Close Menu
Ain Live News
    Facebook X (Twitter) Instagram YouTube
    Saturday, June 14
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    Hubli: ಬಸ್ʼಗಳಲ್ಲಿ ಯುಪಿಐ ಪಾವತಿ ವ್ಯವಸ್ಥೆ ವಿಸ್ತರಣೆ: ಭರತ್. ಎಸ್

    By AIN AuthorNovember 15, 2023
    Share
    Facebook Twitter LinkedIn Pinterest Email
    Demo

    ಹುಬ್ಬಳ್ಳಿ: ರಾಜ್ಯದಲ್ಲಿಯೇ ಮೊದಲ ಬಾರಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾದ ಯುಪಿಐ ಪಾವತಿ ವ್ಯವಸ್ಥೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈ ವ್ಯವಸ್ಥೆಯನ್ನು ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ಎಲ್ಲ ಬಸ್ ಗಳಿಗೂ ವಿಸ್ತರಿಸಲಾಗಿದ್ದು, ಶೀಘ್ರವಾಗಿ ಇನ್ನುಳಿದ ಎಲ್ಲಾ ಬಸ್ಸುಗಳಿಗೂ ವಿಸ್ತರಿಸಲಾಗುತ್ತದೆ ಎಂದು ವ್ಯವಸ್ಥಾಪಕ ನಿರ್ದೇಶಕ ಭರತ್ ತಿಳಿಸಿದ್ದಾರೆ.

    ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಆರಾಮದಾಯಕ ಹಾಗೂ ಪ್ರಯಾಣಿಕ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ಸಂಸ್ಥೆಯಲ್ಲಿ ಹಲವಾರು ಉಪಕ್ರಮಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಗದು ರಹಿತ ವ್ಯವಹಾರಕ್ಕೆ ಉತ್ತೇಜನ ನೀಡುತ್ತಿವೆ‌. ಈ ಹಿನ್ನೆಲೆಯಲ್ಲಿ ಫೋನ್ ಪೇ ಕಂಪನಿಯ ಸಹಯೋಗದಲ್ಲಿ ಯುಪಿಐ ಮೂಲಕ ಹಣ ಸ್ವೀಕೃತಿ ವ್ಯವಸ್ಥೆಯನ್ನು ಹುಬ್ಬಳ್ಳಿ ಗ್ರಾಮಾಂತರ 3ನೇ ಘಟಕದ ಬಸ್ಸುಗಳಲ್ಲಿ ಸಪ್ಟೆಂಬರ್ 1ರಿಂದ ಪ್ರಾಯೋಗಿಕವಾಗಿ ಆರಂಭಿಸಲಾಗಿತ್ತು.

    ಈ ನೂತನ‌ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ನಿರ್ವಾಹಕರಿಗೆ ಪ್ರತ್ಯೇಕ ಸ್ಟ್ಯಾಟಿಕ್ ಕ್ಯೂ ಆರ್ ಕೋಡ್ ನೀಡಲಾಗಿದೆ. ನಿರ್ವಾಹಕರ ಟಿಕೆಟ್ ವಿತರಣೆ ಯಂತ್ರದಲ್ಲಿ ಅವಶ್ಯಕ ಮಾರ್ಪಾಡುಗಳನ್ನು ಮಾಡಲಾಗಿದೆ ಹಾಗೂ ನಿರ್ವಾಹರಿಗೆ ಅಗತ್ಯ ತರಬೇತಿ ನೀಡಲಾಗಿದೆ. ಪ್ರಯಾಣಿಕರು ಫೋನ್ ಪೇ,ಗೂಗಲ್ ಪೇ ಮತ್ತಿತರ ಯಾವುದೇ ಯುಪಿಐ ಅಪ್ಲಿಕೇಷನ್ ಮೂಲಕ ಹಣ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.

    ವಯಸ್ಸಾದಂತೆ ಈ ನೋವುಗಳು ನಿಮ್ಮನ್ನ ಕಾಡುತ್ತಿದ್ದರೆ.. ಇಲ್ಲಿದೆ ಉಚಿತ ಸಲಹೆ ಸರಳ ಚಿಕಿತ್ಸೆ- ಪರಿಹಾರ

    ಚಿಲ್ಲರೆ ಸಮಸ್ಯೆ ಪರಿಹಾರ, ನಗದು ರಹಿತ ಪ್ರಯಾಣ ಹಾಗೂ ಸಮಯದ ಉಳಿತಾಯ ಮುಂತಾದ ಪ್ರಯೋಜನಗಳಿಂದಾಗಿ ಯುಪಿಐ ವ್ಯವಸ್ಥೆಗೆ ಸಾರ್ವಜನಿಕರಿಂದ ಹಾಗೂ ಸಿಬ್ಬಂದಿಗಳಿಂದ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗಿದೆ.  ಇಲ್ಲಿಯವರೆಗೆ 27,498 ಯುಪಿಐ ಪಾವತಿ ವಹಿವಾಟುಗಳು ನಡೆದಿದ್ದು ರೂ.71,60,337ಮೊತ್ತವು ಪಾವತಿಯಾಗಿರುತ್ತದೆ. ಪ್ರಸ್ತುತ ಫೊನ್ ಪೇ ಕಂಪನಿಯ ಸಹಯೋಗದಲ್ಲಿ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ಎಲ್ಲಾ 452 ಬಸ್ಸುಗಳಿಗೆ ವಿಸ್ತರಿಸಲಾಗಿದೆ.

