Close Menu
Ain Live News
    Facebook X (Twitter) Instagram YouTube
    Monday, June 9
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    CM Siddaramaiah: ಜಾತಿ ಜನಗಣತಿ ಬೇಡ ಎನ್ನುವವರಿಗೂ ಅದರಲ್ಲೇನಿದೆ ಎಂದು ತಿಳಿದಿಲ್ಲ: ಸಿಎಂ ಸಿದ್ದರಾಮಯ್ಯ

    By AIN AuthorNovember 23, 2023
    Share
    Facebook Twitter LinkedIn Pinterest Email
    Demo

    ಬಾಗಲಕೋಟೆ, ನವೆಂಬರ್ 23: ಜಾತಿ ಜನಗಣತಿ ವರದಿ ಸಲ್ಲಿಸುವ ಮುನ್ನವೇ ಚರ್ಚೆ ಶುರುವಾಗಿದೆ. ವರದಿಯಲ್ಲೇ ಏನಿದೆ ಎಂದು ಅದನ್ನು ಬೇಡ ಎನ್ನುವವರಿಗೂ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಬಾಗಲಕೋಟೆಯ ನವನಗರದ ಹೆಲಿಪ್ಯಾಡಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

    ವರದಿ ಸಲ್ಲಿಕೆಯಾದ ನಂತರ ನೋಡೋಣ. ಸುಮ್ಮನೆ ಊಹೆಗಳ ಮೇಲೆ ಮಾತನಾಡುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದರು. ಕರೆದು ಮಾತನಾಡುವೆ ಮೂಲ ವರದಿ ಕಳೆದಿದೆ ಎಂದು ಹಾಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಯಪ್ರಕಾಶ್ ಹೇಳಿಕೆ ಬಗ್ಗೆ ಮಾತನಾಡಿ, ಅವರನ್ನು ಕರೆದು ಮಾತನಾಡುತ್ತೇನೆ ಎಂದರು.

    Kambala: ಬೆಂಗಳೂರಲ್ಲಿ ಅದ್ದೂರಿಯಾಗಿ ನ. 25, 26ರಂದು ನಡೆಯಲಿರುವ ನಮ್ಮ‌ ಕಂಬಳ: ಹೇಗಿದೆ ಸಿದ್ಧತೆ!

    ಹೇಳಿಕೆ ನೀಡುವಾಗ ಸತ್ಯಾಂಶವನ್ನು ಆಧಾರಿಸಿರಬೇಕು
    ಜಾತಿ ಜನಗಣತಿ ಸಮಾಜವನ್ನು ಒಡೆಯುತ್ತದೆ ಎಂದಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಅವರಿಗೆ ವರದಿಯಲ್ಲಿ ಏನಿದೆ ಎಂದು ಗೊತ್ತಿದೆಯೇ ಎಂದರು. ಯಾರೇ ಆಗಲಿ ಗೊತ್ತಿಲ್ಲದೆ ಮಾತನಾಡ ಬಾರದು. ಸಮಾಜ ಏಕೆ ಒಡೆಯುತ್ತೇವೆ? ಎಂದು ಪ್ರಶ್ನಿಸಿದರು. ನಿತೀಶ್ ಕುಮಾರ್ ಬಿಹಾರದಲ್ಲಿ ಜಾತಿಗಣತಿ ಸ್ವೀಕರಿಸಿದ್ದಾರೆ. ಸಮಾಜ ಒಡೆದುಬಿಟ್ಟರೆ ಎಂದರು.
    ಯಾವುದೇ ಹೇಳಿಕೆ ನೀಡುವಾಗ ಅದು ಸತ್ಯಾಂಶದ ಮೇಲೆ ಅವಲಂಬಿತವಾಗಿರಬೇಕು ಎಂದರು.

