ರಾಯಚೂರು:- ಪಾಪಿ ಪತಿ ಓರ್ವ ಯುಗಾದಿ ಹಬ್ಬದ ದಿನವೇ ಪತ್ನಿ ಹಾಗೂ ಪತ್ನಿ ತಂಗಿಗೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ರಾಯಚೂರು ತಾಲ್ಲೂಕಿನ ಏಗನೂರು ಗ್ರಾಮದಲ್ಲಿ ಜರುಗಿದೆ.
ಪತ್ನಿ ಮೆಂಟೈನನ್ಸ್ ಕೇಸ್ ಹಾಕಿದ್ದಕ್ಕೆ ಕಿರಿಕ್ ನಡೆದಿದ್ದು, ಮಚ್ಚಿನಿಂದ ಇಬ್ಬರ ಮೇಲೆ ಅಟ್ಯಾಕ್ ನಡೆದಿದೆ. ಪತ್ನಿ ಪದ್ಮಾವತಿ (33) ಹಾಗೂ ಆಕೆ ತಂಗಿ ಭೂದೇವಿ ( 23 ) ಮೇಲೆ ಹಲ್ಲೆ ನಡೆದಿದೆ. ಪದ್ಮಾವತಿ ಪತಿ ತಿಮ್ಮಪ್ಪ ಯಾದವ್ ಅನ್ನೋನಿಂದ ಮಚ್ಚಿನಿಂದ ಹಲ್ಲೆ ನಡೆದಿದೆ.
ಭೂದೇವಿಗೆ ಮದುವೆಗೆ ಇನ್ನೂ ಒಂದೇ ತಿಂಗಳು ಬಾಕಿ ಇತ್ತು. ಪದ್ಮಾವತಿ ಪತಿ ತಿಮ್ಮಪ್ಪ ಮಟ್ಕಾ ಬುಕ್ಕಿಯಾಗಿದ್ದ. ಪತ್ನಿ ಜೊತೆಗೆ ಜಗಳವಾಡಿ ಎರಡನೇ ಮದುವೆ ಮಾಡಿಕೊಂಡಿರೊ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆ ಕೋರ್ಟ್ ನಲ್ಲಿ ಮೆಂಟೈನ್ಸ್ ಕೇಸ್ ಹಾಗೂ ಜಮೀನಿನಲ್ಲಿ ಪತ್ನಿ ಪಾಲು ಕೇಳಿದ್ದಳು. ಕೋರ್ಟ್ ಆದೇಶದಂತೆ ಮೆಂಟೈನನ್ಸ್ ಹಣ ನೀಡದೇ ತಿಮ್ಮಪ್ಪ ಜೈಲುಪಾಲಾಗಿದ್ದರು. ಬಳಿಕ 50 ಸಾವಿರ ಹಣ ನೀಡಿ ಪತಿ ತಿಮ್ಮಪ್ಪ ಸೆಟಲ್ಮೆಂಟ್
ಮಾಡಿಕೊಂಡಿದ್ದ. ಈಗ ಏಕಾಏಕಿ ಪತ್ನಿ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಅಕ್ಕನನ್ನ ಕಾಪಾಡಲು ಹೋಗಿದ್ದ ಪದ್ಮಾವತಿ ತಂಗಿ ಭೂದೇವಿ ಮೇಲೂ ಮಾರಣಾಂತಿಕ ಹಲ್ಲೆ ನಡೆದಿದೆ.
ಸದ್ಯ ಇಬ್ಬರು ಗಾಯಾಳುಗಳ ಸ್ಥಿತಿ ಗಂಭೀರ,ರಿಮ್ಸ್ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ಶಿಪ್ಟ್ ಮಾಡಲಾಗಿದೆ. ರಾಯಚೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ ಶೋಧಕಾರ್ಯ ನಡೆದಿದೆ.