ವಿಜಯಪುರ: ಬೈಕ್ ಜಾಥಾ ನಡೆಸಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲು ನಡೆಸಲು ಬಂದಿದ್ದ ಕಾಂಗ್ರೆಸ್ ಕಾರ್ಯಕರ್ತರ ಬೈಕ್ ಗೆ ಫ್ರೀ ಪೆಟ್ರೋಲ್ ಭಾಗ್ಯ ನೀಡಲಾಗಿದೆ.
ವಿಜಯಪುರ ಜಿಲ್ಲೆ ಕೊಲ್ಹಾರ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಡಿಸಿಎಂ ಡಿಕೆ ಶಿವಕುಮಾರ್ ಬಂದಿದ್ದರು. ಡಿಕೆಶಿ ಸ್ವಾಗತಿಸಲು ನೂರಾರು ಬೈಕ್ ಗಳನ್ನು ಕರೆಸಿಕೊಳ್ಳಲಾಗಿತು. ಡಿ.ಕೆ ಶಿವಕುಮಾರ್ ಸ್ವಾತಕ್ಕೂ ಮುನ್ನ ಉಚಿತ ಪೆಟ್ರೋಲ್ ಹಾಕಿಸಲು ಬೈಕ್ ಸವಾರರು ಮುಗಿಬಿದ್ದಿದ್ದರು.
ಕೊಲ್ಹಾರ ಪಟ್ಟಣದ ತಹಶೀಲ್ದಾರ್ ಕಚೇರಿ ಬಳಿಯಿರುವ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳಲು ಸವಾರರು ಸಾಲುಗಟ್ಟಿ ನಿಂತ ವಿಡಿಯೋ ವೈರಲ್ ಆಗಿದೆ.