ರಾಮನಗರ:- ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ರಿಕ್ಕಿ ರೈಗೆ ಬಿಡದಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ರಾಕಿಭಾಯ್ ಟಾಕ್ಸಿಕ್ ಸಿನಿಮಾದ ಕ್ರೇಜಿ ಅಪ್‌ಡೇಟ್.ಎಷ್ಟು ಭಾಷೆಯಲ್ಲಿ ರಿಲೀಸ್ ಆಗಲಿದೆ ಗೊತ್ತಾ?
ಪ್ರಕರಣದ ಕುರಿತು ಹೆಚ್ಚಿನ ವಿಚಾರಣೆ ಅವಶ್ಯಕತೆ ಇದ್ದು ಖುದ್ದು ಠಾಣೆಗೆ ಹಾಜರಾಗುವಂತೆ ರಿಕ್ಕಿ ರೈಗೆ ಬುಧವಾರ ನೋಟಿಸ್ ನೀಡಿದ್ದಾರೆ. ಫೈರಿಂಗ್‌ನ ವೇಳೆ ರಿಕ್ಕಿ ರೈ ಕೈ ಹಾಗೂ ಮೂಗಿನ ಭಾಗಕ್ಕೆ ಗಂಭೀರ ಗಾಯವಾಗಿತ್ತು
2 ಆಪರೇಷನ್‌ಗಳಿಗೆ ಒಳಗಾಗಿದ್ದ ರಿಕ್ಕಿ ಸದ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಬಂಧಿತ ಗನ್‌ಮ್ಯಾನ್ ವಿಠ್ಠಲ್ ಫೈರಿಂಗ್ ಮಾಡಿರುವ ಶಂಕೆ ಇದ್ದು, ಘಟನೆ ಸಂಬಂಧ ವಿಚಾರಣೆಯಲ್ಲಿ ವಿಠ್ಠಲ್ ಯಾವುದೇ ಸತ್ಯ ಬಾಯ್ಬಿಡುತ್ತಿಲ್ಲ. ಹೀಗಾಗಿ ರಿಕ್ಕಿ ರೈ ಹಾಗೂ ಆರೋಪಿ ವಿಠ್ಠಲ್ ಮುಖಾಮುಖಿ ವಿಚಾರಣೆ ನಡೆಸಲು ಪೊಲೀಸರ ಸಿದ್ಧತೆ ನಡೆಸಿದ್ದಾರೆ.