ಆನೇಕಲ್ ತಾಲೂಕಿನ ಶ್ರೀರಾಮ ಕುಟೀರದಲ್ಲಿ ಐದು ದಿನಗಳ ಕಾಲ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ದ್ವಿಚಕ್ರ ವಾಹನಗಳ ಮೇಳ ಕಾರ್ಯಕ್ರಮಕ್ಕೆ ತೆರೆ ಬಿದ್ದಿದೆ. ಇನ್ನು ಬಸವಣ್ಣ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ವೆಂಕಟೇಶ್ವರ ಮೋಟರ್ಸ್ ಮಾಲೀಕರಾದ ನಂಜುಂಡಪ್ಪ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಇನ್ನು ಡ್ರೈವ್ ಎಕ್ಸ್ ಮತ್ತು ವೆಂಕಟೇಶ್ವರ ಮೋಟರ್ಸ್ ಮಾಲೀಕರಾದ ನಂಜುಂಡಪ್ಪ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಇನ್ನು ಐದು ದಿನಗಳ ಹಿಂದೆ ನೆತ್ರಾ ತಪಾಸನ ಮಾಡಲಾಗಿತ್ತು, ಅ ವೇಳೆ ಯಾರಿಗೆಲ್ಲ ಕನ್ನಡಕದ ಅವಶ್ಯಕತೆ ಇತ್ತು ಅಂತವರಿಗೆ 300ಕ್ಕೂ ಹೆಚ್ಚು ಜನರಿಗೆ ಉಚಿತ ಕನ್ನಡಕ ನೀಡಲಾಯಿತು.. ಇನ್ನು ಐದು ದಿನಗಳಿಂದ ಸಾವಿರಾರು ಜನರಿಗೆ ಉಚಿತ ಆರೋಗ್ಯ ತಪಾಸಣೆ ಮಾಡಿದ್ದು ,
ದ್ವಿಚಕ್ರ ವಾಹನಗಳ ಮೇಳದಲ್ಲಿ ಸಾವಿರಾರು ಮಂದಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ ಈ ವೇಳೆ ಮಾತನಾಡಿದ ವೆಂಕಟೇಶ್ವರ ಮೋಟರ್ಸ್ ಮಾಲೀಕರ ನಂಜುಂಡಪ್ಪ ಮಾತನಾಡಿ ಐದು ದಿನಗಳಿಂದ ಉಚಿತ ಆರೋಗ್ಯ ಶಿಬಿರ ಮತ್ತು ದ್ವಿಚಕ್ರ ವಾಹನಗಳ ಮೇಳ ಕಾರ್ಯಕ್ರಮ ತುಂಬಾ ಯಶಸ್ವಿಯಾಗಿ ನಡೆದಿದೆ ,
kshaya Tritiya 2025: ಅಕ್ಷಯ ತೃತೀಯದಂದೇ ಚಿನ್ನ ಖರೀದಿಸಲು ಕಾರಣವೇನು..? ಇಲ್ಲಿದೆ ಮಾಹಿತಿ
ಜನರು ಕೂಡ ತುಂಬಾ ರೆಸ್ಪಾನ್ಸ್ ಮಾಡಿದ್ದಾರೆ , ನಾನು ಕೂಡ ರೈತ ಕುಟುಂಬದಿಂದ ಬಂದವನು ಕಷ್ಟ ಗೊತ್ತಿತ್ತು ಹಾಗಾಗಿ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜನೆ ಮಾಡಿದ್ದೆ ಖುಷಿ ತಂದಿದೆ , ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ಸಾರ್ವಜನಿಕರಿಗೆ ನೆರವಾಗಲು ಕೆಲಸಗಳನ್ನು ಮಾಡುತ್ತೇನೆ ಎಂದು ವೆಂಕಟೇಶ್ವರ ಮೋಟರ್ಸ್ ಮಾಲಿಕರಾದ ನಂಜುಂಡಪ್ಪ ತಿಳಿಸಿದರು..