ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಗುಜರಾತ್ 10 ವಿಕೆಟ್ಗಳ ಜಯ ಸಾಧಿಸಿದ ಬಳಿಕ ಮೂರು ತಂಡಗಳು ಪ್ಲೇ ಆಫ್ಗೆ ಅರ್ಹತೆ ಪಡೆದುಕೊಂಡಿವೆ. ಗುಜರಾತ್ 12ರಲ್ಲಿ 9 ಪಂದ್ಯ ಗೆದ್ದು 18 ಅಂಕ, ಆರ್ಸಿಬಿ ಹಾಗೂ ಪಂಜಾಬ್ 12ರಲ್ಲಿ ತಲಾ 8 ಪಂದ್ಯ ಗೆದ್ದು 17 ಅಂಕಗಳೊಂದಿಗೆ ಪ್ಲೇ ಆಫ್ಗೆ ಎಂಟ್ರಿ ಕೊಟ್ಟಿವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 10ನೇ ಬಾರಿಗೆ ಪ್ಲೇ ಆಫ್ ಪ್ರವೇಶಿಸಿದ್ರೆ, ಗುಜರಾತ್ ಟೈಟಾನ್ಸ್ 3ನೇ ಬಾರಿಗೆ ಹಾಗೂ ಪಂಜಾಬ್ ಕಿಂಗ್ಸ್ 11 ವರ್ಷಗಳ ಬಳಿಕ ಪ್ಲೇ ಆಫ್ಗೆ ಅರ್ಹತೆ ಪಡೆದುಕೊಂಡಿದೆ.
ಡೆಲ್ಲಿ ನೀಡಿದ 200 ರನ್ಗಳ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಒಂದೂ ವಿಕೆಟ್ ಕಳೆದುಕೊಳ್ಳದೇ 19 ಓವರ್ಗಳಲ್ಲಿ ಗುರಿ ತಲುಪುವಲ್ಲಿ ಯಶಸ್ವಿಯಾಯಿತು. ತಂಡದ ಪರ ಸಾಯಿ ಸುದರ್ಶನ್ 4 ಸಿಕ್ಸರ್ , 12 ಬೌಂಡರಿ ಸಿಡಿಸಿ 108 ರನ್, ಶುಭಮನ್ಗಿಲ್ 7 ಸಿಕ್ಸರ್ 3 ಬೌಂಡರಿ ನೆರವಿಂದ 93 ರನ್ ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು
ಈ ರಾಶಿಯ ಮಕ್ಕಳ ಫ್ಯಾಮಿಲಿ ಬಗ್ಗೆ ಚಿಂತೆ: ಸೋಮವಾರದ ರಾಶಿ ಭವಿಷ್ಯ19 ಮೇ 2025
2022ರಲ್ಲಿ ಐಪಿಎಲ್ಗೆ ಪದಾರ್ಪಣೆ ಮಾಡಿದ್ದ ಗುಜರಾತ್ ಟೈಟಾನ್ಸ್ ಆರಂಭಿಕ 2 ಆವೃತ್ತಿಗಳಲ್ಲಿ ಆವೃತ್ತಿಗಳಲ್ಲೂ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಪ್ಲೇ ಆಫ್ ಪ್ರವೇಶಿಸಿತ್ತು. ಆದ್ರೆ 2024ರ ಆವೃತ್ತಿಯಲ್ಲಿ ಶುಭಮನ್ ಗಿಲ್ ನಾಯಕತ್ವದಲ್ಲಿ ಟೈಟಾನ್ಸ್ ಪಡೆ ಲೀಗ್ ಸುತ್ತಿನಲ್ಲೇ ಹೊರಬಿದ್ದಿತ್ತು. ಇನ್ನೂ 2014ರಲ್ಲಿ ಕೊನೆಯ ಬಾರಿಗೆ ಪ್ಲೇ ಆಫ್ ಪ್ರವೇಶಿಸಿದ್ದ ಪಂಜಾಬ್ ಕಿಂಗ್ಸ್ ಇದೀಗ 11 ವರ್ಷಗಳ ಬಳಿಕ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಪ್ಲೇ ಆಫ್ಗೆ ಎಂಟ್ರಿ ಕೊಟ್ಟಿದೆ.