Close Menu
Ain Live News
    Facebook X (Twitter) Instagram YouTube
    Friday, May 23
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ವಾಟ್ಸಾಪ್ ಬಳಕೆದಾರರ ಗಮನಕ್ಕೆ ಸ್ವಲ್ಪ ಯಾಮಾರಿದ್ರೂ ಹೋಗತ್ತೆ ಲಕ್ಷ-ಲಕ್ಷ ಹಣ!

    By AIN AuthorMarch 14, 2025
    Share
    Facebook Twitter LinkedIn Pinterest Email
    Demo

    ವಾಟ್ಸಾಪ್‌ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ, ಚಿಕ್ಕ ಮಕ್ಕಳೂ ಕೂಡ ಇಂದು ವಾಟ್ಸಾಪ್‌ ಬಳಕೆ ಮಾಡುವುದನ್ನು ಕಲಿತುಕೊಂಡಿರುತ್ತಾರೆ. ವಾಟ್ಸಾಪ್‌ ಮೆಸೇಜ್‌, ಗ್ರೂಪ್‌ ಚಾಟ್‌, ವಾಟ್ಸಾಪ್‌ ಕಾಲ್‌, ವಿಡಿಯೋ ಕಾಲ್‌ ಈಗ ವಾಟ್ಸಾಪ್‌ನಲ್ಲಿ ಹಣ ಕೂಡ ಟ್ರಾನ್ಸಾಕ್ಷನ್‌ ಮಾಡಬಹುದು. ಈ ಜನಪ್ರಿಯ ಅಪ್ಲಿಕೇಷನ್‌ ಇಂಥ ಬಹಳಷ್ಟು ಫೀಚರ್‌ಗಳನ್ನು ಹೊಂದಿದೆ. ವಾಟ್ಸಾಪ್‌ ಅನ್ನೋದು ಭಾರತವೂ ಸೇರಿದಂತೆ ಪ್ರಪಂಚದಾದ್ಯಂತ ಹೆಚ್ಚು ಜನರು ಬಳಸುವಂತಹ ಮೆಸೇಜಿಂಗ್ ಅಪ್ಲಿಕೇಷನ್‌ಗಳಲ್ಲಿ ಒಂದಾಗಿದೆ.

    ಜಕ್ಕೇನಹಳ್ಳಿ ಜಾತ್ರೆಗೆ ಸರ್ಜಾ ಕುಟುಂಬ ಭೇಟಿ: ಅರ್ಜುನ್, ಧ್ರುವಾ ನೋಡಿ ಫ್ಯಾನ್ಸ್ ಖುಷ್!

    ವಾಟ್ಸಪ್​​ನಲ್ಲಿ ನಿಮಗೆ ಎಷ್ಟು ಯೂಸ್​ ಆಗುತ್ತೋ ಅಷ್ಟೇ ಅಪಾಯಗಳನ್ನು ತಂದೊಡ್ಡಲಿದೆ. ಸೈಬರ್​ ಅಪರಾಧಿಗಳು ವಾಟ್ಸಪ್​​ನಲ್ಲೇ ಮೋಸ, ವಂಚನೆ, ಹ್ಯಾಕಿಂಗ್​ ಕೂಡ ಮಾಡುತ್ತಾರೆ.

    ಇನ್ನು, ವಾಟ್ಸಪ್​​ನಲ್ಲಿ ಹೆಚ್ಚು ಸ್ಕ್ಯಾಮ್​​ ನಡೆಯುತ್ತದೆ. ಅಪರಿಚಿತ ಸಂಖ್ಯೆಯಿಂದ ನೀವು ಲಾಟರಿ ಗೆದ್ದಿದ್ದೀರಿ ಅನ್ನೋ ಮೆಸೇಜ್​ ಬರುತ್ತೆ. ನಿಮಗೆ ವಿಶೇಷ ಉಡುಗೊರೆ ಸಿಗಲಿದೆ ಎಂಬ ಸಂದೇಶಗಳು ಕಳಿಸಲಾಗುತ್ತೆ. ಈ ಮೆಸೇಜ್​​ ಜೊತೆಗೆ ಬರೋ ಲಿಂಕ್​ ಕ್ಲಿಕ್​ ಮಾಡಿದರೆ ಸೈಬರ್​​​ ಅಪರಾಧಿಗಳಿಗೆ ನಿಮ್ಮ ಬ್ಯಾಂಕ್​​ ಖಾತೆ ಸಿಗುತ್ತದೆ. ಕೂಡಲೇ ನಿಮ್ಮ ಬ್ಯಾಂಕ್​ ಖಾತೆಯಿಂದ ಹಣ ಲಪಟಾಯಿಸುತ್ತಾರೆ.

