ಸಾಂಪ್ರದಾಯಿಕ ಕೃಷಿಯಿಂದ ಬೇಸತ್ತ ರೈತರು, ಕಡಿಮೆ ಶ್ರಮದೊಂದಿಗೆ ದೀರ್ಘಾವಧಿಯಲ್ಲಿ ಹೆಚ್ಚಿನ ಲಾಭವನ್ನು ನೀಡುವ ಬೆಳೆಗಳತ್ತ ಮುಖ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇರುವ ಡ್ರ್ಯಾಗನ್ ಫೂಟ್ ಅನ್ನು ಬೆಳೆಸುವ ಮೂಲಕ ಅವರು ಉತ್ತಮ ಆದಾಯವನ್ನು ಗಳಿಸುತ್ತಿದ್ದಾರೆ. ಎಕರೆಗೆ ಒಂದು ಲಕ್ಷ ರೂಪಾಯಿವರೆಗೆ ಉಳಿದಿರುವುದರಿಂದ ಒಂದರ ನಂತರ ಒಂದು ಬೆಳೆ ಬೆಳೆಯಲು ಉತ್ಸಾಹ ತೋರಿಸುತ್ತಿದ್ದಾರೆ.
ನಿಮ್ಮದು ಬೋಳು ತಲೆಯಾ!? ಕೂದಲು ಬೆಳೆಯಲು ಈರುಳ್ಳಿ ಎಣ್ಣೆಯನ್ನು ಈ ರೀತಿ ಬಳಸಿ ಸಾಕು!
ಹೌದು ಚಿತ್ರದುರ್ಗ ತಾಲೂಕಿನ ಸಿರಿಗೆರೆ ಸಮೀಪದ ಪದವೀಧರ ಡ್ರ್ಯಾಗನ್ ಫ್ರೂಟ್ ಎಂಬ ಬೆಳೆಗೆ ಕೈಹಾಕುವುದರ ಮೂಲಕ ಸುತ್ತಮುತ್ತಲಿನ ರೈತರ ಗಮನ ಸೆಳೆದಿದ್ದಾರೆ. ಮೊದಲ ಬಾರಿಗೆ ಸಸಿನೆಟ್ಟು ಪ್ರಯೋಗಶೀಲ ಕೃಷಿಗೆ ಕೈ ಹಾಕಿದ್ದಾರೆ. ರಾಷ್ಟೀಯ ಮತ್ತು ಅಂತರಾಷ್ಟೀಯ ಮಾರುಕಟ್ಟೆಯಲ್ಲಿ ಡ್ರ್ಯಾಗನ್ ಫ್ರೂಟ್ಸ್‌ಗೆ ಬಹು ಬೇಡಿಕೆ ಇರುವ ಹಿನ್ನೆಲೆಯಲ್ಲಿ ಈ ಬೆಳೆ ಬೆಳೆಯಲು ರೈತ ಮುಂದಾಗಿದ್ದಾರೆ. ಎಕರೆಗೆ ನಾಲ್ಕು ಲಕ್ಷ ಬಂಡವಾಳ ಹಾಕಿ, ಐದು ವರ್ಷದಲ್ಲಿ 25 ಲಕ್ಷ ರೂಪಾಯಿ ಲಾಭ ಪಡೆದಿದ್ದಾರೆ.
ಬೆಳೆ ವಿಧಾನ : ಡ್ರ್ಯಾಗನ್ ಫ್ರೂಟ್ ಬೆಳೆಯಲು ಜಮೀನು ಹದ ಮಾಡಬೇಕು. ನಂತರ ಬದುಗಳಾಗಿ ನಿರ್ಮಿಸಿ, ಆ ಬದುಗಳ ಮೇಲೆ ಕಲ್ಲುಕಂಬ ಅಳವಡಿಸಬೇಕು. 1 ಕಲ್ಲುಕಂಬದ ಮೇಲೆ ಬೈಕಿನ ಹಳೆ ಟೈರ್‌ಗಳನ್ನು ಕಬ್ಬಿಣದ ಸರಳುಗಳ ಜೊತೆ ಜೋಡಿಸಬೇಕು. 1 ಕಂಬದಿಂದ 8 ಅಡಿ ಅಂತರದಲ್ಲಿ ಮತ್ತೊಂದು ಕಂಬ ಮತ್ತು ಬದುವಿಂದ ಬದುವಿಗೆ 12 ಅಡಿ ಅಂತರ ಇರಬೇಕು. 1 ಎಕರೆಗೆ 500 ಕಂಬಗಳು ಬರುತ್ತವೆ ಎನ್ನುತ್ತಾರೆ ರೈತ.
