ಹಣ್ಣುಗಳ ವಿವಾಚರಕ್ಕೆ ಬಂದರೇ ಪಪ್ಪಾಯಿ ಹಣ್ಣು ಸಹ ಅಗ್ರಸ್ಥಾನದಲ್ಲಿರುತ್ತದೆ.. ಇದು ವರ್ಷವಿಡೀ ಲಭ್ಯವಿರುವ ಹಣ್ಣಾಗಿದ್ದು.. ಸುವಾಸನೆ ಮತ್ತು ರಸಭರಿತವಾದ ರುಚಿಯಿಂದ ತುಂಬಿರುತ್ತದೆ. ಈ ಹಣ್ಣಿನಲ್ಲಿ ವಿಟಮಿನ್ ಎ ಹೇರಳವಾಗಿದೆ.. ಉತ್ತಮ ಆರೋಗ್ಯಕ್ಕೆ ಇದು ಮುಖ್ಯವಾಗಿದೆ.. ಪಪ್ಪಾಯಿ ತಿನ್ನುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ ಮತ್ತು ತೂಕ ಕೂಡ ಕಡಿಮೆಯಾಗುತ್ತದೆ… ಆದರೆ ಒಂದು ಕಾಯಿಲೆ ಇರುವವರು ಎಂದಿಗೂ ಪಪ್ಪಾಯಿ ಹಣ್ಣನ್ನು ಸೇವಿಸಬಾರದಂತೆ…
ಬೆಂಗಳೂರು| ಬ್ಯಾಡ್ಮಿಂಟನ್ ಕೋರ್ಟ್ ಹಾಗೂ ವಿಕ್ಟರ್ ಬ್ರ್ಯಾಂಡ್ ಸ್ಟೋರ್ ಉದ್ಘಾಟನೆ!
ಎಲ್ಲಾ ಋತುಗಳು ಬಹಳ ಸುಲಭವಾಗಿ ಲಭ್ಯವಿರುವ ಹಣ್ಣುಗಳಲ್ಲಿ ಪರಂಗಿಹಣ್ಣು ಕೂಡ ಒಂದು. ಪರಂಗಿ ಹಣ್ಣಿನ ಸೇವನೆಯು ಉದರ ಸಂಬಂಧಿತ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುವುದರ ಜೊತೆಗೆ ತೂಕ ಇಳಿಕೆಯಲ್ಲಿಯೂ ಪರಿಣಾಮಕಾರಿ ಆಗಿದೆ. ಇದಲ್ಲದೆ, ಪರಂಗಿ ಹಣ್ಣಿನ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದರಿಂದ ಇದು ನಮ್ಮನ್ನು ಹಲವು ಆರೋಗ್ಯ ಸಮಸ್ಯೆಗಳಿಂದಲೂ ದೂರ ಉಳಿಯುವಂತೆ ಮಾಡುತ್ತದೆ. ಇಷ್ಟೆಲ್ಲಾ ಪ್ರಯೋಜನಗಳನ್ನು ಹೊಂದಿರುವ ಪರಂಗಿ ಹಣ್ಣು ಕೆಲವರಿಗೆ ಬಹಳ ಅಪಾಯಕಾರಿ ಎಂದು ಸಾಬೀತು ಪಡಿಸಬಹುದು. ಅದರಲ್ಲೂ ನಾಲ್ಕು ಸಂದರ್ಭಗಳಲ್ಲಿ ಅಪ್ಪಿತಪ್ಪಿಯೂ ಪರಂಗಿ ಹಣ್ಣನ್ನು ತಿನ್ನಲೇಬಾರದು ಎಂದು ಹೇಳಲಾಗುತ್ತದೆ.
ಈ ನಾಲ್ಕು ಸಂದರ್ಭಗಳಲ್ಲಿ ಪರಂಗಿಹಣ್ಣನ್ನು ತಿನ್ನಲೇಬಾರದು:
ಗರ್ಭಿಣಿಯರು:
ಮೆಗ್ನೀಸಿಯಮ್, ಫೈಬರ್, ವಿಟಮಿನ್ಸ್, ಫೈಬರ್ ನಂತಹ ಅನೇಕ ಪೋಷಕಾಂಶಗಳ ಆಗರವಾಗಿರುವ ಪರಂಗಿಹಣ್ಣು ಆರೋಗ್ಯಕ್ಕೆ ಅತ್ಯುತ್ತಮವಾದರೂ ಕೂಡ, ಗರ್ಭಿಣಿಯರಿಗೆ ಪಪ್ಪಾಯಿ ಸೇವನೆ ಒಳ್ಳೆಯದಲ್ಲ. ಪರಂಗಿಹಣ್ಣಿನಲ್ಲಿ ಕಂಡು ಬರುವ ಪಾಪೈನ್ ದೇಹದಲ್ಲಿನ ಜೀವಕೋಶ ಪೊರೆಯನ್ನು ಹಾನಿಗೊಳಿಸುತ್ತದೆ. ಹಾಗಾಗಿ, ಗರ್ಭಿಣಿಯರು ಅಪ್ಪಿತಪ್ಪಿಯೂ ಪರಂಗಿಹಣ್ಣನ್ನು ತಿನ್ನಲೇಬಾರದು.
ಔಷಧಿ ಸೇವನೆಯ ಮೊದಲು:
ಕೆಲವರು ಪರಂಗಿ ಹಣ್ಣನ್ನು ತಿಂದು ಸ್ವಲ್ಪ ಹೊತ್ತಿನಲ್ಲೇ ಔಷಧಿ ಸೇವಿಸುತ್ತಾರೆ. ಆದರೆ, ಇದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕ ಎಂದು ಸಾಬೀತುಪಡಿಸಲಿದೆ. ಪಪ್ಪಾಯಿ ಮತ್ತು ಔಷಧಿಗಳ ಕಾಕ್ಟೈಲ್ ದೇಹದಲ್ಲಿ ರಕ್ತವನ್ನು ತೆಳುವಾಗಿಸುತ್ತದೆ. ಹಾಗಾಗಿ, ಇವುಗಳನ್ನು ಒಟ್ಟಿಗೆ ಸೇವಿಸುವುದರಿಂದ ದೇಹದಿಂದ ರಕ್ತಸ್ರಾವವಾಗುವ ಅಪಾಯ ಹೆಚ್ಚು ಎಂದು ಹೇಳಲಾಗುತದೆ.
ಕೆಲವರಿಗೆ ಪರಂಗಿ ಹಣ್ಣಿನ ಸೇವನೆಯಿಂದ ಚರ್ಮದ ಅಲರ್ಜಿ ಕಾಣಿಸಿಕೊಳ್ಳುತ್ತದೆ. ಇದಲ್ಲದೆ, ಪರಂಗಿ ಹಣ್ಣಿನ ಸೇವನೆಯಿಂದ ಕೆಲವರಲ್ಲಿ ಕೆಂಪು ದದ್ದುಗಳು, ತಲೆನೋವು, ತಲೆತಿರುಗುವಿಕೆ ಮತ್ತು ಊತ ಉಂಟಾಗುತ್ತದೆ. ಇಂತಹವರು ಕೂಡ ಪರಂಗಿ ಹಣ್ಣನ್ನು ತಿನ್ನಬಾರದು.