ಶಿವಮೊಗ್ಗ: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ಗುಂಡಿನ ದಾಳಿಗೆ ಬಲಿಯಾಗಿದ್ದ ಉದ್ಯಮಿ ಮಂಜುನಾಥ್ ರಾವ್ ಅವರ ಅಂತ್ಯಕ್ರಿಯೆ ನೆರವೇರಿತು.
ಗುರುವಾರ ಬೆಳಗ್ಗೆ ಮೃತದೇಹ ಬೆಂಗಳೂರಿಗೆ ತರಲಾಯಿತು. ಬಳಿಕ ಆಂಬುಲೆನ್ಸ ಮೂಲಕ ಶಿವಮೊಗ್ಗಕ್ಕೆ ಮಂಜುನಾತ್‌ಥ್ ಅವರ ಮೃತದೇಹ ರವಾನಿಸಲಾಯಿತು. ಶಿವಮೊಗ್ಗದಲ್ಲಿರುವ ಮಂಜುನಾಥ್ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಬಳಿಕ ಶಿವಮೊಗ್ಗದ ಚಿತಾಗಾರದಲ್ಲಿ ವಿಧಿವಿಧಾನಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಮಂಜುನಾಥ್ ರಾವ್ ಅವರ ಮಗ ಅಭಿ ಜೈನಿಂದ ಅಗ್ನಿ ಸ್ಪರ್ಶ ಮಾಡಿದರು. ಮೃತರಿಗೆ ಜಿಲ್ಲಾಡಳಿತ ವತಿಯಿಂದ ಸರ್ಕಾರಿ ಗೌರವ ಸಲ್ಲಿಸಲಾಯಿತು. ರಾಷ್ಟ್ರಗೀತೆಯೊಂದಿಗೆ ಮೂರು ಸುತ್ತು ಕುಶಾಲ ತೋಪು ಹಾರಿಸಿ ಪೊಲೀಸರು ಗೌರವ ವಂದನೆ ಸಲ್ಲಿಸಿದರು.
ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ; ಶ್ರೀನಗರದಲ್ಲಿ ಸಿಲುಕಿದ್ದ 178 ಕನ್ನಡಿಗರ ಏರ್‌ಲಿಫ್ಟ್
ಬ್ರಾಹ್ಮಣ ಸಮುದಾಯದಂತೆ ವಿಧಿ ವಿಧಾನ ನೆರವೇರಿದ್ದು, ಅಂತ್ಯಸಂಸ್ಕಾರದ ವೇಳೆ ಮಂಜುನಾಥ್ ರಾವ್ ಪಲ್ಲವಿ ಪಾದದ ಮೇಲೆ ತಲೆ ಇಟ್ಟು ಕಣ್ಣೀರು ಹಾಕಿ, ವಿದಾಯ ಹೇಳಿದರು.