ಬೆಂಗಳೂರು:- ಇಂದು ಬೆಳಗಿನ ಜಾವ 3 ಗಂಟೆ ವೇಳೆ ನಗರದ ಪ್ರತಿಷ್ಠಿತ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ.
Fish Benefits: ವಾರಕ್ಕೆ 2 ಬಾರಿ ಈ ಮೀನುಗಳನ್ನು ತಿಂದ್ರೆ ಕೂದಲು ಉದುರೋದಿಲ್ವಂತೆ!
ಇಂದು ಬೆಳಗಿನ ಜಾವ 3 ಗಂಟೆಗೆ ಬರ್ನ್ಸ್ ಬ್ಲಾಕ್ ನಲ್ಲಿರುವ ಸೆಮಿನಾರ್ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿ ಕೊಂಡಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬಂದಿ, ಬೆಂಕಿ ನಂದಿಸಿದರು.
ಒಟ್ಟು 26 ರೋಗಿಗಳು (ಪುರುಷರು -14, ಮಹಿಳೆಯರು -5 ಮತ್ತು ಮಕ್ಕಳು -7), ಇದ್ದು, ಅವರಲ್ಲಿ 5 ರೋಗಿಗಳು ಐಸಿಯುನಲ್ಲಿದ್ದರು. ಎಲ್ಲಾ ರೋಗಿಗಳು, ಸಹಾಯಕರು, ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ.