ಪಹಲ್ಗಾಮ್ ಪೈಶಾಕಿ ಕೃತ್ಯಕ್ಕೆ ಭಾರತ ದಿಟ್ಟ ಉತ್ತರ ಕೊಟ್ಟಿದೆ. ಇಂದು ಬೆಳಗಿನ ಜಾವ ನಡೆದ ‘ಆಪರೇಷನ್ ಸಿಂಧೂರ್’ ನ ಭಾಗವಾಗಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಭಯೋತ್ಪಾದಕರ ಕೇಂದ್ರ ಕಚೇರಿಗಳ ಮೇಲೆ ಏರ್ ಸ್ಟ್ರೈಕ್ ನಡೆಸಲಾಗಿದೆ. ಈ ರಣ ರೋಚಕ ಕ್ಷಿಪಣಿ ದಾಳಿಯ ವೀಡಿಯೊ ತುಣುಕುಗಳನ್ನು ಭಾರತೀಯ ಸೇನೆ ಬಿಡುಗಡೆ ಮಾಡಿದೆ.
#OperationSindoor | Indian Army releases videos of Indian strikes on Pakistani terror camps. Nine terrorist camps were targeted and successfully destroyed.
(Videos Source: Indian Army) pic.twitter.com/qqzCG5ae1S
— ANI (@ANI) May 7, 2025
ಭಾರತ ಟಾರ್ಗೆಟ್ ಮಾಡಿ ನಡೆಸಿದ ದಾಳಿಯ ವಿಡಿಯೋವನ್ನು ಸೇನೆ ಬಿಡುಗಡೆ ಮಾಡಿದೆ. ಭಾರತೀಯ ಸೇನೆ, ಭಾರತೀಯ ವಾಯುಪಡೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಮುರೀದ್ಕೆ, ಮುಜಾಫರ್ಬಾದ್, ಬಹಾವಲ್ಪುರ್, ಕೋಟ್ಲಿ, ಚಾಕ್ಅಮ್ರು, ಗುಲ್ಪುರ್, ಭಿಂಬರ್ನಲ್ಲಿ ದಾಳಿ ನಡೆಸಿದೆ. ಈ ಮಿಲಿಟರಿ ಕಾರ್ಯಾಚರಣೆಯಲ್ಲಿ 70ಕ್ಕೂ ಹೆಚ್ಚು ಮಂದಿ ಉಗ್ರರು ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.
ಭಾರತೀಯ ಸೇನೆ ನಾಗರಿಕರು ಹಾಗೂ ಸೇನಾ ಸೆಂಟರ್ಗಳನ್ನ ಟಾರ್ಗೆಟ್ ಮಾಡಿಲ್ಲ. ಇಂಟೆಲಿಜೆನ್ಸ್ ಆಧಾರದ ಮೇಲೆ ದಾಳಿ ಮಾಡುವ ಜಾಗಗಳನ್ನ ಆಯ್ಕೆ ಮಾಡಲಾಗಿದೆ. ನಾಗರಿಕರು, ಸೇನೆಗೆ ತೊಂದರೆಯಾಗದಂತೆ ಉಗ್ರರ ಕಟ್ಟಡಗಳನ್ನೇ ಟಾರ್ಗೆಟ್ ಮಾಡಿ ದಾಳಿ ಮಾಡಿದೆ.