Close Menu
Ain Live News
    Facebook X (Twitter) Instagram YouTube
    Saturday, June 21
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಲಾಸ್‌ ಏಂಜಲೀಸ್‌ನಲ್ಲಿ ಕಾಡ್ಗಿಚ್ಚು: ಪ್ರಿಯಾಂಕಾ ಚೋಪ್ರ ಮನೆ ಸಮೀಪವೇ ಬೆಂಕಿಯ ರೌದ್ರ ನರ್ತನ

    By Author AINJanuary 11, 2025
    Share
    Facebook Twitter LinkedIn Pinterest Email
    Demo

    ವಾಷಿಂಗ್ಟನ್‌: ಅಮೆರಿಕದ 2ನೇ ಅತಿದೊಡ್ಡ ನಗರವಾದ ಲಾಸ್‌ ಏಂಜಲೀಸ್‌ನಲ್ಲಿ ಕಾಡ್ಗಿಚ್ಚಿನ ಕದನ ಮುಂದುವರೆದಿದೆ.ಬೆಂಕಿಯ ರೌದ್ರ ನರ್ತನಕ್ಕೆ ಸುಮಾರು 10ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಇದೀಗ ನಟಿ ಪ್ರಿಯಾಂಕ ಚೋಪ್ರಾ ತಾವಿರುವ ಮನೆಯ ಬಾಲ್ಕನಿಯಿಂದ ವಿಡಿಯೋ ಶೂಟ್ ಮಾಡಿದ್ದು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ನಟಿ ಪ್ರಿಯಾಂಕಾ ಸದ್ಯ ಹಾಲಿವುಡ್ ನಲ್ಲಿ ಸೆಟಲ್ ಆಗಿದ್ದು ಪತಿ ಹಾಗೂ ಮಗಳೊಂದಿಗೆ ಲಾಸ್ ಏಂಜಲೀಸ್‌ನಲ್ಲಿ ನೆಲೆಸಿದ್ದಾರೆ. ಪ್ರಿಯಾಂಕ ವಾಸವಿರುವ ಮನೆಯ ಸ್ವಲ್ಪ ದೂರದಲ್ಲಿರುವ ಸ್ಥಳದಲ್ಲಿ ಈ ಅವಘಡ ನಡೆದಿದೆ. ಮನೆಯ ಬಾಲ್ಕನಿಯಿಂದ ಶೂಟ್ ಮಾಡಿದ ವಿಡಿಯೋ ಶೇರ್ ಮಾಡಿ, ಈ ಅನಾಹುತದಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಸಂತಾಪಗಳು. ನಾವೆಲ್ಲರೂ ಈ ರಾತ್ರಿ ಸೇಫ್ ಆಗಿರ್ತೀವೆಂದು ಭಾವಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ನಟಿ ಶೇರ್ ಮಾಡಿದ ಮತ್ತೊಂದು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ, ಲಾಸ್ ಏಂಜಲೀಸ್ ಕಾಡ್ಗಿಚ್ಚಿನ ಸಂದಿಗ್ಧ ಪರಿಸ್ಥಿತಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿದ ನಮ್ಮ ರಕ್ಷಕರಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

    ಲಾಸ್​ ಏಂಜಲೀಸ್​ನಲ್ಲಿ ಸಂಭವಿಸಿದ್ದ ಕಾಡ್ಗಿಚ್ಚಿಗೆ ಸಾವಿರಾರು ಮನೆಗಳು ಸುಟ್ಟು ಭಸ್ಮವಾಗಿದೆ, ಇದುವರೆಗೆ 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಮನೆಗಳು, ವ್ಯಾಪಾರ ಮಳಿಗೆಗಳು ಎಲ್ಲವೂ ಸುಟ್ಟು ಕರಕಲಾಗಿವೆ. ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ಹೊತ್ತಿಕೊಂಡಿರುವ ಭೀಕರ ಕಾಡ್ಗಿಚ್ಚು ಅಪಾರ ಹಾನಿಯುಂಟುಮಾಡಿದೆ. ಮುಗಿಲೆತ್ತರಕ್ಕೆ ಚಿಮ್ಮುತ್ತಿರುವ ಜ್ವಾಲೆ ನೆರೆಯ ಪ್ರದೇಶಗಳಿಗೂ ವ್ಯಾಪಿಸುತ್ತಿದೆ. ಸುತ್ತಲಿನ ಹಾಲಿವುಡ್‌ ಪ್ರದೇಶದಿಂದ ಜನರನ್ನು ಸ್ಥಳಾಂತರಿಸುವ ಕಾರ್ಯಕ್ಕೆ ರಕ್ಷಣಾ ಸಿಬ್ಬಂದಿ ಚಾಲನೆ ನೀಡಿದ್ದಾರೆ. ಈ ನಡುವೆ 1,00,000 ಜನರ ಸ್ಥಳಾಂತರಕ್ಕೆ ಆದೇಶಿಸಲಾಗಿದೆ. ಸುಮಾರು 2,000 ಮನೆಗಳು ಸುಟ್ಟು ಭಸ್ಮವಾಗಿವೆ.

