ಇಂದಿನ ಪೀಳಿಗೆಯಲ್ಲಿ, ಪುಸ್ತಕಗಳ ಬದಲಿಗೆ ಫೋನ್ ಯಾವಾಗಲೂ ಕೈಯಲ್ಲಿರುತ್ತದೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ನಮ್ಮ ಕಾರ್ಯಗಳನ್ನು ಪೂರ್ಣಗೊಳಿಸಲು ತುಂಬಾ ಉಪಯುಕ್ತವಾಗಿದೆ. ಆದರೆ ಈ ಫೋನಿನ ಅತಿಯಾದ ಬಳಕೆ ಜೀವಕ್ಕೆ ಗಂಭೀರ ಹಾನಿಯನ್ನುಂಟು ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಮುಖ್ಯಮಂತ್ರಿ ಆಸೆ ಇಟ್ಟುಕೊಂಡವರು ಸಿಎಂ ಬದಲಾವಣೆಯ ಊಹಾಪೋಹ ಹಬ್ಬಿಸುತ್ತಿದ್ದಾರೆ: ಯತೀಂದ್ರ!
ಅತಿಯಾದ ಮೊಬೈಲ್ ಬಳಕೆಯಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿದೆ ಎಂದು ಅನೇಕ ಸಂಶೋಧನೆಗಳಿಂದ ತಿಳಿದುಬಂದಿದೆ. ಇದು ನಮ್ಮ ದೇಹಕ್ಕೆ ಎಷ್ಟು ಉಪಯುಕ್ತವಾಗಿದೆಯೋ ಅಷ್ಟೇ ಹಾನಿಯನ್ನುಂಟು ಮಾಡುತ್ತದೆ. ಹಾಗಾದರೆ ಫೋನ್ ಅನ್ನು ಹೆಚ್ಚು ಬಳಸುವುದರಿಂದ ಆಗುವ ಅನಾನುಕೂಲಗಳೇನು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಫೋನ್ ಬಳಕೆ ಅನೇಕ ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಆದರೆ ಅದನ್ನು ಹೆಚ್ಚು ಬಳಸುವುದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಇಂದಿನ ಕಾಲದಲ್ಲಿ, ನಾವು ಫೋನ್ ಮೇಲೆ ಎಷ್ಟು ಅವಲಂಬಿತರಾಗಿದ್ದೇವೆ ಎಂದರೆ ಅದರ ವ್ಯಸನಿಗಳಾಗಿದ್ದೇವೆ. ಈ ರೀತಿಯ ಅಭ್ಯಾಸ ನಮಗೆ ಅನೇಕ ರೀತಿಯ, ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ಫೋನ್ ನಿಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳಿ.
ಫೋನ್ ನಿಂದ ಹೊರಹೊಮ್ಮುವ ವಿದ್ಯುತ್ಕಾಂತೀಯ ವಿಕಿರಣ ಮತ್ತು ಫೋನ್ ಪರದೆಯಿಂದ ಹೊರಸೂಸುವ ನೀಲಿ ಬೆಳಕು ನಮ್ಮ ದೇಹಕ್ಕೆ ಹಾನಿ ಮಾಡುತ್ತದೆ. ವಿಶೇಷವಾಗಿ ನಾವು ಫೋನ್ ಅನ್ನು ತಲೆಯ ಬಳಿ ಇಟ್ಟಾಗ, ಅಂದರೆ, ಫೋನ್ ಮತ್ತು ಬಳಕೆದಾರರ ನಡುವಿನ ಅಂತರ ಕಡಿಮೆಯಿದ್ದರೆ, ದೇಹದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಹಾಗಾಗಿ ಆರೋಗ್ಯಕ್ಕೆ ಸಂಬಂಧಿತ ಕಾಯಿಲೆಗಳ ಅಪಾಯವು ಹೆಚ್ಚಾಗುತ್ತದೆ. ಅತಿಯಾದ ಫೋನ್ ಬಳಕೆಯು ದೈಹಿಕ ಮಾತ್ರವಲ್ಲದೆ ಮಾನಸಿಕ ಸಮಸ್ಯೆಗಳನ್ನು ಉಂಟು ಮಾಡಬಹುದು. ಹೆಚ್ಚು ಫೋನ್ ಬಳಕೆಯಿಂದ ಯಾವ ರೋಗಗಳು ಉಂಟಾಗಬಹುದು ತಿಳಿದುಕೊಳ್ಳಿ.
ಮೊಬೈಲ್ ಫೋನ್ ಗಳ ಅತಿಯಾದ ಬಳಕೆಯು ಕಣ್ಣುಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ದೀರ್ಘಕಾಲದ ವರೆಗೆ ಫೋನ್ ನಲ್ಲಿ ಕೆಲಸ ಮಾಡುವುದರಿಂದ ಕಣ್ಣು ಮಸುಕಾಗುವುದು, ಕಿರಿಕಿರಿಯಂತಹ ಸಮಸ್ಯೆಗಳು ಉಂಟಾಗಬಹುದು. ರಾತ್ರಿ ಮಲಗುವ ಮೊದಲು ಫೋನ್ ಬಳಸುವುದರಿಂದ ಮೆಲಟೋನಿನ್ ಹಾರ್ಮೋನ್ ಮಟ್ಟ ಕಡಿಮೆಯಾಗುತ್ತದೆ, ಇದು ನಿದ್ರೆಗೆ ತೊಂದರೆ ಉಂಟು ಮಾಡುತ್ತದೆ. ಇದಲ್ಲದೆ, ಫೋನ್ ಗಳನ್ನು ನಿರಂತರವಾಗಿ ಕೈಯಲ್ಲಿ ಹಿಡಿದುಕೊಳ್ಳುವುದು ಅಥವಾ ಕುತ್ತಿಗೆ ಬಗ್ಗಿಸಿ ಮೊಬೈಲ್ ನೋಡುವುದರಿಂದ ದೇಹವು ಕೆಟ್ಟ ಭಂಗಿಯಿಂದ ಬಳಲು ಕಾರಣವಾಗುತ್ತದೆ. ಫೋನ್ ಬಳಸುವಾಗ ದೀರ್ಘಕಾಲ ಕುಳಿತುಕೊಳ್ಳುವುದು, ದೈಹಿಕ ಚಟುವಟಿಕೆಯ ಕೊರತೆ, ಒತ್ತಡ ಮತ್ತು ತಲೆನೋವು ಹೃದಯ ಮತ್ತು ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.
ಇದರಿಂದ ರಕ್ಷಣೆ ಪಡೆಯುವುದು ಹೇಗೆ?
ನಿಮ್ಮ ಮೊಬೈಲ್ ಫೋನ್ ಗಳನ್ನು ಆದಷ್ಟು ಹಾಸಿಗೆಯಿಂದ ದೂರವಿಡಿ.
ನಿಮ್ಮ ಫೋನ್ ಅನ್ನು ಪರಿಶೀಲಿಸಲು ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿಕೊಳ್ಳಿ.
ಕೆಲಸ ಅಥವಾ ಅಧ್ಯಯನದ ಸಮಯದಲ್ಲಿ ಫೋನ್ ಅನ್ನು ದೂರವಿಡಿ.