ಚೆನ್ನೈ: ಮದ್ರಾಸ್ ಇಂಟರ್ನ್ಯಾಷನಲ್ ಸರ್ಕ್ಯೂಟ್‌ನಲ್ಲಿ ಏಪ್ರಿಲ್ 25 ರಿಂದ 27 ರವರೆಗೆ ನಡೆಯಲಿರುವ ಏಷ್ಯಾ ಪೆಸಿಫಿಕ್ ರ್ಯಾಲಿ ಚಾಂಪಿಯನ್‌ಶಿಪ್ (APRC)ನ ಏಷ್ಯಾ ವಲಯ ಸುತ್ತಿಗೆ 21 ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಮದ್ರಾಸ್ ಮೋಟಾರ್ ಸ್ಪೋರ್ಟ್ ಕ್ಲಬ್ (MMSC) ಆಯೋಜಿಸಿರುವ ಎಫ್‌ಎಂಎಸ್‌ಸಿಐ ಇಂಡು ಚಂಧೋಕಾ ಸ್ಮಾರಕ ಇಂಡಿಯನ್ ರ್ಯಾಲಿ ಚಾಂಪಿಯನ್‌ಷಿಪ್ (INRC) ಜೊತೆಗೆ ಈ ಸ್ಪರ್ಧೆಯೂ ನಡೆಯಲಿದೆ.
APRC ಇಂಡಿಯಾ ಲೆಗ್‌ನ ಹಾಲಿ ಚಾಂಪಿಯನ್ಸ್ ಆಗಿರುವ ಎಪಿಆರ್‌ಸಿ ಇಂಡಿಯಾ ಲೆಗ್‌ನ ಹಾಲಿ ಚಾಂಪಿಯನ್‌ಗಳಾದ ಅರ್ಕಾ ಮೋಟಾರ್‌ಸ್ಪೋರ್ಟ್ಸ್‌ನ ಹರ್‌ಕ್ರಿಶನ್ ವಾಡಿಯಾ ಮತ್ತು ಕುನಾಲ್ ಕಶ್ಯಪ್ ಮತ್ತು ಹಾಲಿ ರಾಷ್ಟ್ರೀಯ ಚಾಂಪಿಯನ್‌ಗಳಾದ ಕರ್ಣ ಕಡೂರ್ ಮತ್ತು ಮೂಸಾ ಶೆರಿಫ್ ಸ್ಪರ್ಧೆಯನ್ನು ಮುನ್ನಡೆಸಲಿದ್ದಾರೆ. ಇವರಿಗೆ ಮಾಜಿ ಐಎನ್‌ಆರ್‌ಸಿ(INRC) ಚಾಂಪಿಯನ್ ಮತ್ತು ಇಆರ್‌ಸಿ(ERC) ಸುತ್ತಿನ ವಿಜೇತ ಅಮಿತ್ರಜೀತ್ ಘೋಷ್, 2019ರ ಐಎನ್‌ಆರ್‌ಸಿ (INRC) ಚಾಂಪಿಯನ್ ಚೇತನ ಶಿವರಾಮ್ ಮತ್ತು ಸಹಚಾಲಕ ಇ ಶಿವಪ್ರಕಾಶ್, ಹಾಗು ಹೈದ್ರಾಬಾದ್‌ನ ನವೀನ್ ಪುಳಿಗಿಲ್ಲಾ ಸಹಚಾಲಕರಾಗಿ ಸಂತೋಷ್ ಥಾಮಸ್ ಜೊತೆಯಲ್ಲಿ ತೀವ್ರವಾದ ಸ್ಪರ್ಧೆಯನ್ನು ನೀಡಲಿದ್ದಾರೆ.
ನವೀನ್ ಇತ್ತೀಚೆಗೆ ವಿಶ್ವ ರ್ಯಾಲಿ ಚಾಂಪಿಯನ್‌ಶಿಪ್ ಸರ್ಕ್ಯೂಟ್‌ನ ಭಾಗವಾಗಿರುವ ಕೀನ್ಯಾ ರ್ಯಾಲಿ ಚಾಂಪಿಯನ್‌ಶಿಪ್‌ನ RC3 ಕ್ಲಾಸ್ ನ ವಿಜಯಶಾಲಿಯಾಗಿದ್ದಾರೆ. ಶಿಮ್ಲಾದ ಅನುಶ್ರಿಯಾ ಗುಲಾಟಿ ಈ ಬಾರಿ ಏಕೈಕ ಮಹಿಳಾ ಭಾಗವಹಿಸುವಿಕೆದಾರರಾಗಿದ್ದು, ಹೈದ್ರಾಬಾದ್‌ನ ಜೀತ್ ಝಭಕ್ ಐಎನ್‌ಆರ್‌ಸಿ( INRC) ನಲ್ಲಿ ಹ್ಯೂಂಡೈ ಐ20(i20) ಕಾರಿನೊಂದಿಗೆ ಡೆಬ್ಯೂ ಮಾಡಲಿದ್ದಾರೆ.
