ಬೆಂಗಳೂರು: ನಾಳೆ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯ ನಡೆಯಲಿದೆ. ಈಗಾಗಲೇ ಇಂಡಿಯನ್ ಪ್ರೀಮಿಯರ್ ಲೀಗ್ ನ ಫೈನಲಿಸ್ಟ್ಗಳು ಕನ್ಫರ್ಮ್ ಆಗಿದ್ದಾರೆ. ಈ ಬಾರಿಯ ಐಪಿಎಲ್ ಬಿಗ್ ಫೈಟ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಸಂದರ್ಭದಲ್ಲಿ ಇದಾಗಲೇ ಫೈನಲ್ ಪಂದ್ಯದ ಜೋಶ್ ಶುರುವಾಗಿದ್ದು,
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫೈನಲ್ ತಲುಪಿರುವ ಹಿನ್ನಲೆ RCB ಅಭಿಮಾನಿಯಿಂದ ಉಚಿತ ಚಾಟ್ಸ್ ವಿತರಣೆ ಹಮ್ಮಿಕೊಳ್ಳಲಾಗಿದೆ. ಈ ಸಲ ಕಪ್ ನಮ್ದು ಆದರೆ ಒನ್ ಡೇ ಪಾನಿಪುರಿ ನಿಮ್ದು ಎಂದು ಬೋರ್ಡ್ ಹಾಕಿದ್ದಾರೆ.
ನಿಮಗೆ ಈ ಲಕ್ಷಣಗಳು ಕಾಣ್ತಿದ್ಯಾ!? ಹಾಗಿದ್ರೆ ಲಿವರ್ ಕ್ಯಾನ್ಸರ್ ಬಂದಿದೆ ಎಂದರ್ಥ… ಕೂಡಲೇ ಡಾಕ್ಟರ್ ಭೇಟಿ ಮಾಡಿ!
ಹೌದು ಈ ಸಲ ಆರ್ಸಿಬಿ ಕಪ್ ಗೆದ್ದಿದ್ದೇ ಆದರೆ ಎಲ್ಲರಿಗೂ ಪಾನಿಪೂರಿ, ಮಸಾಲಪೂರಿ, ಭೇಲ್ ಪುರಿ.. ಫ್ರೀ.. ಫ್ರೀ.. ಫ್ರೀ.. ಎಂದು ಅಂಗಡಿ ಮುಂದೆ ಬೋರ್ಡ್ ಹಾಕಿದ್ದಾರೆ. ಅಂಗಡಿ ಮಾಲೀಕ ಕೂಡ ಆರ್ಸಿಬಿ ದೊಡ್ಡ ಅಭಿಮಾನಿಯಾಗಿದ್ದು, ಆರ್ಸಿಬಿ ಗೆಲುವನ್ನು ಸಂಭ್ರಮಿಸಲು ಈ ಉಚಿತ ಚಾಟ್ಸ್ ವಿತರಣೆ ಎಂದಿದ್ದಾರೆ.
RCB ಮ್ಯಾಚ್ ಹಿನ್ನೆಲೆ ಉಚಿತ ಚಾಟ್ಸ್ ವಿತರಣೆಗೆ ಮುಂದಾಗಿರುವುದು ಅನಿಲ್ ಚಾಟ್ಸ್ ಸೆಂಟರ್. ಇದು ಇರುವುದು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿ. ಐಪಿಲ್ ಫೈನಲ್ ನಲ್ಲಿ ಆರ್ ಸಿಬಿ ಗೆದ್ರೆ ಉಚಿತವಾಗಿ ಚ್ಯಾಟ್ಸ್ ಹಂಚಿಕೆ ಮಾಡಲಾಗುತ್ತದೆ ಎಂದು ಅನಿಲ್ ಚಾಟ್ಸ್ ಸೆಂಟರ್ ಭರವಸೆ ನೀಡಿದ್ದಾರೆ.