ಬೆಂಗಳೂರು:- ಜಾಗದ ವಿಚಾರಕ್ಕೆ ದಾಯಾದಿಗಳ ನಡುವೆ ಗಲಾಟೆ ನಡೆದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಕೊಡಿಗೆಹಳ್ಳಿ ಬಿಬಿಎಂಪಿ ಜಿಮ್ ಬಳಿ ಜರುಗಿದೆ. ಇನ್ನೂ ಈ ಮಾರಣಾಂತಿಕ ಗಲಾಟೆ ಹಿಂದೆ ಸುಪಾರಿ ನೆರಳು ಇರುವ ಶಂಕೆ ವ್ಯಕ್ತವಾಗಿದೆ. ಅಣ್ಣನ ಮಗನ ಹೊಡೆಯಲು ತಮ್ಮನ ಮಗ,ಅಳಿಯನಿಂದ ಸುಪಾರಿ ಕೊಟ್ಟಿರುವ ಆರೋಪ ಕೇಳಿ ಬಂದಿದೆ. ಎಸ್, ಮುನಿರಾಜು ಮತ್ತು ಚಿಕ್ಕಮುನಿಯಪ್ಪ ಅಣ್ಣ ತಮ್ಮಂದಿರು. ಮುನಿರಾಜು ಮಗ ಮುನಿಕುಮಾರ್ ಮೇಲೆ ಇದೀಗ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಈ ಹಲ್ಲೆಗೆ ಚಿಕ್ಕಮುನಿಯಪ್ಪನ ಮಗ ಮತ್ತು ಅಳಿಯನ ಮೇಲೆ ಸುಪಾರಿ ಹಾಗೂ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.
ಮದುವೆಯಾಗುವಂತೆ ಪೀಡಿಸುತ್ತಿದ್ದಳು: ಸತ್ಯ ಬಾಯ್ಬಿಟ್ಟ ಆರೋಪಿಗಳು.. ಮಂಗಳಮುಖಿ ಕೊಂದ ಮೂವರು ಅರೆಸ್ಟ್!
ಜಾಗದ ವಿಚಾರಕ್ಕೆ ಎರಡು ಕುಟುಂಬದ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. ಇತ್ತೀಚೆಗೆ ಗಲಾಟೆ ಜೋರಾದಾಗ ಮುನಿಕುಮಾರ್ ಬುದ್ದಿವಾದ ಹೇಳಿದ್ದ. ಆ ಸಮಯದಲ್ಲಿ ಚಿಕ್ಕಮುನಿರಾಜು ಅಪ್ರಾಪ್ತ ಪುತ್ರ ಕೊಲೆ ಬೆದರಿಕೆ ಹಾಕಿದ್ದಾನೆ. ಬೆದರಿಕೆ ಹಾಕಿ ಮೂರನೇ ದಿನಕ್ಕೆ ಆರೋಪಿ ಅಟ್ಯಾಕ್ ಮಾಡಿದ್ದಾನೆ. 25 ರ ಸಂಜೆ ಜಿಮ್ ಮುಗಿಸಿ ಬರುವಾಗ ಯೋಜನೆಯಂತೆ ಮುನಿಕುಮಾರ್ ಮೇಲೆ ಅಟ್ಯಾಕ್ ಮಾಡಲಾಗಿದೆ. ರಾಡ್ ಮತ್ತು ಮಾರಕಾಸ್ತ್ರಗಳಿಂದ ಅಪ್ರಾಪ್ತ ಮತ್ತಿಬ್ಬರಿಂದ ಅಟ್ಯಾಕ್ ನಡೆದಿದೆ. ಈ ವೇಳೆ ಜಿಮ್ ಒಳಗೆ ಓಡಿ ಹೋಗಿ ಮುನಿ ಕುಮಾರ್ ಪ್ರಾಣ ಉಳಿಸಿಕೊಂಡಿದ್ದಾನೆ. ಮುನಿಕುಮಾರ್ ಪತ್ನಿ ಮಾಲಾರಿಂದ ಕೊಡಿಗೆಹಳ್ಳಿ ಠಾಣೆಗೆ ದೂರು ನೀಡಲಾಗಿದ್ದು, ಘಟನೆ ಸಂಬಂಧ ಕೊಡಿಗೆಹಳ್ಳಿ ಪೊಲೀಸರಿಂದ 5 ಜನ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಸತೀಶ್,ಭರತ್,ತೇಜಸ್,ಗಣಿ ಮತ್ತು ಒಬ್ಬ ಅಪ್ರಾಪ್ತ ಬಂಧಿತರು.