ಈ ಬಗ್ಗೆ ಮಾತನಾಡಿದ ಏಷ್ಯಾ ಪೆಸಿಫಿಕ್ ರ್ಯಾಲಿ ಚಾಂಪಿಯನ್‌ಶಿಪ್ ಕಾರ್ಯನಿರತ ಗುಂಪಿನ ಅಧ್ಯಕ್ಷ ವಿಕಿ ಚಾಂದೋಕ್ “ಎಫ್‌ಐಎ ಎಪಿಆರ್‌ಸಿ(APRC)ಗೆ ಇವರು ಎರಡು ವರ್ಷಗಳ ಹಿಂದೆ ನೀಡಿದ್ದ ಅಮೋಘ ಬೆಂಬಲವನ್ನು ಮುಂದುವರಿಸುತ್ತಾ, ವಂಸಿ ಮೆರ್ಲಾ ಇಂಡೋನೇಶಿಯಾ, ನ್ಯೂಜಿಲೆಂಡ್ ಮತ್ತು ಭಾರತದಲ್ಲಿ ಈ ಸ್ಪರ್ಧೆಯನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಭಾರತೀಯ ಸುತ್ತಿನ ಎಫ್‌ಐಎ ಎಪಿಆರ್‌ಸಿ (APRC) ಮತ್ತು ಇಂಡು ಚಂಧೋಕ್ ಸ್ಮಾರಕ ದಕ್ಷಿಣ ಭಾರತ ರ‍್ಯಾಲಿ 2025ಕ್ಕೆ ವಂಸಿ ಮೆರ್ಲಾ ಪ್ರಚಾರಕರಾಗಿರುವುದು ಮದ್ರಾಸ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ (MMSC)ಗೆ ಸಾಕಷ್ಟು ಉತ್ಸಾಹ ಮತ್ತು ಬೆಂಬಲ ಒದಗಿಸಿದೆ ಎಂದರು.
ಈ ಬಗ್ಗೆ ಮಾತಾಡಿದ ವಂಸಿ ಮೆರ್ಲಾ ‘ಎಫ್‌ಐಎ ಎಪಿಆರ್‌ಸಿ (APRC) ಜೊತೆಗೆ ನನ್ನ ಸಂಬಂಧವನ್ನು ಮುಂದುವರಿಸುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಈ ಬಾರಿ ಎಫ್‌ಐಎ ಎಪಿಆರ್‌ಸಿ (APRC) ವಿಭಾಗದಲ್ಲಿ ದಾಖಲೆ ಸಂಖ್ಯೆಯ ಎಂಟ್ರಿಗಳನ್ನು ಕಂಡು ನಾನು ಅತ್ಯಂತ ಉತ್ಸಾಹಕನಾಗಿದ್ದು, ಜೊತೆಗೆ ಇನ್ನು ಎರಡು ಸುತ್ತುಗಳಿಗೆ ಸಹ ನಾನು ನನ್ನ ಬೆಂಬಲವನ್ನು ನೀಡುತ್ತೇನೆ ಎಂದಿದ್ದಾರೆ. ಈ ತಿಂಗಳ ಆರಂಭದಲ್ಲಿ ನ್ಯೂಜಿಲೆಂಡ್‌ನಲ್ಲಿ ಮೊದಲ ಸುತ್ತು ನಡೆದಿತ್ತು. ಇದೀಗ ಚೆನ್ನೈನಲ್ಲಿ ಎರಡನೇ ಸುತ್ತು ನಡೆಯಲಿದ್ದು, ಬಳಿಕ ಇನ್ನೂ ಮೂರು ಸುತ್ತುಗಳು ನಡೆಯಲಿವೆ. ಅಂತಿಮ ಸುತ್ತು ಹಾಗೂ ಚಾಂಪಿಯನ್‌ಶಿಪ್ ನಿರ್ಧರಿಸುವ ನಿರ್ಣಾಯಕ ಸುತ್ತು ನವೆಂಬರ್ 6ರಿಂದ 8ರ ವರೆಗೆ ಜಪಾನ್‌ನಲ್ಲಿ ನಡೆಯುವ ವರ್ಲ್ಡ್ ರ್ಯಾಲಿ ಚಾಂಪಿಯನ್‌ಷಿಪ್ (WRC) ಈವೆಂಟ್ ಜೊತೆಗೆ ನಡೆಯಲಿದೆ.