ಬೆಂಗಳೂರು :- ನಿರ್ಜನ ಪ್ರದೇಶದಲ್ಲಿ ವಿದೇಶಿ ಮಹಿಳೆಯ ಮೃತದೇಹ ಪತ್ತೆಯಾಗಿರುವ ಘಟನೆ ಬೆಂಗಳೂರು ಹೊರವಲಯದ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯ ತರಹುಣಸೆ ಗ್ರಾಮದ ನಿರ್ಜನ ಪ್ರದೇಶದಲ್ಲಿ ಜರುಗಿದೆ.
ಕೇಂದ್ರ ಸರ್ಕಾರದ ಜಾತಿ ಗಣತಿ ನಿರ್ಧಾರ ಸ್ವಾಗತಿಸಿದ ಸಿಎಂ ಸಿದ್ದರಾಮಯ್ಯ!
ಮೃತಳನ್ನು ಆಫ್ರಿಕಾದ ನೈಜೀರಿಯಾದ ಕ್ರಾಸ್ ರಿವರ್ ಮೂಲದ ಲೋವೆತ್ ಎಂದು ಗುರುತಿಸಲಾಗಿದೆ. ಮೃತಳ ಪಾಸ್ ಪೋರ್ಟ್ ಚಿಕ್ಕ ಮಜಾಲ ಪೊಲೀಸರಿಗೆ ಪತ್ತೆಯಾಗಿದ್ದು, ಬನ್ನೇರುಘಟ್ಟ ರಸ್ತೆಯಲ್ಲಿ ನೆಲೆಸಿದ್ದಳು ಎಂದು ತಿಳಿದುಬಂದಿದೆ. ಮೃತ ಮಹಿಳೆ ಮೂಲತಃ ಆಫ್ರಿಕಾದ ಕ್ರಾಸ್ ರಿವರ್ ರಾಜ್ಯದ ಮಹಿಳೆ. ಮಹಿಳೆ ಹಿನ್ನಲೆ ಪರಿಶೀಲನೆ ನಡೆಸ್ತಿರುವ ಪೊಲೀಸರು, ಆಕೆ ಭಾರತಕ್ಕೆ ಬಂದಿದ್ದರ ಹಿಂದಿನ ಉದ್ದೇಶವೇನು? ಕಳೆದ ರಾತ್ರಿ ಕೊಲೆಗೂ ಮುನ್ನ ಆಕೆ ಸಂಪರ್ಕದಲ್ಲಿದ್ದವರು ಯಾರು ಎನ್ನುವುದರ ಬಗ್ಗೆ ತನಿಖೆ ಚುರುಕುಗೊಳಿಸಿದ್ದಾರೆ. ಇನ್ನು ಪೋರೆನ್ಸಿಕ್ ತಂಡದೊಂದಿಗೆ ಕೃತ್ಯ ನಡೆದ ಕ್ರೈಂ ಸ್ಪಾಟ್ ಗೆ ದೌಡಯಿಸಿದ ಚಿಕ್ಕಜಾಲ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮೃತಳ ಗುರುತು ಪತ್ತೆಹಚ್ಚಲು ಮುಂದಾಗಿದ್ದಾರೆ
ವಿದೇಶಿ ಮಹಿಳೆ ಮೃತದೇಹ ಮರಣೋತ್ತರ ಪರೀಕ್ಷೆಗೆ ಅಂಬೇಡ್ಕರ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮೃತ ಲೋವಿತ ಸಂಪರ್ಕದಲ್ಲಿದ್ದವರನ್ನು ಕರೆಸಿ ವಿಚಾರಣೆ ಮುಂದಿವರೆಸಿದ್ದು, ಕೊಲೆಗೆ ಕಾರಣವೇನು ಅನ್ನೋದರ ಕುರಿತು ಚಿಕ್ಕಜಾಲ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.