    ಬಿಜೆಪಿಯಲ್ಲಿ ಬೆಂಕಿ ಹತ್ತಿಕೊಂಡಿದೆ.
    ಅರವಿಂದ್ ಲಿಂಬಾವಳಿ ಯವರು ವಿರೋಧ ಪಕ್ಷದ ನಾಯಕನ ಆಯ್ಕೆ ಹಾಗೂ ಪಕ್ಷದ ಅಧ್ಯಕ್ಷ ರ ಆಯ್ಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ಮಾತನಾಡಿ ವಿ.ಸೋಮಣ್ಣ 6 ನೇ ತಾರೀಖಿನ ನಂತರ ತಮ್ಮ ಅನಿಸಿಕೆ ತಿಳಿಸುವ ಬಗ್ಗೆ ಮಾತನಾಡಿ ಬಿಜೆಪಿ ಪಕ್ಷದಲ್ಲಿ ವಿಜಯೇಂದ್ರನವರನ್ನು ಅಧ್ಯಕ್ಷರನ್ನಾಗಿ ಹಾಗೂ ಆರ್.ಅಶೋಕ್ ಅವರನ್ನು ವಿರೋಧ ಪಕ್ಷದ ನಾಯಕನನ್ನಾಗಿ ನೇಮಿಸಿದ ಮೇಲೆ ಬೆಂಕಿ ಹತ್ತಿಕೊಂಡಿದೆ. ಬಹಳಷ್ಟು ಜನರಿಗೆ ಅಸಮಾಧಾನವಾಗಿದೆ. ಇದು ಏನಾಗುತ್ತದೆ ಎಂದು ಗೊತ್ತಿಲ್ಲ. ಅದು ಜ್ವಾಲೆಯಾಗುತ್ತದೆಯೋ ಅವರ ಬುಡಕ್ಕೆ ಬೆಂಕಿ ಹತ್ತುಕೊಳ್ಳುತ್ತದೆಯೋ ಗೊತ್ತಿಲ್ಲ. ಬೆಂಕಿ ಅಂತೂ ಹತ್ತಿಕೊಂಡಿದೆ ಎಂದರು.

    ಪಕ್ಷಕ್ಕೆ ಸೇರ್ಪಡೆಯಾಗುವವರು ನಮ್ಮ ಸಿದ್ಧಾಂತಕ್ಕೆ ಬದ್ಧರಾಗಿರಬೇಕು
    ನಾವು ಯಾರನ್ನೂ ಕಾಂಗ್ರೆಸ್ಸಿಗೆ ಕರೆಯೋಲ್ಲ ಅವರಾಗಿಯೇ ಬಂದರೆ ಸೇರಿಸಿಕೊಳ್ಳುತ್ತೇವೆ. ನಾನು ಯಾರನ್ನೂ ಸಂಪರ್ಕಿಸಿಲ್ಲ . ಯಾರು ನಮ್ಮ ನಾಯಕತ್ವವನ್ನು ಒಪ್ಪಿಕೊಂಡು ಅವರಾಗಿಯೇ ಬರುತ್ತಾರೋ ಅವರನ್ನು ಸೇರಿಸಿಕೊಂಡಿದ್ದೇವೆ. ನನ್ನ ರಾಜಕೀಯ ಜೀವನದಲ್ಲಿ ಯಾರನ್ನೂ ಬನ್ನಿ ಎಂದು ಕರೆಯಲು ಹೋಗಿಲ್ಲ. ನಮ್ಮ ಸಿದ್ಧಾಂತಕ್ಕೆ ಬದ್ಧರಾಗಿರಬೇಕಲ್ಲ. ಬಿಜೆಪಿ ಯಲ್ಲಿ ಬಹಳ ವರ್ಷ ಇದ್ದವರು ಆ ಸಿದ್ಧಾಂತ ವನ್ನು ಒಪ್ಪಿರುತ್ತಾರೆ.ಅದನ್ನು ಬಿಟ್ಟು ಕಾಂಗ್ರೆಸ್ ಸಿದ್ಧಾಂತ ಒಪ್ಪಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

    Demo
    Share. Facebook Twitter LinkedIn Email WhatsApp

    Related Posts

    ಜಸ್ಟ್ 2 ಸೆಕೆಂಡ್: ಮಹಿಳೆ ಸರ ಕದ್ದೊಯ್ದ ಕಳ್ಳ.. ಸಿಸಿಟಿವಿ ದೃಶ್ಯ ಇಲ್ಲಿದೆ!

