ಧಾರವಾಡ : ಸಚಿವ ಸಂತೋಷ್ ಲಾಡ್ ವಿರುದ್ಧ ಮಾಜಿ ಎಂಎಲ್ಸಿ ನಾಗರಾಜ ಛಬ್ಬಿ ಅಸಮಾಧಾನ ವ್ಯಕ್ತಪಿಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಣಮಟ್ಟದ ವಿದ್ಯುತ್ ಇಲ್ಲದೇ ಕ್ಷೇತ್ರದ ಜನರು ಸಂಕಷ್ಟದಲ್ಲಿದ್ದಾರೆ. ಹೆಸ್ಕಾಂನವರು ಟಿಸಿ ಕೇಳಿದರೆ ಮೂರು ತಿಂಗಳು ಕಾಯುವ ಶಿಕ್ಷೆ ಕೊಡುತ್ತಾರೆ. ಇಂತಹ ಯಾವುದೇ ಸಮಸ್ಯೆಗಳು ಸಚಿವ ಸಂತೋಷ್ ಲಾಡ್ ಅವರಿಗೆ ಕಾಣುತ್ತಿಲ್ಲ. ಇತ್ತೀಚೆಗೆ ಅವರು ಕ್ಷೇತ್ರಕ್ಕೆ ಬರುವುದನ್ನೇ ಮರೆತಿದ್ದಾರೆ ಎಂದು ದೂರಿದರು.
ಅಂಗಡಿ ಇಡುವ ವಿಚಾರಕ್ಕೆ ಬೀದಿಬದಿ ವ್ಯಾಪಾರಿಗಳ ಜಗಳ ; ಓರ್ವನ ಮೂಗೇ ಕಟ್
ಪ್ರಧಾನಿ ಮೋದಿ ಅವರನ್ನು ಟೀಕಿಸಿದರೆ ದೊಡ್ಡವರಾಗುತ್ತೇವೆ ಎಂದು ಲಾಡ್ ತಿಳಿದಿದ್ದಾರೆ. ಆದರೆ ಅವರು ಕ್ಷೇತ್ರದಲ್ಲಿ ಒಂದೇ ಒಂದು ರಸ್ತೆ ಮಾಡಿಸಿಲ್ಲ. ಕಲಘಟಗಿಗೆ ಈ ಹಿಂದೆ ಮೂರು ಸಬ್ ಡಿವಿಜನ್ಗಳನ್ನು ಹಿಂದಿನ ಶಾಸಕ ನಿಂಬಣ್ಣವರ ಮಂಜೂರು ಮಾಡಿಸಿದ್ದರು. ಕಾಂಗ್ರೆಸ್ನವರು ಕ್ಷೇತ್ರದ ಜನರಿಗೆ ಸುಳ್ಳು ಹೇಳುತ್ತಿದ್ದಾರೆ ಎಂದರು. ಕ್ಷೇತ್ರದ ಜನರ ಸಮಸ್ಯೆ ಬಗೆ ಹರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಛಬ್ಬಿ ಎಚ್ಚರಿಸಿದರು.