ಮಲಯಾಳಂ ನಟ ಶೈನ್ ಟಾಮ್ ಚಾಕೊ ತೀವ್ರ ಶೋಕದಲ್ಲಿದ್ದಾರೆ. ಅವರ ತಂದೆ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದು, ಟಾಮ್ ಚಾಕೊ ಮತ್ತು ಅವರ ತಾಯಿಗೆ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಈ ಘಟನೆ ಶುಕ್ರವಾರ ಬೆಳಿಗ್ಗೆ ತಮಿಳುನಾಡು ಸಮೀಪದ ಧರ್ಮಪುರಿಯಲ್ಲಿ ನಡೆದಿದೆ.
ಟಾಮ್ ಚಾಕೊ ತಮ್ಮ ಕುಟುಂಬದೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಅವರು ಪ್ರಯಾಣಿಸುತ್ತಿದ್ದ ಕಾರು ರಸ್ತೆ ಅಪಘಾತಕ್ಕೀಡಾಯಿತು. ಬೆಳಿಗ್ಗೆ 7 ಗಂಟೆ ಸುಮಾರಿಗೆ ಅವರ ಕಾರು ಪಾಲಕೊಟ್ಟೈ ಬಳಿ ಲಾರಿಗೆ ಡಿಕ್ಕಿ ಹೊಡೆದಿದೆ. ಆ ಸಮಯದಲ್ಲಿ, ಚಾಲಕ ಮತ್ತು ಟಾಮ್ ಚಾಕೊ, ಅವರ ತಂದೆ ಸಿಪಿ ಚಾಕೊ, ತಾಯಿ ಮತ್ತು ಸಹೋದರ ಕಾರಿನಲ್ಲಿದ್ದರು.
ನಿತ್ಯ ಖಾಲಿ ಹೊಟ್ಟೆಯಲ್ಲಿ ಒಂದು ಚಿಕ್ಕ ಪೀಸ್ ಬೆಳ್ಳುಳ್ಳಿ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!?
ಟಾಮ್ ಚಾಕೊ ಅವರ ತಂದೆ ಸಿಪಿ ಚಾಕೊ ಅಪಘಾತದಲ್ಲಿ ಸಾವನ್ನಪ್ಪಿದರೆ, ಟಾಮ್ ಚಾಕೊ, ಅವರ ತಾಯಿ, ಸಹೋದರ ಮತ್ತು ಕಾರು ಚಾಲಕ ಗಾಯಗಳೊಂದಿಗೆ ಪಾರಾಗಿದ್ದಾರೆ. ಅವರು ಪ್ರಸ್ತುತ ಧರ್ಮಪುರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.