ನವದೆಹಲಿ: ಆರತಿ ವೇಳೆ ಬೆಂಕಿ ತಗುಲಿ ಮಾಜಿ ಕೇಂದ್ರ ಸಚಿವೆ ಗಿರಿಜಾ ವ್ಯಾಸ್ ನಿಧನರಾಗಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕಿ ಗಿರಿಜಾ ವ್ಯಾಸ್ ಅವರ ನಿಧನದ ಕುರಿತು ಸಹೋದರ ಗೋಪಾಲ್ ಶರ್ಮಾ ಖಚಿತಪಡಿಸಿದ್ದಾರೆ.
ಕಳೆದ ಏ.2ರಂದು ಗಿರಿಜಾ ವ್ಯಾಸ್ ಅವರು ಉದಯಪುರದಲ್ಲಿರುವ ತಮ್ಮ ಮನೆಯಲ್ಲಿ ದೇವರಿಗೆ ಆರತಿ ಮಾಡುವ ವೇಳೆ ಅವರ ಬಟ್ಟೆಗೆ ಬೆಂಕಿ ತಗುಲಿ ತೀವ್ರ ಸುಟ್ಟಗಾಯಗಳಾಗಿತ್ತು. ಕೂಡಲೇ ಅವರನ್ನು ಅಹಮದಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗುರುವಾಋ ಆಸ್ಪತ್ರೆಯಲ್ಲೇ ಗಿರಿಜಾ ವ್ಯಾಸ್ ಕೊನೆಯುಸಿರೆಳೆದಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಳೆಯಬ್ಬರ ; ಮನೆ ಕುಸಿದು ನಾಲ್ವರ ದುರ್ಮರಣ
ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಸಮಿತಿಯ ಮುಖ್ಯಸ್ಥೆಯೂ ಆಗಿದ್ದ ಗಿರಿಜಾ ವ್ಯಾಸ್ ರಾಜ್ಯ ಮತ್ತು ಕೇಂದ್ರ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೇ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆಯಾಗಿಯೂ ಕೆಲಸ ಮಾಡಿದ್ದರು. 1991ರಲ್ಲಿ ಉದಯಪುರ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಸಂಸತ್ತು ಪ್ರವೇಶಿಸಿದ್ದ ಗಿರಿಜಾ, ಅಂದಿನ ಪ್ರಧಾನಿಯಾಗಿದ್ದ ನರಸಿಂಹ ರಾವ್ ಅವರ ನೇತೃತ್ವದ ಸರ್ಕಾರದಲ್ಲಿ ಕೇಮದ್ರ ಸಚಿವೆಯಾಗಿದ್ದರು