ಭಾರತೀಯ ಚಿತ್ರರಂಗದ ಪ್ರತಿಭಾನ್ವಿತ ವ್ಯಕ್ತಿ, ಖ್ಯಾತ ಮೇಕಪ್ ಕಲಾವಿದ ವಿಕ್ರಮ್ ಗಾಯಕ್ವಾಡ್ ಅವರು ಮುಂಬೈನಲ್ಲಿ ನಿಧನರಾದರು. ಗಾಯಕವಾಡ್ ಅನೇಕ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗಳಿಸಿದರು ಮತ್ತು ಹಿಂದಿ, ಮರಾಠಿ ಮತ್ತು ದಕ್ಷಿಣ ಭಾರತೀಯ ಚಲನಚಿತ್ರೋದ್ಯಮಗಳಲ್ಲಿ ತಮ್ಮ ಛಾಪು ಮೂಡಿಸಿದರು.
Mother’s Day 2025: ತಾಯಂದಿರ ದಿನದ ಇತಿಹಾಸ ಮತ್ತು ಮಹತ್ವ ಏನು ಗೊತ್ತಾ ? ಇಲ್ಲಿದೆ ಮಾಹಿತಿ
ವಿಕ್ರಮ್ ಗಾಯಕ್‌ವಾಡ್ ನಿಧನಕ್ಕೆ ಕಾರಣವೇನು ಎಂಬುದು ರಿವೀಲ್ ಆಗಿಲ್ಲ. ಅವರ ನಿಧನಕ್ಕೆ ಆಮೀರ್ ಖಾನ್,ರಣವೀರ್ ಸಿಂಗ್, ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕ್‌ನಾಥ್ ಶಿಂಧೆ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಅಂದಹಾಗೆ, ಸಂಜು, ಪಿಕೆ, ದಂಗಲ್, ರಂಗ್ ದೆ ಬಸಂತಿ, 3 ಈಡಿಯಟ್ಸ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ವಿಕ್ರಮ್ ಕೆಲಸ ಮಾಡಿದ್ದಾರೆ. ಬಾಲಿವುಡ್ ಸಿನಿಮಾ ತಾರೆಯರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ.