Close Menu
Ain Live News
    Facebook X (Twitter) Instagram YouTube
    Wednesday, May 21
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ವಿದ್ಯುತ್‌ ಕಣ್ಣಾಮುಚ್ಚಾಲೆಯಿಂದ ರೈತರು ಕಂಗಾಲು: ವಿಮಾ ಯೋಜನೆ ನೋಂದಣಿಗೂ ನಿರ್ಲಕ್ಷ್ಯ

    By AIN AuthorNovember 15, 2023
    Share
    Facebook Twitter LinkedIn Pinterest Email
    Demo

    ಒಂದೆಡೆ ಬರ, ಇನ್ನೊಂದೆಡೆ ವಿದ್ಯುತ್‌ ಕಣ್ಣಾಮುಚ್ಚಾಲೆಯಿಂದ ರೈತರು ಕಂಗಾಲಿದ್ದಾರೆ. ಈ ನಡುವೆ ಸರಕಾರದ ಯೋಜನೆಗಳು ಸುಸೂತ್ರವಾಗಿ ಅರ್ಹ ಫಲಾನುಭವಿ ರೈತರಿಗೆ ತಲುಪಿಸುವ ಕೆಲಸವಾಗುತ್ತಿಲ್ಲ. ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್‌ ಬಿಮಾ (ವಿಮಾ) ಯೋಜನೆ ನೋಂದಣಿಗೂ ನಿರ್ಲಕ್ಷ್ಯ ತೋರಲಾಗಿದೆ.

    ಸರಕಾರದ ಯೋಜನೆಗಳನ್ನು ತಲುಪಿಸುವ ಹೊಣೆಗಾರಿಕೆ ನಿಭಾಯಿಸುವಲ್ಲಿ ಸಂಬಂಧಿಸಿದ ಅಧಿಕಾರಿಗಳ ಜತೆಗೆ ಶಾಸಕರಾದಿಯಾಗಿ ಜನಪ್ರತಿನಿಧಿಗಳ ಪಾತ್ರವಿದ್ದು, ಜಿಲ್ಲೆಯಲ್ಲಿ ಈ ವಿಚಾರದಲ್ಲಿಇಬ್ಬರೂ ನಿರ್ಲಕ್ಷ್ಯ ತೋರಿರುವುದಕ್ಕೆ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ ನೋಂದಣಿ ಸಂಖ್ಯೆ ಶೇ. 14 ರಷ್ಟು ಮಾತ್ರ ಇರುವುದೇ ಸಾಕ್ಷಿ.

    ಜಿಲ್ಲೆಯ 10 ತಾಲೂಕುಗಳಿಂದ 5,15,064 ರೈತರಿದ್ದಾರೆ. ಇವರಲ್ಲಿ ಫಸಲ್‌ ಬಿಮಾ ಯೋಜನೆಗೆ ನೋಂದಣಿಯಾದವರು 74,850 ಮಾತ್ರ. ಶೇ.86 ರಷ್ಟು ರೈತರು ಯೋಜನೆಯಿಂದ ದೂರವಿದ್ದಾರೆ.

    ಕುಣಿಗಲ್‌ ಹಾಗೂ ತುಮಕೂರು ತಾಲೂಕಲ್ಲಿ ನೋಂದಣಿ ವಿಚಾರದಲ್ಲಿ ತೀರಾ ಕಳಪೆ ಪ್ರಗತಿಯಿದೆ. ಕುಣಿಗಲ್‌ ತಾಲೂಕಿನಲ್ಲಿ 58,778 ರೈತರಲ್ಲಿ ಯೋಜನೆಗೆ ನೋಂದಣಿಯಾದವರು 631 ಮಂದಿ ಮಾತ್ರ. ಹಾಗೆಯೇ ತುಮಕೂರಲ್ಲಿ 67,550 ರೈತರಲ್ಲಿ ನೋಂದಣಿಯಾದವರು 987 ರೈತರು. ಇನ್ನುಳಿದಂತೆ ಚಿಕ್ಕನಾಯಕನಹಳ್ಳಿಯಲ್ಲಿ 46,274ರಲ್ಲಿ8,959 ರೈತರು, ಗುಬ್ಬಿಯಲ್ಲಿ 61,220ರಲ್ಲಿ 2,340, ಕೊರಟಗೆರೆಯಲ್ಲಿ 33,334 ರಲ್ಲಿ6,572, ಮಧುಗಿರಿಯಲ್ಲಿ 50,210 ರಲ್ಲಿ8,987, ಪಾವಗಡದಲ್ಲಿ 38,045ರಲ್ಲಿ 6,744, ಶಿರಾದಲ್ಲಿ 56,154ರಲ್ಲಿ 13,153, ತಿಪಟೂರಲ್ಲಿ 51,754ರಲ್ಲಿ17,142 ಹಾಗೂ ತುರುವೇಕೆರೆಯಲ್ಲಿ 51,745ರಲ್ಲಿ 9,335 ರೈತರು ಮಾತ್ರ ನೋಂದಣಿಯಾಗಿದ್ದಾರೆ.

