ಮಂಡ್ಯ:- ಚಲಿಸುತ್ತಿದ್ದಾಗಲೇ ಕಾರೊಂದು ಹೊತ್ತಿ ಉರಿದಿದ್ದು, ಅದೃಷ್ಟವಶಾತ್ ಕುಟುಂಬವೊಂದು ಬಚಾವ್ ಆಗಿರುವ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠದ ಬಳಿ ಜರುಗಿದೆ.
ಇಂದು ದೇಶದಾದ್ಯಂತ ಮಾಕ್ ಡ್ರಿಲ್: ಬೆಂಗಳೂರಲ್ಲೂ ಮೊಳಗಲಿದೆ ಯುದ್ಧದ ಸೈರನ್! ಇಲ್ಲಿದೆ ಕಂಪ್ಲೀಟ್ ಮಾಹಿತಿ!
ಬೆಂಗಳೂರಿನಿಂದ ಆದಿಚುಂಚನಗಿರಿಗೆ ಕುಟುಂಬವೊಂದು ಕಾರಿನಲ್ಲಿ ಹೊರಟಿತ್ತು. ಕಾರನ್ನು ಮಹಿಳೆ ಚಲಾಯಿಸುತ್ತಿದ್ದರು. ಕಾರು ಆದಿಚುಂಚನಗಿರಿ ಸಮೀಪ ಬಂದಿದ್ದಾಗ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರಿನಲ್ಲಿದ್ದ ಮಹಿಳೆ, ಹಾಗೂ ಆಕೆಯ ಪತಿ ಮಗುವನ್ನು ಕರೆದುಕೊಂಡು ಕಾರಿನಿಂದ ಇಳಿದಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಕುಟುಂಬ ಪಾರಾಗಿದೆ.
ಶಾರ್ಟ್ ಸರ್ಕ್ಯೂಟ್ ನಿಂದ ಏಕಾಏಕಿ ಬೆಂಕಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ.