ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರೋಚಕವಾಗಿ ಗೆದ್ದು ಬೀಗಿದೆ. ಪಂದ್ಯದಲ್ಲಿ ಅಬ್ಬರದ ಆಟವಾಡಿದ ರೊಮಾರಿಯೊ ಶೆಫರ್ಡ್ ಕೇವಲ 14 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಸಿಡಿಸುವ ಮೂಲಕ ಐಪಿಎಲ್ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ಇನ್ನಿಂಗ್ಸ್ನ ಕೊನೆಯ ಓವರ್ನಲ್ಲಿ ಮತೀಶ ಪಥಿರಣ ಬೌಲಿಂಗ್ಗೆ 20 ರನ್ ಚಚ್ಚಿದ ಶೆಫರ್ಡ್ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ವೇಗದ ಅರ್ಧಶತಕ ಸಿಡಿಸಿದ 2ನೇ ಆಟಗಾರ ಎಂಬ ಹೆಗ್ಗಳಿಗೆಕೆ ಪಾತ್ರರಾದರು. ಜೊತೆಗೆ ಈ ಸಾಧನೆ ಮಾಡಿದ ಕನ್ನಡಿಗ ಕೆ.ಎಲ್ ರಾಹುಲ್, ಪ್ಯಾಟ್ ಕಮ್ಮಿನ್ಸ್ ಅವರ ದಾಖಲೆಗಳನ್ನೂ ಸರಿಗಟ್ಟಿದರು
ವೇಗದ ಫಿಫ್ಟಿ ಬಾರಿಸಿದ ಟಾಪ್-5 ಪ್ಲೇಯರ್ಸ್
ಯಶಸ್ವಿ ಜೈಸ್ವಾಲ್ – ರಾಜಸ್ಥಾನ್ ರಾಯಲ್ಸ್ 13 ಎಸೆತ (2023)
ರೊಮಾರಿಯೊ ಶೆಫರ್ಡ್ – ಆರ್ಸಿಬಿ – 14 ಎಸೆತ (2025)
ಕೆ.ಎಲ್ ರಾಹಿಲ್ – ಪಿಬಿಕೆಎಸ್ – 14 ಎಸೆತ (2018)
ಪ್ಯಾಟ್ ಕಮ್ಮಿನ್ಸ್ – ಕೆಕೆಆರ್ – 14 ಎಸೆತ (2022)
ಯೂಸೂಫ್ ಪಠಾಣ್ – ಕೆಕೆಆರ್ – 15 ಎಸೆತ (2014)