    ಇತ್ತೀಚೆಗೆ ವಾಟ್ಸಪ್​​ನಲ್ಲಿ ದೊಡ್ಡ ಕಂಪನಿಗಳ ಹೆಸರಿನಲ್ಲಿ ನಕಲಿ ಉದ್ಯೋಗದ ಆಫರ್​ಗಳು ಬರುತ್ತವೆ. ಹಾಗೆಯೇ ಎಷ್ಟು ಬೇಕೋ ಅಷ್ಟು ಸಾಲ ನೀಡುತ್ತೇವೆ ಎಂದು ಆಫರ್​ ಕೂಡ ಕೊಡುತ್ತಾರೆ. ಹೇಗಾದ್ರೂ ಮಾಡಿ ನಿಮ್ಮ ಆಧಾರ್​ ಮತ್ತು ಪಾನ್​​ ಕಾರ್ಡ್​ ಮಾಹಿತಿ ಪಡೆಯುತ್ತಾರೆ. ನಿಮ್ಮ ವೈಯಕ್ತಿಕ ಡಾಟಾ ಸೈಬರ್​​ ವಂಚಕರು ಬ್ಯಾಂಕ್​ ಖಾತೆ ಹ್ಯಾಕ್​ ಮಾಡಲು ಬಳಸುತ್ತಾರೆ.

    ಸೈಬರ್​ ಕ್ರೈಮ್​​ನ ಭಾಗವಾಗಿರೋ ಫಿಶಿಂಗ್ ಮತ್ತು ಹ್ಯಾಕಿಂಗ್ ಭಾರೀ ಡೇಂಜರಸ್​​​. ನೀವು ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಿದಾಗ ನಿಮ್ಮ ಫೋನ್​ ಹ್ಯಾಕ್​ ಆಗಲಿದೆ. ಇದರಿಂದ ನಿಮ್ಮ ಮೊಬೈಲ್​ನಲ್ಲಿ ಆಟೋಮ್ಯಾಟಿಕ್​​ ಮಾಲ್ವೇರ್​ ಡೌನ್​ಲೋಡ್​ ಆಗುತ್ತದೆ. ಇದರಿಂದ ಬ್ಯಾಂಕಿಂಗ್​ ಪಾಸ್​ವಾರ್ಡ್​ ಮತ್ತು OTP ಇತ್ಯಾದಿ ಮಾಹಿತಿ ಕದಿಯಲಾಗುತ್ತದೆ

    ಸೋಷಿಯಲ್​ ಮೀಡಿಯಾದಲ್ಲಿ ಸುಳ್ಳುಸುದ್ದಿ ಹರಡುವುದು ಸರ್ವೇಸಾಮಾನ್ಯ. ಉದ್ದೇಶಪೂರ್ವಕವಾಗಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಕೋಮು ಮತ್ತು ರಾಜಕೀಯ ದ್ವೇಷ ಹರಡಲಿದ್ದಾರೆ. ನೀವು ಬ್ಲೈಂಡ್​ ಆಗಿ ಶೇರ್​ ಮಾಡೋದರಿಂದ ಅಪಾಯವೇ ಹೆಚ್ಚು.

    ವಾಟ್ಸಪ್​​ ಸ್ಕ್ಯಾಮ್​ನಿಂದ ಬಚಾವ್​​ ಆಗೋದು ಹೇಗೆ?

    Unknown ನಂಬರ್ಸ್​ನಿಂದ ಬಂದ ಲಿಂಕ್​​ಗಳನ್ನು ಕ್ಲಿಕ್​ ಮಾಡಬೇಡಿ
    ನಿಮ್ಮ ಬ್ಯಾಂಕ್​​ ಮತ್ತು ಪರ್ಸನಲ್​ ಮಾಹಿತಿಯನ್ನು ಶೇರ್​ ಮಾಡಲೇಬೇಡಿ
    ಯಾವುದೇ ಆಕರ್ಷಕ ಹಣಕಾಸು ಆಫರ್​ಗಳು ಬಂದಾಗ ಮರುಳಾಗಬೇಡಿ
    ರಿಲಿಜಿಯಸ್​​, ವೈಲೆನ್ಸ್, ಕೋಮು ದ್ವೇಷ ಹರಡುವ ಸಂದೇಶ ಕಳಿಸಬೇಡಿ
    ವಾಟ್ಸಪ್​ ಸೆಟ್ಟಿಂಗ್​​ನಲ್ಲಿ ಪ್ರೈವಸಿಗೆ ಹೋಗಿ ಖಾಸಗಿತನ ಕಾಪಾಡಿಕೊಳ್ಳಿ
    ಯಾವುದೇ ಅನುಮಾನಾಸ್ಪದ ಸಂದೇಶಗಳು ಬಂದಾಗ ರಿಪೋರ್ಟ್​ ಮಾಡಿ

    ಯಾರೇ ಆಗಲಿ ವಾಟ್ಸಪ್​ ಬಳಸುವಾಗ ಎಚ್ಚರಿಕೆಯಿಂದ ಇರಬೇಕು. ಹ್ಯಾಕರ್ಸ್​ ಇಂಟರ್​ನೆಟ್​ನಲ್ಲಿ ಸೈಬರ್​​ ಕ್ರೈಮ್​ ಮಾಡಲು ಹೊಸ ದಾರಿಗಳನ್ನು ಹುಡುಕುತ್ತಲೇ ಇದ್ದಾರೆ. ನೀವು ಎಚ್ಚರಿಕೆಯಿಂದ ಇರದೆ ಹೋದಲ್ಲಿ ಕೋಟ್ಯಂತರ ಹಣ ಕಳೆದುಕೊಳ್ಳಬೇಕಾಗುತ್ತದೆ.

