ಬೆಂಗಳೂರು:- ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಭೀರ ಗಾಯವಾಗಿದ್ದ ಬಿಬಿಎಂಪಿ ಲಾರಿ ಚಾಲಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಮಹಾ ”ವಾಟರ್” ಪಾಲಿಟಿಕ್ಸ್ ; ಮಹಾರಾಷ್ಟ್ರ ಸರ್ಕಾರ ವಿಳಂಬ ನೀತಿಗೆ ಜಾರಕಿಹೊಳಿ ಕಿಡಿ
55 ವರ್ಷದ ಕೊಂಡಯ್ಯ ಮೃತ ಲಾರಿ ಚಾಲಕ ಎನ್ನಲಾಗಿದೆ. ನಗರದ ಥಣಿಸಂಧ್ರದ ಹೆಗಡೆ ನಗರದ ಬಳಿ ಬಿಬಿಎಂಪಿ ಲಾರಿಯಿಂದ ಅಪಘಾತವಾಗಿತ್ತು. ಲಾರಿ ಗುದ್ದಿದ ಪರಿಣಾಮ ಬೈಕ್ನಲ್ಲಿದ್ದ 10 ವರ್ಷದ ಬಾಲಕ ಮೃತಪಟ್ಟಿದ್ದ. ಬಾಲಕನ ತಂದೆ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದರು.
ಅಪಘಾತ ಆದ ಪರಿಣಾಮ ಬಿಬಿಎಂಪಿ ಲಾರಿಗೆ ಉದ್ರಿಕ್ತರ ಗುಂಪು ಬೆಂಕಿ ಹಚ್ಚಿತ್ತು. ಅಲ್ಲದೇ, ಲಾರಿ ಚಾಲಕನಿಗೆ ಮನಸೋ ಇಚ್ಛೆ ಥಳಿಸಿತ್ತು. ಹಲ್ಲೆ ಆದ ಪರಿಣಾಮ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಚಾಲಕ ಗಂಭೀರ ಸ್ಥಿತಿ ತಲುಪಿ ಖಾಸಗಿ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.