ಇನ್ನೂ ಸತೀಶ್ ಮತ್ತು ಭರತ್ ಸೇರಿ ಅಪ್ರಾಪ್ತ ಸೇರಿದಂತೆ ಮೂವರಿಂದ ಅಟ್ಯಾಕ್ ಮಾಡಿಸಿದ್ರು. ಆರಂಭದಲ್ಲಿ ಅಪ್ರಾಪ್ತ ತಮ್ಮನಿಂದ ಮುನಿಕುಮಾರ್ ಮೇಲೆ ಅಟ್ಯಾಕ್ ನಡೆದಿದೆ. ನಂತರ ಕೈ,ಎದೆ,ಸೊಂಟ ಕುತ್ತಿಗೆಗೆ ಲಾಂಗ್ ಮತ್ತು ರಾಡ್ ನಿಂದ ಹಲ್ಲೆ ನಡೆಸಲಾಗಿದೆ. ಜಿಮ್ ಸಿಬ್ಬಂದಿ ಸಹಕಾರದಿಂದ ಮುನಿಕುಮಾರ್ ಪ್ರಾಣ ಉಳಿಸಿಕೊಂಡಿದ್ದಾರೆ. ಸದ್ಯ ಮುನಿಕುಮಾರ್ ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಅಪ್ರಾಪ್ತರನ್ನ ಬಳಸಿ ಸೇಫ್ ಆಗುವ ಯತ್ನ ಎಂಬ ಆರೋಪ ಕೇಳಿ ಬಂದಿದೆ. ಮುನಿಕುಮಾರ್ ಗೆ ಮದುವೆಯಾಗಿ 6 ವರ್ಷದ ಮಗುವಿದ್ದು ಹೆಂಡತಿ 6 ತಿಂಗಳ ಗರ್ಭಿಣಿ ಆಗಿದ್ದಾರೆ. ನ್ಯಾಯ ಕೊಡಿಸಿ ಎಂದು ಮುನಿಕುಮಾರ್ ಪತ್ನಿ ಮಾಲಾ ಕೇಳುತ್ತಿದ್ದಾರೆ. ಇನ್ನೂ ಆಟೋ ಓಡಿಸಿ ಮುನಿಕುಮಾರ್ ಕುಟುಂಬ ನಡೆಸ್ತಿದ್ದ ಎನ್ನಲಾಗಿದೆ.
ಘಟನೆ ಸಂಬಂಧ ಆರಂಭದಲ್ಲಿ ಮೂವರನ್ನ ಬಂಧನ ಮಾಡಿದ್ದ ಕೊಡಿಗೆಹಳ್ಳಿ ಪೊಲೀಸರು, ನಂತರ ಚಿಕ್ಕಮುನಿಯಪ್ಪ ಅಳಿಯ ಸತೀಶ್ ನ ಹೆಸರು ಹೊರಗೆ ಬಂದಿತ್ತು. ಈತನದ್ದೇ ಮಾಸ್ಟರ್ ಪ್ಲ್ಯಾನ್ ಎಂದು ಇತರ ಆರೋಪಿಗಳು ಬಾಯ್ಬಿಟ್ಟಿದ್ದರು. ಸದ್ಯ ಆರೋಪಿಗಳನ್ನ ಬಂಧಿಸಿರುವ ಪೊಲೀಸರು, ವಿಚಾರಣೆ ಮುಂದುವರಿಸಿದ್ದಾರೆ.