ಸೂಪರ್ ಸ್ಟಾರ್ ರಜನಿಕಾಂತ್ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ಜೈಲರ್ 2 ಅಂಗಳದಿಂದ ಮತ್ತೊಂದು ಕ್ರೇಜಿಯೆಸ್ಟ್ ಸಮಾಚಾರ ಹೊರಬಿದ್ದಿದೆ. ಈಗಾಗಲೇ ತಾರಾಬಳಗದ ಮೂಲಕ ಸುದ್ದಿಯಾಗಿರುವ ಜೈಲರ್ ಸೀಕ್ವೆಲ್ ಗೆ ದಕ್ಷಿಣ ಚಿತ್ರರಂಗದ ಬಹುಮುಖ ಪ್ರತಿಭೆ ನಟ ಫಹಾದ್ ಫಾಸಿಲ್ ಎಂಟ್ರಿ ಕೊಡಲಿದ್ದಾರಂತೆ. ನಟ ಶಿವರಾಜ್ ಕುಮಾರ್ ಈ ಚಿತ್ರದಲ್ಲಿ ನಟಿಸೋದು ಖಚಿತವಾಗಿದ್ದು, ತೆಲುಗಿನ ಬಾಲಯ್ಯ ಕೂಡ ಜೈಲರ್ 2 ಭಾಗವಾಗಲಿದ್ದಾರೆ ಎನ್ನಲಾಗಿತ್ತು. ಇದೀಗ ಪುಷ್ಪ ಖಳನಾಯಕ ಫಹಾದ್ ಫಾಸಿಲ್ ಕೂಡ ಈ ಚಿತ್ರದಲ್ಲಿರಲಿದ್ದಾರೆ ಎಂಬ ಗುಲ್ಲೆದಿದೆ.
ರಜನಿಯ ವೆಟ್ಟೈಯನ್ ನಲ್ಲಿ ನಟಿಸಿದ್ದ ಫಹಾದ್ ಫಾಸಿಲ್ ಮತ್ತೊಮ್ಮೆ ತಲೈವರ್ ಜೊತೆ ಅಭಿನಯಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಫಹಾದ್ ಗಾಗಿ ನಿರ್ದೇಶಕ ನೆಲ್ಸನ್ ದೀಲಿಪ್ ಕುಮಾರ್ ವಿಭಿನ್ನವಾದ ಪಾತ್ರ ಡಿಸೈನ್ ಮಾಡುತ್ತಿದ್ದಾರಂತೆ. ಶೀಘ್ರದಲ್ಲೇ ಜೈಲರ್ ಸೀಕ್ವೆಲ್ ಗೆ ಫಹಾದ್ ಎಂಟ್ರಿ ಬಗ್ಗೆ ಸನ್ ಪಿಕ್ಚರ್ಸ್ ಮಾಹಿತಿ ನೀಡಲಿದೆಯಂತೆ.
ಜೈಲರ್ ಮೊದಲ ಭಾಗ ಬಾಕ್ಸ್ ಆಫೀಸ್ನಲ್ಲಿ ಧೂಳ್ ಎಬ್ಬಿಸಿತ್ತು. ಬರೋಬ್ಬರಿ 600 ಕೋಟಿ ರೂ.ಗಳಿಗೂ ಹೆಚ್ಚು ಗಳಿಕೆ ಮಾಡಿತ್ತು. ಇದೀಗ ಜೈಲರ್ 2 ಚಿತ್ರದ ಬಗ್ಗೆ ಭಾರಿ ನಿರೀಕ್ಷೆಗಳಿವೆ. ನೆಲ್ಸನ್ ದಿಲೀಪ್ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಶಿವ ರಾಜ್ಕುಮಾರ್, ರಮ್ಯಾ ಕೃಷ್ಣ, ಎಸ್ಜೆ ಸೂರ್ಯ ಯೋಗಿ ಬಾಬು, ಮಿರ್ನಾ ಮೆನನ್ ಮತ್ತು ಇತರರು ಇದ್ದಾರೆ. ಅನಿರುದ್ಧ್ ರವಿಚಂದರ್ ಚಿತ್ರಕ್ಕೆ ಸಂಗೀತ ಒದಗಿಸುತ್ತಿದ್ದಾರೆ.