    Demo
    Share. Facebook Twitter LinkedIn Email WhatsApp

    Related Posts

    ನಿರ್ದೇಶಕ ನಂದಕಿಶೋರ್ ವಿರುದ್ಧ ಗಂಭೀರ ಆರೋಪ: ಸುದೀಪ್‌ ಹೆಸರು ಹೇಳಿ ಯುವ ನಟನಿಗೆ 22 ಲಕ್ಷ ವಂಚನೆ!

    June 20, 2025

    ಸಂಜು ವೆಡ್ಸ್ ಗೀತಾ 2’ ತಂಡದ ಆರೋಪಕ್ಕೆ ರಚಿತಾ ತಿರುಗೇಟು: ವಿಡಿಯೋ ಮೂಲಕ ಡಿಂಪಲ್ ಕ್ವೀನ್ ಕೊಟ್ಟ ಕ್ಲಾರಿಟಿ ಇಲ್ಲಿದೆ!

    June 20, 2025

    Donald Trump: ಭಾರತ, ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನಲ್ಲ: ಉಲ್ಟಾ ಹೊಡೆದ ಡೊನಾಲ್ಡ್ ಟ್ರಂಪ್..!

    June 20, 2025

    ಯಶ್‌ ತಾಯಿ ನಿರ್ಮಾಣದ ಮೊದಲ ಚಿತ್ರ ಬಿಡುಗಡೆಗೆ ರೆಡಿ..ʼಕೊತ್ತಲವಾಡಿʼ ದರ್ಶನ ಯಾವಾಗ?

    June 20, 2025

    ಕಿಚ್ಚ ಸುದೀಪ್‌ ಹೆಸರಲ್ಲಿ ಪಂಗನಾಮ..ಯುವನಟನಿಗೆ ನಂದಕಿಶೋರ್‌ ದೋಖಾ…?

    June 20, 2025

    ಮದುವೆಯಾಗದೆ 100 ಮಕ್ಕಳ ತಂದೆಯಾದ ಟೆಲಿಗ್ರಾಂ CEO.! ಕರುಳ ಕುಡಿಗಳಿಗೆ 20 ಬಿಲಿಯನ್ ಡಾಲರ್ ದೇಣಿಗೆ

    June 20, 2025

    ಪ್ರಚಾರ ಅಖಾಡದಲ್ಲಿ ಎಕ್ಕ…ಜುಲೈ 18ಕ್ಕೆ ಯುವರಾಜ್ ಕುಮಾರ್ ಸಿನಿಮಾ ರಿಲೀಸ್

    June 20, 2025

    ʼಕನ್ನಡ ಕೋಗಿಲೆʼ ಗಾಯಕಿ ಬಾಳಲ್ಲಿ ಡಿವೋರ್ಸ್‌ ಬಿರುಗಾಳಿ..ಡಿವೋರ್ಸ್ ಅರ್ಜಿ ಬೆನ್ನಲ್ಲೇ ಪತಿ ಫೋಟೋಸ್ ಡಿಲೀಟ್

    June 20, 2025

    ಇರಾನ್ ಮೇಲೆ ದಾಳಿ ಮಾಡಲು ಅಮೆರಿಕ ಸಿದ್ಧತೆ: ಗ್ರೀನ್ ಸಿಗ್ನಲ್ ಕೊಟ್ರಾ ಟ್ರಂಪ್..!?

    June 19, 2025

    Israel-Iran Conflict: ಇರಾನ್ ಕ್ಷಿಪಣಿ ದಾಳಿಯಲ್ಲಿ ಇಸ್ರೇಲ್ ಆಸ್ಪತ್ರೆ ಧ್ವಂಸ..!..!

    June 19, 2025

    ಹೊಯ್ಸಳ ನಿರ್ದೇಶಕರ ಹೊಸ ಸಾಹಸ..ಹೇಗಿದೆ ʼಆಲ್ಫಾ ಮೆನ್ ಲವ್ ವೈಲೆನ್ಸ್ʼ ಸಿನಿಮಾ ಮೇಕಿಂಗ್‌?

    June 19, 2025

    ಮತ್ತೆ ಒಂದಾಯ್ತು ಟಗರು ಜೋಡಿ..ಶಿವಣ್ಣ-ಡಾಲಿ ಹೊಸ ಸಿನಿಮಾದ ಟೈಟಲ್‌ ರಿವೀಲ್..

    June 19, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.