ಬೆಂಗಳೂರು: ಸಹನಟಿ ಮೇಲೆ ಅತ್ಯಾಚಾರ ಆರೋಪದಡಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ಅಂದರ್ ಆಗಿದ್ದಾರೆ. ಅನ್ನಪೂರ್ಣೇಶ್ವರಿ ಪೊಲೀಸ್ರು ಪ್ರಕರಣ ಸಂಬಂಧ ತನಿಖೆ ಮುಂದುವರೆಸಿದ್ದಾರೆ. ಸಂತ್ರಸ್ತೆಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚನೆ ನೀಡಿದ್ದರು. ಅದರಂತೆ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಸಂತ್ರೆಸ್ತೆ ಹಾಜರಾಗಿದ್ದಾರೆ. ಸಂತ್ರಸ್ಥೆ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ವಿಚಾರಣೆ ಬಳಿಕ ಸಂಸತ್ರೆಯ ಮತ್ತೊಂದು ವಿಡಿಯೋ ವೈರಲ್ ಆಗಿದೆ. ನಾನು ಸತ್ತರೂ ಯಾರು ಕಾರಣರಲ್ಲ ಇದು ನನ್ನ ಸ್ವಂತ ನಿರ್ಧಾರ. ನನ್ನ ಮನು ಮಧ್ಯೆ ಒಂದಷ್ಟು ಜಗಳ ಗೊಂದಲಗಳಿತ್ತು. ಸಿನಿಮಾ ಪ್ರೊಡ್ಯೂಸರ್ ಗೆ ಮೆಸೇಜ್ ಮಾಡಿದ್ದು ತಪ್ಪು. ಸಿನಿಮಾಗೆ ತೊಂದರೆ ಕೊಡುವ ಉದ್ದೇಶ ನನ್ನದಲ್ಲ. ಏನಿದ್ದರು ನಮ್ಮ ಮಧ್ಯೆ ಇರಬೇಕಿತ್ತು. ಸಿನಿಮಾಗೆ ತೊಂದರೆ ಕೊಡುವ ಉದ್ದೇಶ ಇರಲಿಲ್ಲ. ಬಳಿಕ ಲಾಯರ್ ನ ಮೀಟ್ ಮಾಡಿಸಿ ನನ್ನ ತಪ್ಪಿನ ಬಗ್ಗೆ ಅರಿವು ಮಾಡಿಸಿದ್ರು. ಇದು ನನ್ನ ಸ್ವಂತ ನಿರ್ಧಾರ. ಯಾರು ಒತ್ತಾಯಪೂರ್ವಕವಾಗಿ ದೂರು ನೀಡಿಸಿಲ್ಲ. ಕುಲದಲ್ಲಿ ಕೀಳ್ಯಾವುದೋ ಸಿನಿಮಾಗೆ ಒಳ್ಳೆದಾಗಲಿ. ಅಕಸ್ಮಾತ್ ನಾನು ಸತ್ತರೂ ಕೂಡ ಯಾರು ಕಾರಣರಲ್ಲ ಇದು ನನ್ನ ಸ್ವಂತ ನಿರ್ಧಾರ ಎಂದು ಹೇಳಿರುವ ಸಂತ್ರೆಸ್ತೆ ವಿಡಿಯೋ ವೈರಲ್ ಆಗಿದೆ.