    ಬಹಳಷ್ಟು ಅನುಕೂಲತೆಗಳ ಹಿನ್ನೆಲೆಯಲ್ಲಿ ಯುಪಿಐ ಪಾವತಿ ವ್ಯವಸ್ಥೆಯನ್ನು ಇತರೆ ಬಸ್ಸುಗಳಿಗೂ ವಿಸ್ತರಿಸುವಂತೆ ಸಾರ್ವಜನಿಕರಿಂದ ಹಾಗೂ ಸಿಬ್ಬಂದಿಗಳನ್ನು ಬೇಡಿಕೆ ಬರುತ್ತಿದೆ. ಈ ವ್ಯವಸ್ಥೆಯನ್ನು ಸಂಸ್ಥೆಯ ಇನ್ನುಳಿದ ಬಸ್ಸುಗಳಿಗೆ ವಿಸ್ತರಿಸಲು ಅವಶ್ಯಕ ಸಹಯೋಗ ನೀಡುವುದಕ್ಕೆ ಹಲವಾರು ಸಾರ್ವಜನಿಕ ಹಾಗೂ ಖಾಸಗಿ ಸೇವಾದಾರ ಕಂಪನಿಗಳು ಮುಂದೆ ಬಂದಿವೆ.ಈ ಬಗ್ಗೆ ವಿದಿ ವಿಧಾನಗಳನ್ನು ಅಂತಿಮಗೊಳಿಸಿ ಶೀಘ್ರವಾಗಿ ಸಂಸ್ಥೆಯ ಎಲ್ಲಾ 4581 ಬಸ್ ಗಳಲ್ಲಿ ಈ ವ್ಯವಸ್ಥೆಯನ್ನು ವಿಸ್ತರಿಸಲಾಗುತ್ತದೆ. ಯುಪಿಐ ಪಾವತಿ ಜೊತೆಗೆ ಬಸ್ಸುಗಳಲ್ಲಿ ನಗದು ಪಾವತಿ ವ್ಯವಸ್ಥೆಯೂ ಲಭ್ಯವಿರುತ್ತದೆ ಎಂದು ಭರತ್ ಮಾಹಿತಿ ನೀಡಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    ಭೀಕರ ಅಪಘಾತ : ಧಾರವಾಡ ಅಪರ ಜಿಲ್ಲಾಧಿಕಾರಿ ಕಾರಿಗೆ ಸಿಲಿಂಡರ್ ತುಂಬಿದ ಕ್ಯಾಂಟರ್ ಡಿಕ್ಕಿ!

    June 14, 2025

    ಕಲ್ಯಾಣ ಕರ್ನಾಟಕದಲ್ಲಿ ಅಭಿವೃದ್ಧಿಯ ಪಥ, ಅಭಿವೃದ್ಧಿಯ ರಥ: ಡಿಸಿಎಂ ಡಿ.ಕೆ. ಶಿವಕುಮಾರ್

    June 14, 2025

    ಮೂರು ವರ್ಷದಲ್ಲಿ 13000 ಕೋಟಿ KKRDB ಗೆ ನಮ್ಮ ಸರ್ಕಾರ ನೀಡಿ ದಾಖಲೆ ನಿರ್ಮಿಸಿದೆ: ಸಿಎಂ ಸಿದ್ದರಾಮಯ್ಯ

    June 14, 2025

    ನಿರುದ್ಯೋಗ ಯುವಕರಿಗಾಗಿ ಬೋಸ್ಟನ್ ಇನ್ಸ್ಟಿಟ್ಯೂಟ್ ಆಫ್ ಅನಾಲಿಟಿಕ್ಸ್ ಕ್ಯಾಂಪಸ್ ಆರಂಭ: ಶ್ರೀನಿವಾಸ ಕ್ಯಾರಕಟ್ಟಿ

    June 14, 2025

    ನೆರೆಯಿಂದ ಹಾಳಾದ ಫಲಾನುಭವಿಗಳಿಗೆ ಪರಿಹಾರ ಸಿಕ್ಕಿಲ್ಲ: ಸಚಿವ ಲಾಡ್

    June 14, 2025

    ಡಿಸೆಂಬರ್’ನಲ್ಲಿ ಸಿಎಂ ಸ್ಥಾನದಿಂದ ಕೆಳಗಿಳಿಯುವ ಸಿದ್ದರಾಮಯ್ಯ ಜಾತಿಗಣತಿ ಮರುಸಮೀಕ್ಷೆ ಹೇಗೆ ಮಾಡಿಸ್ತಾರೆ?: ಹೆಚ್ ವಿಶ್ವನಾಥ್

    June 14, 2025

    ಕೋಲಾರ: ಹೆಣ್ಣು ಮಗುವಿಗೆ ಜನ್ಮ ನೀಡಿ ಬಾಣಂತಿ ಪರಾರಿ!

    June 14, 2025

    ಕೋಲಾರ: ವರ್ತೂರಿಗೆ ಕಮಿಷನ್ನೆ ಮಾಸಿಕ ಆದಾಯ – ಶಾಸಕ ಕೊತ್ತೂರು ಮಂಜುನಾಥ್

    June 14, 2025

    Agumbe Ghat: ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರ ಬಂದ್!

    June 14, 2025

    Bagalkote Incident: ನರ್ಸ್ ಎಂದು ಹೇಳಿ 1 ದಿನದ ಮಗು ಕದ್ದೊಯ್ದ ಕಳ್ಳಿ..! ತಾಯಿಯ ಗೋಳಾಟ

    June 14, 2025

    ಮಗುವನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ತಾಯಿ ಎಸ್ಕೇಪ್..! ಅನಾಥವಾಯ್ತು ಕಂದಮ್ಮ

    June 14, 2025

    ಛೇ ಇದೆಂಥಾ ವಿಕೃತಿ: ಹಸುವಿನ ಕೆಚ್ಚಲು ಕೊಯ್ದ ದುರುಳರು!

    June 14, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.