    June 9, 2025

    ಗದಗ| ಸಾರಿಗೆ ಬಸ್ ಅಪಘಾತ: ತಪ್ಪಿದ ಭಾರಿ ದುರಂತ!

    June 9, 2025

    ಹೃದಯವಿದ್ರಾವಕ ಘಟನೆ: 6 ವರ್ಷದ ಮಗಳನ್ನೇ ಕೊಲೆಗೈದ ತಾಯಿ!

    June 9, 2025

    ಮಂಡ್ಯದ ಮದ್ದೂರು ಬಳಿ ಭೀಕರ ಅಪಘಾತ: ಇಬ್ಬರು ಸಾವು, ಹಲವರಿಗೆ ಗಾಯ

    June 8, 2025

    ನನ್ನ ಮಗ ಇಲ್ಲದೇ ಜೀವನ ಕಷ್ಟವಾಗಿದೆ, ಸೊಸೆಗೆ ಸರ್ಕಾರಿ ಕೆಲಸ ಕೊಡಿ: ಸರ್ಕಾರಕ್ಕೆ ರೇಣುಕಾಸ್ವಾಮಿ ತಾಯಿ ಮನವಿ!

    June 8, 2025

    ದುಷ್ಕರ್ಮಿಗಳಿಂದ ಭೀಕರ ಹತ್ಯೆಯಾಗಿದ್ದ ಸುಹಾಸ್ ಶೆಟ್ಟಿ​ ಕೊಲೆ ಕೇಸ್​ NIA ಹೆಗಲಿಗೆ!

    June 8, 2025

    ಆಲಮಟ್ಟಿ ಜಲಾಶಯ ಎತ್ತರಕ್ಕೆ ‘ಮಹಾ’ ಕ್ಯಾತೆ: ವಿಜಯಪುರ ರೈತರ ಪ್ರತಿತಂತ್ರ: ಹೋರಾಟಕ್ಕೆ ವೇದಿಕೆ ಸಿದ್ದ!

    June 8, 2025

    Dharavad: ಭವಿಷ್ಯದಲ್ಲಿ ಜಾಗತಿಕ ಉತ್ಪಾದನಾ ಹಬ್‌ ಆಗಲಿದೆ ಭಾರತ!

    June 8, 2025

    ಕಾಲ್ತುಳಿತ ಕೇಸ್: ನಿಷ್ಠಾವಂತ ಪೊಲೀಸ್ ಅಧಿಕಾರಿಗಳನ್ನ ಬಲಿಪಶು ಮಾಡಿದ ಸರ್ಕಾರ- ದತ್ತಮೂರ್ತಿ ಕುಲಕರ್ಣಿ!

    June 8, 2025

    ಕಾಲ್ತುಳಿತ ದುರಂತ ಕೇಸ್: ನಾಳೆ ರಾಯಚೂರಿನಲ್ಲಿ ನಡೆಯಬೇಕಿದ್ದ ಸಿಎಂ ಕಾರ್ಯಕ್ರಮ ದಿಢೀರ್ ರದ್ದು!

    June 8, 2025

    ರಾಮನಗರದಲ್ಲಿ ನೈತಿಕ ಪೊಲೀಸ್ ಗಿರಿ: ಬೈಕ್‌ನಲ್ಲಿ ಹೋಗ್ತಿದ್ದ ಹಿಂದೂ ಯುವಕ, ಅನ್ಯಕೋಮಿನ ಯುವತಿ ಅಡ್ಡಗಟ್ಟಿ ಬೆದರಿಕೆ!

    June 8, 2025

    ಒಂಟಿ ಮಹಿಳೆಯರೇ ಇವರ ಟಾರ್ಗೆಟ್: ಮೂವರು ಸರಗಳ್ಳರು ಅರೆಸ್ಟ್!

    June 8, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.