ನಾಟಿ : ಒಂದು ಕಂಬಕ್ಕೆ 4 ರಿಂದ 5 ಹಣ್ಣಿನ ಸಸಿಗಳಂತೆ ಒಟ್ಟು 2000 ಹೆಚ್ಚು ಕೆಂಪು, ಗುಲಾಬಿ ಬಣ್ಣದ ಉತ್ತಮ ತುಂಡುಗಳನ್ನು ತಂದು ನಾಟಿ ಮಾಡಲಾಗಿದೆ. ಇವುಗಳಿಗೆ ಹನಿ ನೀರಾವರಿ ಮೂಲಕ ನೀರುಣಿಸಲಾಗುತ್ತಿದೆ. ಒಂದು ಎಕರೆಗೆ 5 ರಿಂದ 6 ಲಕ್ಷ ಖರ್ಚು ಮಾಡಿದ್ದು, ನಿಧಾನವಾಗಿ ಫಲ ಬರಲಿದೆ ಎಂಬುದು ರೈತನ ಅಭಿಪ್ರಾಯ.
ಅವಧಿ ಎಷ್ಟು : 15 ರಿಂದ ರಿಂದ 18 ತಿಂಗಳ ಒಳಗೆ ಡ್ರ್ಯಾಗನ್ ಹಣ್ಣು ಕೈಗೆ ಸಿಗುತ್ತದೆ. ಮಹಾರಾಷ್ಟ್ರದಿಂದ 1 ಸಸಿಗೆ 60 ರೂ.ಕೊಟ್ಟು ತರಲಾಗಿದೆ. ಕಡಿಮೆ ನೀರಿನಲ್ಲಿ ಈ ಬೆಳೆ ಬೆಳೆಯಬಹುದು. ಕೊಟ್ಟಿಗೆ ಗೊಬ್ಬರ, ಕೋಳಿ ಗೊಬ್ಬರ ಸೇರಿದಂತೆ ಅಗತ್ಯ ಪೋಷಕಾಂಶಗಳ ಗೊಬ್ಬರ ಅಗತ್ಯವಿದೆ.
ಬೇಡಿಕೆ ಹೆಚ್ಚು ಹಾಗೂ ಮಾರುಕಟ್ಟೆ ಸೌಲಭ್ಯ : ಡ್ರ್ಯಾಗನ್ ಪ್ರೂಟ್ಸ್ ಥೈಲ್ಯಾಂಡ್, ಆಸ್ಟ್ರೇಲಿಯಾ, ಶ್ರೀಲಂಕಾ, ಅಮೆರಿಕಾ ದೇಶಗಳಲ್ಲಿ ಹೆಚ್ಚು ಬೇಡಿಕೆ ಇದೆ. ಈಗ ಮಾರುಕಟ್ಟೆಯಲ್ಲಿ 1 ಕೆಜಿ ಡ್ರ್ಯಾಗನ್ ಪ್ರೂಟ್ಸ್‌ಗೆ 180 ರಿಂದ 250 ವರೆಗೆ ಇದೆ. ಬಾಂಬೆ, ಬೆಂಗಳೂರು, ಮಹಾರಾಷ್ಟ ಮುಂತಾದ ಕಡೆಗಳಿಂದ ಬೇಡಿಕೆದಾರರು ಕೊಳ್ಳಲು ಮುಂದೆ ಬರುತ್ತಿದ್ದಾರೆ.