ಬೆಂಗಳೂರು: ರಾಜ್ಯದಲ್ಲಿ ಒಂದೊಂದಾಗಿ ಎಲ್ಲರದ ದರದಲ್ಲೂ ಏರಿಕೆ ಆಗುತ್ತಿದೆ. ಮೊನ್ನೆಯಷ್ಟೆ ಹಾಲಿನ ಬೆಲೆ ಏರಿಕೆಯಾಯ್ತು. ಇದೀಗ ಬೆಂಗಳೂರಿನ ಅನೇಕ ದರ್ಶಿನಿಗಳಲ್ಲಿ, ಹೋಟೆಲ್ಗಳಲ್ಲಿ ಹಾಗೂ ಅಂಗಡಿಗಳಲ್ಲಿ ಕಾಫಿ ಮತ್ತು ಚಹಾ ದರ ಏರಿಕೆಯಾಗಿದೆ.
3 ರೂಪಾಯಿಯಿಂದ ತೊಡಗಿ 5 ರೂಪಾಯಿವರೆಗೆ ದರ ಹೆಚ್ಚಳವಾಗಿದೆ. ಆದರೆ, ಕಾಫಿ ಮತ್ತು ಚಹಾ ದರ ಏರಿಕೆ ವಿಚಾರವಾಗಿ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಈವರಿಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.
ಮಧುಮೇಹಿಗಳ ಗಮನಕ್ಕೆ: ಶುಗರ್ ಕಂಟ್ರೋಲ್ ಮಾಡಲು ಖಾಲಿ ಹೊಟ್ಟೆಗೆ ಈ ಒಣ ಹಣ್ಣು ಸೇವಿಸಿ!
ನಂದಿನಿ ಹಾಲಿನ ದರ ಪ್ರತಿ ಲೀಟರ್ಗೆ ನಾಲ್ಕು ರೂಪಾಯಿ ಹೆಚ್ಚಳವಾಗಿರುವುದರಿಂದ ಅನಿವಾರ್ಯವಾಗಿ ಕಾಫಿ ಮತ್ತು ಚಹಾದ ದರ ಹೆಚ್ಚಳ ಮಾಡಬೇಕಾಗಿದೆ. ಅದೇ ರೀತಿ ಇತರ ಹಾಲಿನ ಉತ್ಪನ್ನಗಳ ದರ ಕೂಡ ಏರಿಕೆ ಮಾಡಬೇಕಾಗುತ್ತದೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿಸಿ ರಾವ್ ಕೆಲವು ದಿನಗಳ ಹಿಂದೆ ಹೇಳಿಕೆ ನೀಡಿದ್ದರು.
ಕಾಫಿ ಪುಡಿಯ ದರ ಕೂಡ ಕೆಲವು ವಾರಗಳ ಹಿಂದೆ ಹೆಚ್ಚಾಗಿತ್ತು. ಇದು ಕೂಡ ಕಾಫಿ ದರ ಏರಿಕೆಗೆ ಕಾರಣವಾಗಿದೆ. ಫೆಬ್ರವರಿ ಕೊನೆಯ ವಾರದ ವೇಳೆಗೆ ಹುರಿದ ಕಾಫಿ ಪುಡಿಯ ಬೆಲೆ ಪ್ರತಿ ಕೆಜಿಗೆ 100 ರೂ.ಗಳಷ್ಟು ಹೆಚ್ಚಾಗಿತ್ತು. ಇದು ಮತ್ತೆ ಕೆಜಿಗೆ 100 ರೂ.ಗಳಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಇತ್ತೀಚೆಗೆ ಇಂಡಿಯನ್ ಕಾಫಿ ರೋಸ್ಟರ್ಸ್ ಅಸೋಸಿಯೇಷನ್ ಮತ್ತು ಕಾಫಿ ಮಂಡಳಿಯ ಮೂಲಗಳು ತಿಳಿಸಿದ್ದವು.