ಹುಬ್ಬಳ್ಳಿ : ರೇಷನ್ ಕಾರ್ಡ್ ಮಾಡಿಸಿಕೊಡ್ತೀನಿ ಎಂದು ಹಣ ಪಡೆದು ವಂಚಿಸಿದವನಿಗೆ ಹಿಗ್ಗಾ ಮುಗ್ಗಾ ಥಳಿಸಿದದ ಘಟನೆ ನಡೆದಿದೆ. ಹುಬ್ಬಳ್ಳಿಯ ನೆಹರೂ ಮೈದಾನದ ಬಳಿ ಅಹಾರ ಇಲಾಖೆಯ ಏಜೆಂಟ್ ಎಂದು ಸಾರ್ವಜನಿಕರಿಂದ ರೇಷನ್ ಕಾರ್ಡ್ ಮಾಡಿಸಲು ಒಂದು ಸಾವಿರ, ಎರಡು ಸಾವಿರ ಪಡೆದು ಯಾಮಾರಿಸಿದ್ದವನಿಗೆ ಜನರೇ ಥಳಿಸಿದ್ದಾರೆ.
ಅಹಾರ ಇಲಾಖೆಯ ಕೂಗಳತೆ ದೂರದಲ್ಲಿ ಮಲೀಕ್ ಅನ್ನೋ ಏಜೆಂಟ್ ನಿಗೆ ಸಾರ್ವಜನಿಕರು ಹಿಗ್ಗಾ ಮುಗ್ಗಾ ಥಳಸಿದ್ದಾರೆ. ಸುಮಾರು 30 ಕ್ಕೂ ಹೆಚ್ಚು ಸಾರ್ವಜನಿಕರ ಬಳಿ ರೇಷನ್ ಕಾರ್ಡ್ ಮಾಡಿಸಿಕೊಡ್ತೀನಿ ಎಂದು ಮಲೀಕ್ ಹಣ ಪಡೆದಿದ್ದ,ಹಣ ಪಡೆದು ಮೂರು ತಿಂಗಳಾದರೂ ರೇಷನ್ ಕಾರ್ಡ್ ಮಾಡಸಿಕೊಟ್ಟಿಲ್ಲ, ಹೀಗಾಗಿ ರೊಚ್ಚಿಗೆದ್ದ ಜನ,ನಕಲಿ ಏಜೆಂಟ್ ಗೆ ಸಾರ್ವಜನಿಕರು ಥಳಿಸಿದ್ದಾರೆ.
ಮಹಿಳೆ ಕಿಡ್ನ್ಯಾಪ್ ಕೇಸ್: ಭವಾನಿ ರೇವಣ್ಣಗೆ ಬಿಗ್ ರಿಲೀಫ್ ಕೊಟ್ಟ ಹೈಕೋರ್ಟ್!
ಸರ್ಕಾರ ಬಡವರ ಅನುಕೂಲಕ್ಕೆ ರೇಷನ್ ಕಾರ್ಡ್ ನೀಡ್ತಾ ಇದ್ರೆ, ಕೆಲವರು ಅದನ್ನೆ ದಂಧೆ ಮಾಡಿಕೊಂಡಿದ್ದಾರೆ. ಇನ್ನು ಇಂತಹ ನಕಲಿ ಏಜೆಂಟ್ ಗಳಿಗೆ ಅಹಾರ ಇಲಾಖೆ ಅಧಿಕಾರಿಗಳು ಸಾಥ್ ನೀಡತಿದಾರೆ. ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆಯ ಪಕ್ಕ ಇರೋ ಅಹಾರ ಇಲಾಖೆಯ ಕೆಲ ಅಧಿಕಾರಿಗಳು ಮಲೀಕ್ ನಂತಹ ನಕಲಿ ಏಜೆಂಟ್ ಗೆ ಸಾಥ್ ನೀಡತಿರೋ ಆರೋಪ ಕೇಳಿ ಬಂದಿದೆ.