿರುದ್ಧ ಜೆಡಿಎಸ್ ಪೋಸ್ಟರ್ ಅಭಿಯಾನ ಕೈಗೊಂಡಿದೆ. “ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ” ಎಂಬ ಬರವಣಿಗೆಯ ಪೋಸ್ಟರ್ ಅನ್ನು ಜೆಡಿಎಸ್ ಬಿಡುಗಡೆ ಮಾಡಿದೆ. ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ.. ಪೋಸ್ಟರ್ ಮೂಲಕ ಹೋರಾಟ ಧುಮುಕಿದೆ. ಬೆಲೆ ಏರಿಕೆ ಖಂಡಿಸಿ ಬೆಂಗಳೂರು ನಗರದಲ್ಲಿ ಜೆಡಿಎಸ್ ಪೋಸ್ಟರ್ ಅಭಿಯಾನ ಕೈಗೊಂಡಿದ್ದು, ಸರ್ಕಾರದ ವಿರುದ್ದ ಮುಗಿಬೀಳಲು ಜೆಡಿಎಸ್ ಸಜ್ಜಾಗಿದೆ