ಆಕ್ಲೆಂಡ್: ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಸೋಫಿ ಡಿವೈನ್ ಏಕದಿನ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದಾರೆ. ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಈ ವರ್ಷದ ಏಕದಿನ ವಿಶ್ವಕಪ್ ನಂತರ ಅವರು ಕ್ರಿಕೆಟ್ನಿಂದ ನಿವೃತ್ತಿ ಹೊಂದಲಿದ್ದಾರೆ. ಇದನ್ನು ನ್ಯೂಜಿಲೆಂಡ್ ಕ್ರಿಕೆಟ್ (NZC) ಹೇಳಿಕೆಯಲ್ಲಿ ಬಹಿರಂಗಪಡಿಸಿದೆ.
ಹಳೆಯ ಬಟ್ಟೆ ಎಸೆಯೋದು ಅಥವಾ ದಾನ ಮಾಡೋದು.. ಇದರಲ್ಲಿ ಯಾವುದು ಒಳ್ಳೆಯದು?
ಇಲ್ಲಿಯವರೆಗೆ 152 ಏಕದಿನ ಪಂದ್ಯಗಳನ್ನು ಆಡಿರುವ 35 ವರ್ಷದ ಅನುಭವಿ ಆಲ್ರೌಂಡರ್ 3,990 ರನ್ ಗಳಿಸಿದ್ದಾರೆ. ಇದರಲ್ಲಿ 8 ಶತಕಗಳು ಮತ್ತು 16 ಅರ್ಧಶತಕಗಳು ಸೇರಿವೆ. ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಶ್ರೇಷ್ಠರಾಗಿರುವ ಡಿವೈನ್ 107 ವಿಕೆಟ್ಗಳನ್ನು ಕಬಳಿಸಿದ್ದಾರೆ. ಕಿವೀಸ್ ಪರ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಡಿವೈನ್ ವಿಕೆಟ್ಗಳ ವಿಷಯದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.