ಕಲೆಗೆ ಯಾವುದೇ ಭಾಷೆ, ಧರ್ಮವಿಲ್ಲ. ಇಲ್ಲಿ ಅಭಿನಯವೇ ಎಲ್ಲಾ..ದಕ್ಷಿಣ ಭಾರತ ಮಾತ್ರವಲ್ಲ ಬಾಲಿವುಡ್ ಅಂಗಳದಲ್ಲಿಯೂ ಮಿಂಚುತ್ತಿರುವ ನಟಿ ಸಮಂತಾ. ಈ ನಟಿಗಾಗಿ ಅಭಿಮಾನಿಯೊಬ್ಬ ದೇಗುಲ ಕಟ್ಟಿಸಿದ್ದಾರೆ. ಮೊನ್ನೆಯಷ್ಟೇ ಸಮಂತಾ ಹುಟ್ಟುಹಬ್ಬದ ದಿನದಂದು ಇಲ್ಲಿ ವಿಶೇಷ ಪೂಜೆ ಮಾಡಿ ಮಕ್ಕಳಿಗೆ ಅನ್ನದಾಸೋಹ ಮಾಡಲಾಗಿದ್ದು, ಆ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಸಮಂತಾ ಅಭಿಮಾನಿಯೊಬ್ಬರು ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯ ಅಲಪಾಡು ಗ್ರಾಮದಲ್ಲಿ ಅವರಿಗಾಗಿ ದೇವಾಲಯವನ್ನು ನಿರ್ಮಿಸಿದ್ದಾರೆ. ಅಲ್ಲಿ ಸಮಂತಾ ಎರಡು ಮೂರ್ತಿ ಸ್ಥಾಪಿಸಿ ಪೂಜೆ ಮಾಡುತ್ತಿದ್ದಾರೆ ಸಂದೀಪ್ ಎಂಬ ಅಭಿಮಾನಿ.
https://twitter.com/i/status/1916853228634767544
ಸಮಂತಾ ಕ್ರಿಶ್ಚಿಯನ್ ಧರ್ಮದವರು. ಆದ್ರೆ ಹಿಂದೂ ದೇಗುಲಗಳಿಗೆ ಅವರು ಹೆಚ್ಚಾಗಿ ಭೇಟಿ ಕೊಡ್ತಾರೆ. ನೆಮ್ಮದಿ ಶಾಂತಿ ಅರಸಿ ದೇವರ ಮೊರೆ ಹೋಗುತ್ತಾರೆ. ಸದ್ಯ ಸಮಂತಾ ನಟನೆ ಜೊತೆಗೆ ನಿರ್ಮಾಣದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ‘ಶುಭಂ’ ಸಿನಿಮಾಗೆ ಅವರು ಬಂಡವಾಳ ಹೂಡಿದ್ದಾರೆ. ಅಲ್ಲದೇ ಅತಿಥಿ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಆಯಿತು. ಮೇ 9ರಂದು ‘ಶುಭಂ’ ಸಿನಿಮಾ ರಿಲೀಸ್ ಆಗಲಿದೆ.