ಕಲಬುರಗಿ: ಕೌಟುಂಬಿಕ ಕಲಹ ಹಿನ್ನಲೆ ಪತ್ನಿ ಇಬ್ಬರು ಮಕ್ಕಳ್ಳನ್ನ ಕೊಲೆ ಮಾಡಿ ತಾನೂ ಕೂಡ ಮನೆಯ ಫ್ಯಾನ್ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ನಗರದ ಗಾಬರೆ ಲೇಔಟ್ನ ಅಪಾರ್ಟ್ಮೆಂಟ್ನಲ್ಲಿ ಘಟನೆ ನಿನ್ನೆ ನಡೆದಿದೆ.
ಕಲಬುರಗಿಯ ಟೆಸ್ಕಾಂನಲ್ಲಿ ಸೀನಿಯರ್ ಅಕೌಂಟೆಂಟ್ ಆಗಿದ್ದ ಸಂತೋಷ್ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನ ಕೊಂದು ತಾನೂ ನೇಣಿಗೆ ಶರಣಾಗಿದ್ದಾನೆ. ಶೃತಿ (35), ಮಕ್ಕಳಾದ ಮುನಿಶ್(09) ಹಾಗೂ ನಾಲ್ಕು ತಿಂಗಳ ಮಗು ಅನಿಶ್ ನನ್ನ ಕೊಲೆ ಮಾಡಿ ಸಂತೋಷ್, ನೇಣಿಗೆ ಶರಣಾಗಿದ್ದಾರೆ.
ಮಧುಮೇಹಿಗಳ ಗಮನಕ್ಕೆ: ಶುಗರ್ ಕಂಟ್ರೋಲ್ ಮಾಡಲು ಖಾಲಿ ಹೊಟ್ಟೆಗೆ ಈ ಒಣ ಹಣ್ಣು ಸೇವಿಸಿ!
ಪೊಲೀಸ್ ಕಮೀಷನರ್ ಕೂಡ ಸ್ಥಳಕ್ಕೆ ಧಾವಿಸಿ ಪರೀಶಿಲನೆ ಮಾಡಿದ್ದು, ಸದ್ಯ ಮೇಲ್ನೋಟಕ್ಕೆ ಕೌಟುಂಬಿಕ ಕಲಹದಿಂದಲೇ ಸಂತೋಷ್ ತನ್ನ ಪತ್ನಿ, ಮಕ್ಕಳನ್ನ ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನೋದು ಗೊತ್ತಾಗಿದೆ. ನಾಲ್ವರ ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಜಿಮ್ಸ್ ಆಸ್ಪತ್ರೆಯ ಶವಗಾರಕ್ಕೆ ಕಳುಹಿಸಲಾಗಿದೆ.