    Post Views: 2

    Demo
    Share. Facebook Twitter LinkedIn Email WhatsApp

    Related Posts

    ಪಾತಾಳಕ್ಕೆ ಕುಸಿದ ಈರುಳ್ಳಿ ಬೆಲೆ: ಸಂಕಷ್ಟಕ್ಕೆ ಸಿಲುಕಿದ ಬೆಳಗಾರರು – ಬೆಂಬಲ ಬೆಲೆಗೆ ಒತ್ತಾಯ

    May 19, 2025

    ನಾಲ್ಕು ಲಕ್ಷ ಬಂಡವಾಳ, 25 ಲಕ್ಷ ಲಾಭ.. ಡ್ರ್ಯಾಗನ್ ಫ್ರೂಟ್ ಬೆಳೆದು ಯಶಸ್ವಿಯಾದ ಪದವೀಧರ ರೈತ..!

    May 16, 2025

    ಅವಧಿಪೂರ್ವ ಮುಂಗಾರು ಪ್ರವೇಶ: ರೈತರಿಗೆ ಬಿತ್ತನೆಬೀಜ ನೀಡಲು ಕೃಷಿ ಇಲಾಖೆ ತಯಾರಿ

    May 14, 2025

    Groundnut Cultivation: ಇದು ಭತ್ತದ ಕೃಷಿಗಿಂತ ಉತ್ತಮ.. ಕಡಿಮೆ ಹೂಡಿಕೆ, ಹೆಚ್ಚು ಆದಾಯ..!

    May 14, 2025

    ಈ ಮಾವಿನ ಹಣ್ಣಿನ ಬೆಲೆ 10 ಅಲ್ಲ, 100 ಅಲ್ಲ, 10 ಸಾವಿರ ರೂಪಾಯಿ! ದುಬಾರಿ ಮ್ಯಾಂಗೋ ಇದಂತೆ

    May 13, 2025

    ಎಲೆಕೋಸಿಗೆ ತೀವ್ರ ಬೆಲೆ ಕುಸಿತ: ದನಕರು ಮೇಯಲು ಬಿಟ್ಟು ಬೆಳೆ ನಾಶಪಡಿಸಿದ ಅನ್ನದಾತ-video

    May 12, 2025

    ಭೂಮಿ ಕಳೆದುಕೊಂಡ ರೈತರ ಪರಿಹಾರ ಮೊತ್ತಕ್ಕೆ GST ವಿಧಿಸುವಂತಿಲ್ಲ: ಮಹತ್ವದ ಆದೇಶ ನೀಡಿದ ಹೈಕೋರ್ಟ್‌

    May 11, 2025

    ದೇಶದಲ್ಲಿಲ್ಲ ಆಹಾರ ಕೊರತೆ; ಜನರಿಗೆ ಬೇಕಿಲ್ಲ ಚಿಂತೆ

    May 10, 2025

    PM Kisan: ರೈತರಿಗೆ ಗುಡ್ ನ್ಯೂಸ್: ಈ ದಿನದಂದು ಪಿಎಂ ಕಿಸಾನ್ 20ನೇ ಕಂತಿನ ಹಣ ಖಾತೆಗೆ ಜಮಾ

    May 9, 2025

    Farming Tips: ಕಡಿಮೆ ಬಂಡವಾಳದಲ್ಲಿ ಅಣಬೆ ಕೃಷಿ ಮಾಡಿ ಲಕ್ಷಗಟ್ಟಲೇ ಆದಾಯ ಪಡೆಯಿರಿ! ಹೇಗೆ ಗೊತ್ತಾ..?

    May 7, 2025

    ಪಹಲ್ಗಾಮ್‌ ದಾಳಿ ಬೆನ್ನಲ್ಲೇ ಕೇಸರಿಗೆ ಬಂತು ಬಂಗಾರದ ಬೆಲೆ..1 ಕೆಜಿ ಕೇಸರಿ ಬೆಲೆಯಲ್ಲಿ 50 ಗ್ರಾಂ ಚಿನ್ನ ಖರೀದಿ ಮಾಡಬಹುದು!

    May 5, 2025

    ರೈತರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ DCM..! ಇನ್ಮುಂದೆ ಪಂಪ್ ಸೆಟ್ ಗಳಿಗೆ ಹಗಲಿನಲ್ಲಿಯೂ ಸಿಗಲಿದೆ ವಿದ್ಯುತ್

    May 4, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.