ಮಡಕೆ ಮಾಡುವಡೆ ಮಣ್ಣೆ ಮೊದಲು ತೊಡಿಗೆಯ ಮಾಡುವಡೆ ಹೊನ ಮೊದಲು ಶಿವಪತವನರಿವಡೆ ಗುರುಪಥವೆ ಮೊದಲು ಕೂಡಲಸಂಗಮದೇರನರಿವಡೆ ಶರಣರ ಸಂಗವೇ ಮೊದಲು. ಆಚಾರವೇ ಸ್ವರ್ಗ ಅನಾಚಾರವೇ ನರಕ.
ಮಾಡಿ ಮಾಡಿ ಕೆಟ್ಟವರು ಮನವಿಲ್ಲದೆ ನೀಡಿ ನೀಡಿ ಕೆಟ್ಟವರು ನಿಜವಿಲ್ಲದೆ ಮಾಡುವ ನೀಡುವ ನಿಜಗುಣವುಳ್ಳಡೆ ಕೂಡಿ ಕೊಂಬ ನಮ್ಮ ಕೂಡಲಸಂಗಮದೇವ.ಈ ಪುಣ್ಯದ ಭೂಮಿಯಲ್ಲಿ ಶ್ರೇಷ್ಠ ನಾಯಕನಾಗಿ ಬೆಳೆದವರು ಬಸವಣ್ಣನವರು.
ಬಸವಣ್ಣನವರ ಆದರ್ಶ ತತ್ವಗಳನ್ನು ಪ್ರತಿಯೊಬ್ಬರು ರೂಡಿಸಿಕೊಳ್ಳಬೇಕೆಂದು ಹೇಳಿದರು. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಹೊಸ ಬಸ್ ನಿಲ್ದಾಣದಿಂದ ರಬಕವಿಯ ಶ್ರೀ ವಿರಕ್ತಮಠದವರಿಗೆ ವಾದ್ಯ ಮೇಳದೊಂದಿಗೆ ಶ್ರೀ ಬಸವೇಶ್ವರ ಭಾವಚಿತ್ರ ಮೆರವಣಿಗೆ ಮಾಡುವುದರ ಮುಖಾಂತರ ಅದ್ದೂರಿಯಾಗಿ ಬಸವ ಜಯಂತಿ ಕಾರ್ಯಕ್ರಮ ನಡೆಯಿತು.
kshaya Tritiya 2025: ಅಕ್ಷಯ ತೃತೀಯದಂದೇ ಚಿನ್ನ ಖರೀದಿಸಲು ಕಾರಣವೇನು..? ಇಲ್ಲಿದೆ ಮಾಹಿತಿ
ಇದೇ ಸಂದರ್ಭದಲ್ಲಿ ಪರಮಪೂಜ್ಯ ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳು ಬ್ರಹ್ಮಾನಂದ ಮಠ. ತೇರದಾಳ ಶಾಸಕ ಸಿದ್ದು ಸವದಿ.ಮಾಹಾದೇವ ದುಪದಾಳ.ಸಂಜಯ ತೇಗಿ.ಪ್ರಶಾಂತ ಪಾಲಬಾವಿ.ಮಾಹಾದೇವ ಕೋಟ್ಯಾಳ.ಬಾಬು ಮಾಹಾಜನ.ಮಲಪ್ಪಾ ಕುಚನೂರ.ರವಿ ಗಡಾದ.ರಾಮಣ್ಣ ಹುಲಕುಂದ.ಈರಣ್ಣಾ ಗುಣಕಿ.ಚಿದಾನಂದ ಸೋಲ್ಲಾಪುರ.ಬಸವರಾಜ ತೇಗಿ.ನೀಲಕಂಠ ಮುತ್ತುರ.ಸುಭಾಷ ಮದರಖಂಡಿ.ಸಿದ್ದು ಅರಬಳ್ಳಿ.ಗುರುಪ್ಪಾಯ್ಯ ಅಮ್ಮನಗಿಮಠ.ಬಸು ಅಮ್ಮನಿಗಿಮಠ.ಸಂಜು ತೇಲಿ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.