    Post Views: 1

    Demo
    Share. Facebook Twitter LinkedIn Email WhatsApp

    Related Posts

    ರಾತ್ರಿ ನೀವು ಚಪಾತಿ ತಿಂದು ಮಲಗ್ತೀರಾ!? ಹಾಗಿದ್ರೆ ಈ ಸುದ್ದಿ ತಪ್ಪದೇ ಓದಿ!

    May 22, 2025

    ನಿತ್ಯವೂ ರೋಗಿಗಳ ಹಾರೈಕೆಯಲ್ಲಿರುವ ನರ್ಸ್‌ಗಳಿಗೆ ವಿಶೇಷ ದಿನಾಚರಣೆ!

    May 22, 2025

    ಹಿಮ್ಮಡಿ ಹೊಡೆದು ಧಗಧಗನೆ ಉರಿತಿದ್ಯಾ!? ಹಾಗಿದ್ರೆ ಈ ಮನೆಮದ್ದು ಫಾಲೋ ಮಾಡಿ!

    May 22, 2025

    ಕ್ಯಾನ್ಸರ್‌ ರೋಗಿಗಳಿಗೆ ಗುಡ್‌ ನ್ಯೂಸ್.. 16 ಜಿಲ್ಲಾಸ್ಪತ್ರೆಗಳಲ್ಲಿ ಕೀಮೋಥೆರಪಿ ಕೇಂದ್ರಗಳ ಆರಂಭಕ್ಕೆ ಸರ್ಕಾರ ನಿರ್ಧಾರ!

    May 22, 2025

    ಹೊಸ ಬಟ್ಟೆ ಬಣ್ಣ ಬಿಡುತ್ತೆ ಅನ್ನೋ ಭಯ ಇದ್ದರೆ ಈ ಟ್ರಿಕ್ಸ್ ಟ್ರೈ ಮಾಡಿ ನೋಡಿ! ರಿಸಲ್ಟ್ ಪಕ್ಕಾ

    May 22, 2025

    Healthy Habit: ತಣ್ಣೀರಿಗಿಂತ ಆರೋಗ್ಯಕ್ಕೆ ಬಿಸಿ ನೀರು ಒಳ್ಳೆಯದಾ!? ತಜ್ಞರು ಹೇಳಿದ್ದಿಷ್ಟು!

    May 22, 2025

    ನಿಮಗೂ ಈ ಸಮಸ್ಯೆ ಇದ್ಯಾ!? ಹಾಗಿದ್ರೆ ಆಲೂಗಡ್ಡೆ ಮುಟ್ಟಲೇಬೇಡಿ! ಇದು ತಿಳಿದ್ರೆ ಶಾಕ್ ಆಗ್ತೀರಾ!?

    May 21, 2025

    Neem Fruit: ಬೇವಿನ ಹಣ್ಣು ಸೇವನೆಯಿಂದ ನಮ್ಮ ಆರೋಗ್ಯಕ್ಕಾಗುವ ಪ್ರಯೋಜನಗಳೇನು ಗೊತ್ತಾ..?

    May 21, 2025

    BOB Jobs: ಬ್ಯಾಂಕ್ ಆಫ್ ಬರೋಡಾದಲ್ಲಿ ಉದ್ಯೋಗವಕಾಶ! SSLC ಪಾಸಾದವರು ಇಂದೇ ಅಪ್ಲೈ ಮಾಡಿ

    May 21, 2025

    Today’s Gold Silver Price: ಅಬ್ಬಬ್ಬಾ.. ಗೋಲ್ಡ್ ಬೆಲೆಯಲ್ಲಿ ಭಾರೀ ಏರಿಕೆ..! ಹೀಗಿದೆ ಇಂದಿನ ಚಿನ್ನ-ಬೆಳ್ಳಿ ದರ

    May 21, 2025

    Healthcare: ಅಪ್ಪಿತಪ್ಪಿಯೂ ಈ ತರಕಾರಿಗಳನ್ನು ಫ್ರಿಡ್ಜ್‌ʼನಲ್ಲಿ ಇಡಬೇಡಿ..! ನಿಮ್ಮ ಆರೋಗ್ಯ ಹಾಳಾಗುತ್ತೆ

    May 21, 2025

    ಮೆಟ್ರೋದಲ್ಲಿ ಪ್ರಯಾಣಿಸೋ ಹೆಣ್ಮಕ್ಕಳೇ ಹುಷಾರ್: ರಹಸ್ಯವಾಗಿ ವಿಡಿಯೋ ಮಾಡ್ತಾರೆ ಕಿಡಿಗೇಡಿಗಳು! ಈ ಸುದ್ದಿ ತಪ್ಪದೆ ಓದಿ!

    May 21, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.